ದರೋಡೆಗೆ ಹೊಂಚು : ಭದ್ರಾವತಿಯ ಮೂವರು, ಶಿವಮೊಗ್ಗದ ಓರ್ವ ಆರೋಪಿಯ ಬಂಧನ!
ಶಿವಮೊಗ್ಗ, ನ. 14: ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಹೊಂಚು ಹಾಕಿದ್ದ ಆರೋಪದ ಮೇರೆಗೆ, ನಾಲ್ವರು ಯುವಕರನ್ನು ಶಿವಮೊಗ್ಗದ ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಭದ್ರಾವತಿ ತಾಲೂಕಿನ ಬಾಬಳ್ಳಿ ಗ್ರಾಮದ ದೇವರಾಜ್ (31), ಶಿವಮೊಗ್ಗದ ಕೋಟೆಗಂಗೂರಿನ ಸಾಗರ್ ಯಾನೆ ಶಬರೀಶ್ (22), ಭದ್ರಾವತಿ ಭದ್ರಾ ಕಾಲೋನಿ ನಿವಾಸಿ ನಾಗರಾಜ್ ಯಾನೆ ಕುಮಾರ್ (38) ಹಾಗೂ ಭದ್ರಾವತಿ ಶಾಂತಿನಗರದ ನಿವಾಸಿ ಶ್ರೇಯಸ್ (22) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.
ನ. 10 ರಂದು ರಾತ್ರಿ ನಗರದ ಎನ್.ಟಿ. ರಸ್ತೆಯ ಫಲಕ್ ಶಾದಿ ಮಹಲ್ ಪಕ್ಕದಲ್ಲಿ ನಾಲ್ಕೈದು ಜನ ಯುವಕರ ಗುಂಪೊಂದು ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆಗೆ ಹೊಂಚು ಹಾಕುತ್ತಿರುವ ಕುರಿತಂತೆ ಪೊಲೀಸರಿಗೆ ಖಚಿತ ವರ್ತಮಾನ ಲಭಿಸಿತ್ತು.
ಇದರ ಆಧಾರದ ಮೇಲೆ ಗಸ್ತಿನಲ್ಲಿದ್ದ ಸಬ್ ಇನ್ಸ್’ಪೆಕ್ಟರ್ ಶ್ರೀನಿವಾಸ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ತೆರಳಿತ್ತು. ಈ ವೇಳೆ ನಾಲ್ವರನ್ನು ವಶಕ್ಕೆ ಪಡೆಯುವಲ್ಲಿ ಸಫಲವಾಗಿತ್ತು.
ಬಂಧಿತರಿಂದ ಕಬ್ಬಿಣದ ರಾಡು, ಮಚ್ಚು, 2 ಸ್ಟೀಲ್ ಡ್ರಾಗನ್, ಖಾರದ ಪುಡಿಯಿದ್ದ ಕವರ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
More Stories
shimoga news | ಶಿವಮೊಗ್ಗ : ಯುವಕನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ!
Shivamogga: A young man has been sentenced to 10 years in rigorous imprisonment!
ಶಿವಮೊಗ್ಗ : ಯುವಕನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ!
shimoga | ಪತ್ನಿಯ ಮೇಲೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿದ ಪತಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ!
Husband sentenced to 10 years in prison for pouring petrol on wife and attempting to murder her!
ಪತ್ನಿಯ ಮೇಲೆ ಪೆಟ್ರೋಲ್ ಸುರಿದು ಕೊಲೆಗೆ ಯತ್ನಿಸಿದ ಪತಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ!
shimoga | ‘ಸಭೆ – ಸಮಾರಂಭಗಳಲ್ಲಿ ಕನ್ನಡ ಪುಸ್ತಕ ನೀಡುವ ಹವ್ಯಾಸ ಬೆಳೆಸಿಕೊಳ್ಳಿ’ : ಹಿರಿಯ ಸಾಹಿತಿ ಎಂ ಎನ್ ಸುಂದರರಾಜ್ ಸಲಹೆ
‘Develop the habit of giving Kannada books at meetings and events’: Senior writer M N. Sundarraj advises
‘ಸಭೆ-ಸಮಾರಂಭಗಳಲ್ಲಿ ಕನ್ನಡ ಪುಸ್ತಕ ನೀಡುವ ಹವ್ಯಾಸ ಬೆಳೆಸಿಕೊಳ್ಳಿ’ : ಹಿರಿಯ ಸಾಹಿತಿ ಎಂ ಎನ್. ಸುಂದರರಾಜ್ ಸಲಹೆ
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ನವೆಂಬರ್ 30 ರ ತರಕಾರಿ ಬೆಲೆಗಳ ವಿವರ
shimoga APMC vegetable prices | Details of vegetable prices for November 30 in shimoga APMC wholesale market
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ನವೆಂಬರ್ 30 ರ ತರಕಾರಿ ಬೆಲೆಗಳ ವಿವರ
shimoga | power cut news | ಶಿವಮೊಗ್ಗ ನಗರದ ವಿವಿಧೆಡೆ ನವೆಂಬರ್ 30 ರಂದು ವಿದ್ಯುತ್ ವ್ಯತ್ಯಯ!
Power outages in various parts of Shivamogga city on November 30th!
ಶಿವಮೊಗ್ಗ ನಗರದ ವಿವಿಧೆಡೆ ನವೆಂಬರ್ 30 ರಂದು ವಿದ್ಯುತ್ ವ್ಯತ್ಯಯ!
shimoga news | ಶಿವಮೊಗ್ಗ : ಕಾರ್ ಡೆಕೋರ್ ಶಾಪ್ ನಲ್ಲಿ ಬೆಂಕಿ ಅವಘಡ!
Shivamogga: Fire accident at car decor shop!
ಶಿವಮೊಗ್ಗ : ಕಾರ್ ಡೆಕೋರ್ ಶಾಪ್ ನಲ್ಲಿ ಬೆಂಕಿ ಅವಘಡ!
