
ಶಿವಮೊಗ್ಗ : ಹೊಸಮನೆ ಬಡಾವಣೆಯಲ್ಲಿ ಬಾಬು ಜಗಜೀವನ್ ರಾಮ್ ಸಭಾಂಗಣ ಉದ್ಘಾಟನೆ
ಶಿವಮೊಗ್ಗ, ನ. 9: ಶಿವಮೊಗ್ಗದ ಹೊಸಮನೆ ಬಡಾವಣೆಯಲ್ಲಿ ಮಹಾನಗರ ಪಾಲಿಕೆ ಅನುದಾನದಲ್ಲಿ ನಿರ್ಮಿಸಲಾಗಿರುವ ಬಾಬು ಜಗಜೀವನ್ ರಾಮ್ ಸಭಾಂಗಣದ ಉದ್ಘಾಟನೆಯನ್ನು, ಗುರುವಾರ ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನ ಕುಮಾರ್ ನೆರವೇರಿಸಿದರು
ನಂತರ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು. ‘ಕಾರ್ಪೋರೇಟರ್ ರೇಖಾ ರಂಗನಾಥ್ ಅವರು ಹೊಸಮನೆ ಬಡಾವಣೆಯ ಜ್ವಲಂತ ಸಮಸ್ಯೆಗಳಾದ ರಾಜಕಾಲುವೆ ಕಾಮಗಾರಿ, ಕನ್ಸರ್ ವೆನ್ಸಿ, ರಸ್ತೆ ಅಭಿವೃದ್ಧಿ, ಬೀದಿ ದೀಪ ಸೇರಿದಂತೆ ಹಲವು ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವ ಮೂಲಕ ಬಡಾವಣೆಯನ್ನು ಸ್ಮಾರ್ಟ್ ಆಗಿಸುವ ಕಾರ್ಯ ನಡೆಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾರ್ಡ್ ಕಾರ್ಪೋರೇಟರ್ ರೇಖಾ ರಂಗನಾಥ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುವ ಮುಖಂಡ ಕೆ. ರಂಗನಾಥ್, ಬಡಾವಣೆಯ ಪ್ರಮುಖರಾದ ನರಸಿಂಹ ಮೂರ್ತಿ, ರವಿ, ಆನಂದಮೂರ್ತಿ, ರಾಮ್ ಕುಮಾರ್, ಅನೂಪ್, ಸುನಿಲ್, ಚಂದ್ರು ಗೆಡ್ಡೆ, ನಾಗರಾಜ್ , ಚೌಡಪ್ಪ, ದೀಪು, ಮಧು ಅಪ್ಪಿ, ಜಿಲ್ಲಾ ಯುವ ಕಾಂಗ್ರೆಸ್ ನ ಅಧ್ಯಕ್ಷ ಹೆಚ್.ಪಿ. ಗಿರೀಶ್,
ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ ಲೋಕೇಶ್, ಗುತ್ತಿಗೆದಾರ ಸದಾನಂದ್ ಹಾಗೂ. ಡಾ. ಬಿ. ಆರ್. ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘ, ಡಾ.ಬಾಬು ಜಗಜೀವನ್ ರಾಮ್ ಕ್ಷೇಮಾಭಿವೃದ್ಧಿ ಸಂಘ, ಶ್ರೀಮಾತೆಂಗಮ್ಮ ದೇವಾಲಯ ಸೇವಾ ಸಮಿತಿಯ ಪದಾಧಿಕಾರಿಗಳು – ಸದಸ್ಯರು ಉಪಸ್ಥಿತರಿದ್ದರು.