ಶಿವಮೊಗ್ಗ : ಮಳೆಗೆ ನೆಲಕ್ಕೊರಗುತ್ತಿರುವ ಮೆಕ್ಕೆಜೋಳ ಬೆಳೆ!

Shimoga: Maize crop is falling due to rain! ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ವರ್ಷಧಾರೆ : ಮೆಕ್ಕೆಜೋಳ ಬೆಳೆಗಾರರು ಕಂಗಾಲು..! Shimoga: Maize crop is falling due to rain

ಶಿವಮೊಗ್ಗ, ನ. 9: ಅರಬ್ಬಿ ಸಮುದ್ರದಲ್ಲಿ ಸುಳಿಗಾಳಿ ಸೃಷ್ಟಿಯಾಗಿರುವ ಕಾರಣದಿಂದ, ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದ ಹಲವೆಡೆ ವರ್ಷಧಾರೆಯಾಗಲಾರಂಭಿಸಿದೆ.

ಈ ನಡುವೆ ಶಿವಮೊಗ್ಗ ನಗರ ಹಾಗೂ ತಾಲೂಕಿನ ವಿವಿಧೆಡೆ ಹಿಂಗಾರು ಮಳೆ ಚುರುಕುಗೊಂಡಿದೆ. ಬುಧವಾರ ಬೆಳಿಗ್ಗೆ ಭಾರೀ ಮಳೆಗೆ ಸಾಕ್ಷಿಯಾಗಿದ್ದ ಶಿವಮೊಗ್ಗ ನಗರ ಹಾಗೂ ತಾಲೂಕಿನ ಹಲವೆಡೆ ರಾತ್ರಿ ಕೂಡ ವರ್ಷಧಾರೆಯಾಯಿತು.

ಮುಂಗಾರು ಮಳೆ ಕೈಕೊಟ್ಟ ಪರಿಣಾಮದಿಂದ ಜಿಲ್ಲೆಯಾದ್ಯಂತ ಈಗಾಗಲೇ ಬರಗಾಲದ ಸ್ಥಿತಿ ಆವರಿಸಿದೆ. ಮತ್ತೊಂದೆಡೆ, ಹಿಂಗಾರು ಮಳೆ ಕೂಡ ಕೈಕೊಡುವ ಲಕ್ಷಣಗಳು ಕೂಡ ಗೋಚರವಾಗಿದ್ದವು.  ಇತ್ತೀಚೆಗೆ ಹವಾಮಾನ ವೈಪರೀತ್ಯ ಕಾರಣದಿಂದ, ಹಿಂಗಾರು ಮಳೆ ಚುರುಕುಗೊಂಡಿದೆ. ಇದು ಸಹಜವಾಗಿಯೇ ಹೊಸ ನಿರೀಕ್ಷೆ ಮೂಡಿಸಿದೆ.

ಆದರೆ ಕಟಾವಿಗೆ ಬಂದಿರುವ ಮೆಕ್ಕೆಜೋಳ ಬೆಳೆಗಾರರಿಗೆ, ಪ್ರಸ್ತುತ ಬೀಳುತ್ತಿರುವ ವರ್ಷಧಾರೆ ಹೊರೆಯಾಗಿ ಪರಿಣಮಿಸಿದೆ. ಹಲವೆಡೆ ಮಕ್ಕೆಜೋಳ ತೆನೆಗಳು ನೆಲಕ್ಕುರುಳಲಾರಂಭಿಸಿದೆ. ತೆನೆಯಲ್ಲಿಯೇ ಬೀಜಗಳು ಮೊಳಕೆಯೊಡಯಲಾರಂಭಿಸಿವೆ!

‘ಮಳೆ ಕೊರತೆಯ ನಡುವೆಯೂ, ಕಷ್ಟಪಟ್ಟು ಬೆಳೆ ಬೆಳೆಯಲಾಗಿತ್ತು. ಫಸಲು ಕಟಾವಿಗೆ ಬಂದಿದೆ. ಇದೀಗ ಬೀಳುತ್ತಿರುವ ಮಳೆಯಿಂದ ಮೆಕ್ಕೆಜೋಳ ತೆನೆಗಳು ನೆಲಕ್ಕುರಳಲಾರಂಭಿಸಿವೆ’ ಎಂದು ಶಿವಮೊಗ್ಗ ತಾಲೂಕು ಸೋಮಿನಕೊಪ್ಪ ಭಾಗದ ಕೆಲ ಮೆಕ್ಕೆಜೋಳ ಬೆಳೆಗಾರರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.

ಹಾಗೆಯೇ ಕಟಾವು ಮಾಡಿ ಹಸನು ಮಾಡಲು ಹಾಕಿದ್ದ ಮೆಕ್ಕೆಜೋಳ ಬೀಜಗಳನ್ನು ಬಿಸಿಲಿಗೆ ಒಣಗಿಸಲು ಹರಸಾಹಸ ಪಡುವಂತಾಗಿದೆ. ಮಳೆಗೆ ನೆನೆಯದಂತೆ ಹಗಲಿರುಳು ಮೆಕ್ಕೆಜೋಳ ರಾಶಿ ಕಾಯುವಂತಾಗಿದೆ ಎಂದು ಕೆಲ ರೈತರು ತಿಳಿಸುತ್ತಾರೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *