soraba news update | ಸೊರಬ : ನೂರಾರು ಅಡಕೆ ಮರಗಳು ತೆರವು  – ಕಣ್ಣೀರಿಟ್ಟ ರೈತರು!

Soraba: Areca Nut Trees Cleared – Farmers Left in Tears! | Soraba, November 3: On November 3, Member of Parliament B. Y. Raghavendra and former Minister Haratalu Halappa visited Tevarakoppa village in the Anavatti Hobli of Soraba Taluk Shivamogga District, to inspect the site where areca nut trees had been cleared.

ಸೊರಬ (soraba), ನವೆಂಬರ್ 03: ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಆನವಟ್ಟಿ ಹೋಬಳಿ ತೇವರಕೊಪ್ಪ ಗ್ರಾಮದಲ್ಲಿ ಅಡಕೆ ಮರಗಳನ್ನು ತೆರವುಗೊಳಿಸಿದ ಸ್ಥಳಕ್ಕೆ, ನವೆಂಬರ್ 03 ರಂದು ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಭೇಟಿಯಿತ್ತು ಪರಿಶೀಲನೆ ನಡೆಸಿದರು.

ಈ ವೇಳೆ ಅಡಕೆ ಮರಗಳನ್ನು ಕಳೆದುಕೊಂಡ ರೈತರು ಸಂಸದರ ಎದುರು ಕಣ್ಣೀರಿಟ್ಟರು. ಏಕಾಏಕಿ ಅಧಿಕಾರಿಗಳ ತಂಡ ಆಗಮಿಸಿ, ನೂರಾರು ಅಡಕೆ ಮರಗಳನ್ನು ತೆರವುಗೊಳಿಸಿದ್ದಾರೆ. ನಮಗೆ ಅನ್ಯಾಯ ಮಾಡಿದ್ದಾರೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಈ ವೇಳೆ ಸಂಸದರು ಮಾತನಾಡಿ, ‘ಸುಮಾರು 15 ವರ್ಷಗಳ ಕಾಲ ಕಷ್ಟಪಟ್ಟು ಬೆಳೆಸಿದ್ದ ಫಸಲು ನೀಡುತ್ತಿದ್ದ ಅಡಿಕೆ ಮರಗಳನ್ನು ಅಧಿಕಾರಿಗಳು ತೆರವುಗೊಳಿಸಿರುವ ಘಟನೆ ತೀವ್ರ ನೋವು ತಂದಿದೆ’

ರೈತರ ಕುಟುಂಬಗಳ ಜೀವನೋಪಾಯಕ್ಕೆ ಆಧಾರವಾಗಿದ್ದ ಅಡಕೆ ಮರಗಳನ್ನು ಯಾವುದೇ ಪೂರ್ವ ನೋಟಿಸ್ ನೀಡದೆ ಕಡಿದು ಹಾಕಿರುವುದರಿಂದ ಅಪಾರ ಆರ್ಥಿಕ ನಷ್ಟ ಉಂಟಾಗಿದೆ. ವರ್ಷಗಳ ಪರಿಶ್ರಮ ಮತ್ತು ಬೆವರಿನ ಫಲವನ್ನು ಕಳೆದುಕೊಂಡಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬಿಜೆಪಿ ಸೊರಬ ಮಂಡಲದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರಿಗೆ ಬೆಂಬಲ ವ್ಯಕ್ತಪಡಿಸಲಾಯಿತು. ಸದರಿ ಪ್ರಕರಣದ ಕುರಿತಂತೆ ನಿಷ್ಪಕ್ಷಪಾತ ಉನ್ನತ ಮಟ್ಟದ ತನಿಖೆ ನಡೆಸಿ, ರೈತರಿಗೆ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

Soraba: Areca Nut Trees Cleared – Farmers Left in Tears! | Soraba, November 3: On November 3, Member of Parliament B. Y. Raghavendra and former Minister Haratalu Halappa visited Tevarakoppa village in the Anavatti Hobli of Soraba Taluk, Shivamogga District, to inspect the site where areca nut trees had been cleared.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *