ಶಿವಮೊಗ್ಗದಿಂದ ಗೋವಾ, ಹೈದ್ರಾಬಾದ್, ತಿರುಪತಿಗೆ ವಿಮಾನ ಸೇವೆ : ಇಲ್ಲಿದೆ ವೇಳಾಪಟ್ಟಿಯ ಕಂಪ್ಲೀಟ್ ಡೀಟೇಲ್ಸ್!

Flights from Shimoga to Goa Hyderabad Tirupati start: complete schedule details! ಉದಯ ಸಾಕ್ಷಿ ನ್ಯೂಸ್ ಶಿವಮೊಗ್ಗದಿಂದ ಗೋವಾ, ಹೈದ್ರಾಬಾದ್, ತಿರುಪತಿಗೆ ವಿಮಾನ ಸೇವೆ : ಇಲ್ಲಿದೆ ವೇಳಾಪಟ್ಟಿಯ ಕಂಪ್ಲೀಟ್ ಡೀಟೇಲ್ಸ್!

ಶಿವಮೊಗ್ಗ, ನ. 21: ಶಿವಮೊಗ್ಗ ವಿಮಾನ ನಿಲ್ದಾಣದಿಂದ ಇಂದಿನಿಂದ ಗೋವಾ, ಹೈದ್ರಾಬಾದ್ ಹಾಗೂ ತಿರುಪತಿಗೆ ಸ್ಟಾರ್ ಏರ್ ಸಂಸ್ಥೆಯ ವಿಮಾನ ಹಾರಾಟ ಆರಂಭಗೊಂಡಿದೆ.

ಶಿವಮೊಗ್ಗ, ಗೋವಾ ಮತ್ತು ತಿರುಪತಿ ನಡುವೆ ಪ್ರತಿ ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ ವಿಮಾನ ಹಾರಾಟ ಸೌಲಭ್ಯವಿರಲಿದೆ. ವೇಳಾಪಟ್ಟಿಯ ವಿವರ ಈ ಮುಂದಿನಂತಿದೆ.

ಶಿವಮೊಗ್ಗ – ಗೋವಾ ವಿಮಾನ: ಶಿವಮೊಗ್ಗ – ಗೋವಾ ಹಾಗೂ ಗೋವಾ – ಶಿವಮೊಗ್ಗ ನಡುವೆ ಪ್ರತಿ ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ ವಿಮಾನ ಹಾರಾಟ ನಡೆಸಲಿದೆ.

ಮಂಗಳವಾರ, ಗುರುವಾರ ಹಾಗೂ ಶನಿವಾರದಂದು ಶಿವಮೊಗ್ಗದಿಂದ ಮಧ್ಯಾಹ್ನ 1. 55 ಕ್ಕೆ ಹೊರಡುವ ವಿಮಾನವು  ಮಧ್ಯಾಹ್ನ 2. 40 ಕ್ಕೆ ಗೋವಾ ನಿಲ್ದಾಣ ತಲುಪಲಿದೆ. ಗೋವಾದಿಂದ ಮಧ್ಯಾಹ್ನ 3. 10 ಕ್ಕೆ ಹೊರಡುವ ವಿಮಾನವು ಸಂಜೆ 4. 05 ಕ್ಕೆ ಶಿವಮೊಗ್ಗ ತಲುಪಲಿದೆ.

ಬುಧವಾರ ಬೆಳಿಗ್ಗೆ ಶಿವಮೊಗ್ಗದಿಂದ 11 ಗಂಟೆಗೆ ಹೊರಡಲಿರುವ ವಿಮಾನವು, ಬೆಳಿಗ್ಗೆ 11. 50 ಕ್ಕೆ ಗೋವಾ ತಲುಪಲಿದೆ. ಹಾಗೆಯೇ ಮಧ್ಯಾಹ್ನ 12. 20 ಗೋವಾದಿಂದ ಹೊರಡಲಿರುವ ವಿಮಾನವು ಮಧ್ಯಾಹ್ನ 1.10 ಕ್ಕೆ ಶಿವಮೊಗ್ಗಕ್ಕೆ ಆಗಮಿಸಲಿದೆ.

ಶಿವಮೊಗ್ಗ – ಹೈದ್ರಾಬಾದ್ : ಶಿವಮೊಗ್ಗ – ಹೈದ್ರಾಬಾದ್ ಹಾಗೂ ಹೈದ್ರಾಬಾದ್ ಶಿವಮೊಗ್ಗ – ಶಿವಮೊಗ್ಗ ನಡುವೆ ಪ್ರತಿ ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ ವಿಮಾನ ಹಾರಾಟ ನಡೆಸಲಿದೆ.

ಹೈದ್ರಾಬಾದ್ ನಿಂದ ಬೆಳಿಗ್ಗೆ 9. 35 ಕ್ಕೆ ಹೊರಡುವ ವಿಮಾನವು ಬೆಳಿಗ್ಗೆ 10. 35 ಕ್ಕೆ ಶಿವಮೊಗ್ಗ ತಲುಪಲಿದೆ. ಶಿವಮೊಗ್ಗದಿಂದ ಸಂಜೆ 4. 30 ಕ್ಕೆ ಹೊರಡುವ ವಿಮಾನವು ಸಂಜೆ 5.30 ಕ್ಕೆ ಹೈದ್ರಾಬಾದ್ ತಲುಪಲಿದೆ.

ಶಿವಮೊಗ್ಗ – ತಿರುಪತಿ : ಶಿವಮೊಗ್ಗ – ತಿರುಪತಿ ಹಾಗೂ ತಿರುಪತಿ – ಶಿವಮೊಗ್ಗ ನಡುವೆ ಪ್ರತಿ ಮಂಗಳವಾರ, ಬುಧವಾರ, ಗುರುವಾರ ಮತ್ತು ಶನಿವಾರ ವಿಮಾನ ಹಾರಾಟ ಸೌಲಭ್ಯವಿರಲಿದೆ.

ಮಂಗಳವಾರ, ಗುರುವಾರ, ಶನಿವಾರ ಶಿವಮೊಗ್ಗದಿಂದ ಬೆಳಿಗ್ಗೆ 11 ಗಂಟೆಗೆ ಹೊರಡುವ ವಿಮಾನವು 11.  50 ಕ್ಕೆ ತಿರುಪತಿ ತಲುಪಲಿದೆ. ತಿರುಪತಿಯಿಂದ ಮಧ್ಯಾಹ್ನ 12. 15 ಕ್ಕೆ ಹೊರಡುವ ವಿಮಾನವು ಮಧ್ಯಾಹ್ನ 1. 40 ಕ್ಕೆ ಶಿವಮೊಗ್ಗ ತಲುಪಲಿದೆ.

ಬುಧವಾರ ಶಿವಮೊಗ್ಗದಿಂದ ಮಧ್ಯಾಹ್ನ 1. 40 ಕ್ಕೆ ಹೊರಡುವ ವಿಮಾನ ಮಧ್ಯಾಹ್ನ 2. 30 ಕ್ಕೆ ತಿರುಪತಿ ತಲುಪಲಿದೆ. ಬುಧವಾರ ತಿರುಪತಿಯಿಂದ ಮಧ್ಯಾಹ್ನ 3 ಗಂಟೆಗೆ ಹೊರಡುವ ವಿಮಾನವು ಮಧ್ಯಾಹ್ನ 3. 50 ಕ್ಕೆ ಶಿವಮೊಗ್ಗ ತಲುಪಲಿದೆ.

Follow us on social media

About B.Renukesha

1997-98 ನೇ ಸಾಲಿನಿಂದ, ಸರಿಸುಮಾರು 26-27 ವರ್ಷಗಳಿಂದ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದೆನೆ. ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಮುದ್ರಣ ಮಾಧ್ಯಮದ ಜೊತೆಜೊತೆಗೆ, ಡಿಜಿಟಲ್ ಮಾಧ್ಯಮದಲ್ಲಿಯೂ ಕಾರ್ಯನಿರ್ವಹಿಸುವ ಅನಿವಾರ್ಯತೆ ಎದುರಾಗಿದೆ. ಆದರೆ ಡಿಜಿಟಲ್ ಮಾಧ್ಯಮ ನನಗೆ ಹೊಸದಲ್ಲ. 2013-14 ರ ಸಾಲಿನಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ www.u2rnews.com ಎಂಬ ನ್ಯೂಸ್ ವೆಬ್ ಸೈಟ್ ಆರಂಭಿಸಿದ್ದೆ. ಆದರೆ ಕಾರಣಾಂತರಗಳಿಂದ ಮುನ್ನಡೆಸಿಕೊಂಡು ಹೋಗಲು ಸಾಧ್ಯವಾಗಲಿಲ್ಲ. ಇದೀಗ www.udayasaakshi.com (ಉದಯ ಸಾಕ್ಷಿ) ನ್ಯೂಸ್ ವೆಬ್ ಸೈಟ್ ಹಾಗೂ @UdayaSaakshi ಯೂಟ್ಯೂಬ್ ನ್ಯೂಸ್ ಚಾನಲ್ ಆರಂಭಿಸಿದ್ದೆನೆ. ಈ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಚಲಿತ ವಿದ್ಯಮಾನ, ಮಾಹಿತಿಗಳನ್ನು ಯಥಾರೂಪದಲ್ಲಿ ನಾಗರೀಕರಿಗೆ ತಲುಪಿಸುವ ಪ್ರಾಮಾಣಿಕ ಕಾರ್ಯ ಮಾಡಲಾಗುವುದು. ಮುಖ್ಯವಾಗಿ ಸಾಮಾಜಿಕ ಸಮಸ್ಯೆ, ನಾಗರೀಕರ ದೂರು-ದುಮ್ಮಾನಗಳಿಗೆ ನ್ಯೂಸ್ ವೆಬ್ ಸೈಟ್ ಹಾಗೂ ಚಾನಲ್ ವೇದಿಕೆಯಾಗಲಿದೆ. ಧನ್ಯವಾದಗಳು, ಬಿ.ರೇಣುಕೇಶ್, ಪತ್ರಕರ್ತರು.

View all posts by B.Renukesha →

Leave a Reply

Your email address will not be published. Required fields are marked *