ಜೆಸಿಬಿ ಮೂಲಕ ಎಟಿಎಂ ಯಂತ್ರ ಕಳವಿಗೆ ಯತ್ನಿಸಿದ ಐನಾತಿ ಕಳ್ಳ : ಶಿವಮೊಗ್ಗದಲ್ಲೊಂದು ಸಿನಿಮೀಯ ಘಟನೆ!

ಶಿವಮೊಗ್ಗ, ಜು. 26: ಐನಾತಿ ಕಳ್ಳನೋರ್ವ, ಜೆಸಿಬಿ ಮೂಲಕ ಎಟಿಎಂ ಯಂತ್ರವನ್ನೇ ಕದ್ದೆಯ್ಯೊಲು ವಿಫಲ ಯತ್ನ ನಡೆಸಿದ ಸಿನಿಮೀಯ ಶೈಲಿಯ ಘಟನೆಯೊಂದು, ಶಿವಮೊಗ್ಗ ನಗರದ ವಿನೋಬನಗರದಲ್ಲಿ ತಡರಾತ್ರಿ ನಡೆದಿದೆ.

100 ಅಡಿ ರಸ್ತೆ ಶಿವಾಲಯ ಎದುರಿನ ಪೂರ್ಯಾನಾಯ್ಕ್ ಪೆಟ್ರೋಲ್ ಬಂಕ್ ಸಮೀಪದ ಕಟ್ಟಡವೊಂದರಲ್ಲಿರುವ, ಆಕ್ಸೆಸ್ ಬ್ಯಾಂಕ್ ಗೆ ಸೇರಿದ ಎಟಿಎಂ ಕೇಂದ್ರದಲ್ಲಿ ಈ ಘಟನೆ ನಡೆದಿದೆ.

ಜೆಸಿಬಿ ಮೂಲಕ ಎಟಿಎಂ ಯಂತ್ರ ಕಳವಿಗೆ ಯತ್ನಿಸಿದ ಐನಾತಿ ಕಳ್ಳ : ಶಿವಮೊಗ್ಗದಲ್ಲೊಂದು ಸಿನಿಮೀಯ ಘಟನೆ!

ಪರಾರಿಯಾದ!: ದುರಸ್ತಿ ಕಾರಣದಿಂದ, ಪೆಟ್ರೋಲ್ ಬಂಕ್ ಸಮೀಪ, ಕಳೆದ ಕೆಲ ದಿನಗಳಿಂದ ಜೆಸಿಬಿ ವಾಹನ ನಿಲ್ಲಿಸಲಾಗಿತ್ತು. ಕಿಡಿಗೇಡಿಯು ಸದರಿ ಜೆಸಿಬಿಯನ್ನು ನಕಲಿ ಕೀ ಬಳಸಿ ಚಾಲನೆಗೊಳಿಸಿದ್ದಾನೆ. ನಂತರ ಎಟಿಎಂ ಯಂತ್ರ ಕದ್ದೊಯ್ಯುವ ಯತ್ನ ನಡೆಸಿದ್ದಾನೆ ಎನ್ನಲಾಗಿದೆ.

ಈ ವೇಳೆ ಅದೇ ರಸ್ತೆಯಲ್ಲಿ ಟ್ರಾಫಿಕ್ ಸರ್ಕಲ್ ಇನ್ಸ್’ಪೆಕ್ಟರ್ ಸಂತೋಷ್ ಕುಮಾರ್ ಅವರ ಗಸ್ತು ವಾಹನ ಆಗಮಿಸಿದೆ. ಜೆಸಿಬಿ ಕಾರ್ಯಾಚರಣೆ ಗಮನಿಸಿ ಅನುಮಾನದ ಮೇರೆಗೆ ಸಂತೋಷ್ ಕುಮಾರ್ ಅವರು ಸ್ಥಳಕ್ಕೆ ತೆರಳುತ್ತಿದ್ದಂತೆ, ಜೆಸಿಬಿ ವಾಹನ ಬಿಟ್ಟು ಕಳ್ಳ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಜೆಸಿಬಿ ಮೂಲಕ ಎಟಿಎಂ ಯಂತ್ರ ಕಳವಿಗೆ ಯತ್ನಿಸಿದ ಐನಾತಿ ಕಳ್ಳ : ಶಿವಮೊಗ್ಗದಲ್ಲೊಂದು ಸಿನಿಮೀಯ ಘಟನೆ!

ಘಟನಾ ಸ್ಥಳಕ್ಕೆ ವಿನೋಬನಗರ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಆರೋಪಿಯ ಪತ್ತೆಗೆ ಕ್ರಮಕೈಗೊಂಡಿದ್ದು, ಇನ್ನಷ್ಟೆ ಹೆಚ್ಚಿನ ವಿವರಗಳು ತಿಳಿದುಬರಬೇಕಾಗಿದೆ.

ಕಾವಲುಗಾರನಿಲ್ಲ: ಸದರಿ ಎಟಿಎಂ ಕೇಂದ್ರವು ದಿನದ 24 ಗಂಟೆಯು ತೆರೆದಿರುತ್ತದೆ. ಸದರಿ ಕೇಂದ್ರಕ್ಕೆ ಕಾವಲುಗಾರರ ನಿಯೋಜನೆ ಮಾಡಿರಲಿಲ್ಲ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೆ ಹೆಚ್ಚಿನ ವಿವರಗಳು ಲಭ್ಯವಾಗಬೇಕಾಗಿದೆ.

ಜೆಸಿಬಿ ಮೂಲಕ ಎಟಿಎಂ ಯಂತ್ರ ಕಳವಿಗೆ ಯತ್ನಿಸಿದ ಐನಾತಿ ಕಳ್ಳ : ಶಿವಮೊಗ್ಗದಲ್ಲೊಂದು ಸಿನಿಮೀಯ ಘಟನೆ!

ಜೆಸಿಬಿ ಬಳಕೆ ಮಾಡಿದ್ದರಿಂದ, ಎಟಿಎಂ ಯಂತ್ರದ ಮೇಲ್ಭಾಗವು ಸಂಪೂರ್ಣ ನಜ್ಜುಗುಜ್ಜಾಗಿದೆ. ಎಟಿಎಂ ಕೇಂದ್ರದಲ್ಲಿರುವ ಸಿಸಿ ಕ್ಯಾಮರಾದಲ್ಲಿ ಕಳವು ಯತ್ನದ ಕೃತ್ಯ ಸೆರೆಯಾಗಿದೆ. ಪೊಲೀಸರು ಸದರಿ ದೃಶ್ಯಾವಳಿ ಪರಿಶೀಲಿಸುತ್ತಿದ್ದು, ಆರೋಪಿಯ ಪತ್ತೆಗೆ ಕ್ರಮಕೈಗೊಂಡಿದ್ದಾರೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →