shimoga court news | ಶಿವಮೊಗ್ಗ : ಹಣಕ್ಕಾಗಿ ಕೊಲೆ ಪ್ರಕರಣ – 7 ವರ್ಷ ಕಠಿಣ ಜೈಲು ಶಿಕ್ಷೆ!

Shivamogga: Murder for Money Case – 7 Years of Rigorous Imprisonment! | Shivamogga, November 20: In a murder case, the 3rd Additional District and Sessions Court in Shivamogga has sentenced an individual to 7 years of rigorous imprisonment and imposed a fine of Rs 10,000.

ಶಿವಮೊಗ್ಗ  (shivamogga), ನವೆಂಬರ್ 20: ಕೊಲೆ ಪ್ರಕರಣದಲ್ಲಿ ವ್ಯಕ್ತಿಯೋರ್ವನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ, ಶಿವಮೊಗ್ಗದ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಫೈರೋಜ್ ಖಾನ್ (39) ಶಿಕ್ಷೆಗೊಳಗಾದ ಅಪರಾಧಿ ಎಂದು ಗುರುತಿಸಲಾಗಿದೆ. ನವೆಂಬರ್ 19 ರಂದು ನ್ಯಾಯಾಧೀಶರಾದ ಯಶವಂತ ಕುಮಾರ್ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಮಮತಾ ಬಿ ಎಸ್ ಅವರು ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ : 27-04-2025 ರಂದು ರಾತ್ರಿ ಶಿವಮೊಗ್ಗ ನಗರದ ಬಿ.ಹೆಚ್. ರಸ್ತೆಯ ಸಿಎಂ ಬಾರ್ ಹತ್ತಿರ ಶಶಿನಾಯ್ಕ್ ಮತ್ತು ನಾಗೇಶ್ ನಾಯ್ಕ್ ರವರು ಹೋಗುತ್ತಿದ್ದಾಗ, ಅಪರಾಧಿ ಫೈರೋಜ್ ಖಾನ್ ಇವರನ್ನು ತಡೆದು ನಿಲ್ಲಿಸಿದ್ದ.

ಹಣ ನೀಡುವಂತೆ ಒತ್ತಾಯಿಸಿದ್ದ. ಹಣವಿಲ್ಲವೆಂದು ತಿಳಿಸಿದ ಶಶಿನಾಯ್ಕ್ ರೊಂದಿಗೆ ಜಗಳವಾಡಿದ್ದ. ನಂತರ ಬ್ಯಾಗಿನಲ್ಲಿದ್ದ ಎರಡು ಚಾಕುಗಳಿಂದ ಶಶಿನಾಯ್ಕ್ ನ ಕುತ್ತಿಗೆ, ಭುಜ, ಹೊಟ್ಟೆ ಹಾಗೂ ಬೆನ್ನಿನ ಭಾಗಗಳಿಗೆ ಇರಿದು ಕೊಲೆ ಮಾಡಿದ್ದ.

ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 127/2025, ಕಲಂ 352, 351(2), 109(1), 103(1), 238 BNS ರೀತ್ಯ ಪ್ರಕರಣ ದಾಖಲಾಗಿತ್ತು. ಅಂದಿನ ಇನ್ಸ್’ಪೆಕ್ಟರ್ ರವಿ ಪಾಟೀಲ್ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.

Shivamogga: Murder for Money Case – 7 Years of Rigorous Imprisonment! | Shivamogga, November 20: In a murder case, the 3rd Additional District and Sessions Court in Shivamogga has sentenced an individual to 7 years of rigorous imprisonment and imposed a fine of Rs 10,000.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *