Less rain in the malnad..! ಮಲೆನಾಡಿನಲ್ಲಿ ಕಡಿಮೆಯಾದ ಮಳೆ ಅಬ್ಬರ..! shimoga rain shivamooga rain monsoon #chakra, #hosanagara, #malnadrain, #malnadu, #mani, #masthikatte, #Rainfall in Western Ghats : Maximum 325 millimeter rain in Chakra, #shimoganews, #shimoganewsupdate, #Shivamogga, #shivamogganews #shimogalocalnews, #shivamogganews #shimoganews, #udayasaakshi, #udayasaakshi #ಉದಯಸಾಕ್ಷಿ #ಉದಯಸಾಕ್ಷಿನ್ಯೂಸ್ #udayasaakshinews #shimoga #shimoganews #shimogalocalnews #shivamogganews #ಶಿವಮೊಗ್ಗ #ಶಿವಮೊಗ್ಗಸುದ್ದಿ, #yadur, #ಉದಯಸಾಕ್ಷಿನ್ಯೂಸ್, #ಪಶ್ಚಿಮಘಟ್ಟ, #ಪಶ್ಚಿಮಘಟ್ಟ ವ್ಯಾಪ್ತಿಯ ಪ್ರದೇಶಗಳಲ್ಲಿ ಮಳೆಯ ಆರ್ಭಟ : ಚಕ್ರಾದಲ್ಲಿ ಅತ್ಯಧಿಕ 325 ಮಿ.ಮೀ. ಮಳೆ!, #ಮಲೆನಾಡು, #ಮಳೆ, #ಮಾಣಿ, #ಮಾಸ್ತಿಕಟ್ಟೆ, #ಯಡೂರು, #ವರ್ಷಧಾರೆ, #ಶಿವಮೊಗ್ಗ, #ಶಿವಮೊಗ್ಗನ್ಯೂಸ್, #ಸಾವೇಹಕ್ಲು, #ಹೊಸನಗರ

ಮಲೆನಾಡಿನಲ್ಲಿ ಕಡಿಮೆಯಾದ ಮಳೆ ಅಬ್ಬರ..!

ಶಿವಮೊಗ್ಗ (shivamogga), ಜು. 28: ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದ (heavy rainfall) ಮಲೆನಾಡಿನ (malnad) ವಿವಿಧೆಡೆ, ವರ್ಷಧಾರೆ ಅಬ್ಬರ ಕಡಿಮೆಯಾಗಿದೆ. ಇದರಿಂದ ಉಕ್ಕಿ ಹರಿಯುತ್ತಿದ್ದ ನದಿ, ಕೆರೆಕಟ್ಟೆಗಳ ನೀರಿನ ಹರಿವಿನಲ್ಲಿ ಇಳಿಕೆಯಾಗಿದೆ. ಡ್ಯಾಂಗಳ ಒಳಹರಿವು ತಗ್ಗಿದೆ. ಮತ್ತೊಂದೆಡೆ, ಶಿವಮೊಗ್ಗದಲ್ಲಿ ಪ್ರವಾಹದ (flood) ಭೀತಿ ಸೃಷ್ಟಿಸಿದ್ದ ತುಂಗಾ ನದಿ ನೀರಿನ ಹರಿವಿನಲ್ಲಿಯೂ ಕುಸಿತವಾಗಿದೆ.

ಭಾನುವಾರ ಬೆಳಿಗ್ಗೆಯ ಮಾಹಿತಿಯಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಪಶ್ಚಿಮಘಟ್ಟ (western ghat) ವ್ಯಾಪ್ತಿಯ ಪ್ರದೇಶಗಳಾದ ಮಾಣಿ (mani) ಯಲ್ಲಿ 33 ಮಿಲಿ ಮೀಟರ್ (ಮಿ.ಮೀ.), ಯಡೂರು (yadur) 35 ಮಿ.ಮೀ, ಹುಲಿಕಲ್ (hulikallu) 39 ಮಿ.ಮೀ., ಮಾಸ್ತಿಕಟ್ಟೆಯಲ್ಲಿ (masthikatte) 36 ಮಿ.ಮೀ. ವರ್ಷಧಾರೆಯಾಗಿದೆ.

ಭಾನುವಾರ ಬೆಳಿಗ್ಗೆಯ ಮಾಹಿತಿಯಂತೆ, ಲಿಂಗನಮಕ್ಕಿ ಡ್ಯಾಂನ (linganamakki dam) ಒಳಹರಿವು 37,733 ಕ್ಯೂಸೆಕ್ ಗೆ ಇಳಿಕೆಯಾಗಿದೆ. ಶನಿವಾರ ಈ ಪ್ರಮಾಣ 85 ಸಾವಿರ ಕ್ಯೂಸೆಕ್ ನಷ್ಟಿತ್ತು.  ಪ್ರಸ್ತುತ ಡ್ಯಾಂ ನೀರಿನ ಮಟ್ಟ 1808. 05 (ಗರಿಷ್ಠ ಮಟ್ಟ : 1819) ಅಡಿಯಿದೆ. 3525 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ (out flow).

ತುಂಗಾ ಜಲಾಶಯದ (tunga dam) ಒಳಹರಿವು 36,489 ಕ್ಯೂಸೆಕ್ ಗೆ ಇಳಿಕೆಯಾಗಿದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿರುವುದರಿಂದ ಒಳಹರಿವಿನಷ್ಟೆ (inflow) ನೀರನ್ನು ಹೊಸಪೇಟೆಯ ತುಂಗಾಭದ್ರಾ ಜಲಾಶಯಕ್ಕೆ (tungabhadra dam) ಬಿಡಲಾಗುತ್ತಿದೆ. ಉಳಿದಂತೆ ಭದ್ರಾ ಡ್ಯಾಂನ (bhadra dam) ಒಳಹರಿವು 35,557 ಕ್ಯೂಸೆಕ್ ಇದೆ. ನೀರಿನ ಮಟ್ಟ 180 ಅಡಿ 7 ಇಂಚು ತಲುಪಿದೆ. ಡ್ಯಾಂ ಗರಿಷ್ಠ ಮಟ್ಟವಾದ 186 ಅಡಿ ತಲುಪಲು ಇನ್ನೂ ಕೇವಲ 6 ಅಡಿ ಬಾಕಿಯಿದೆ.

ಇಳಿಕೆ : ಶನಿವಾರ ತುಂಗಾ ಜಲಾಶಯದಿಂದ 85 ಸಾವಿರ ಕ್ಯೂಸೆಕ ನೀರು ಹೊರಬಿಡಲಾಗಿತ್ತು. ಇದರಿಂದ ಶಿವಮೊಗ್ಗ ನಗರದ ಮೂಲಕ ಹಾದು ಹೋಗಿದ್ದ ತುಂಗಾ ನದಿ ಪ್ರವಾಹ ಭೀತಿ ಮೂಡಿಸಿತ್ತು. ಹಲವೆಡೆ ನದಿ ಪಾತ್ರದ ಕೆಲ ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿತ್ತು. ಆದರೆ ಮಳೆ ಕಡಿಮೆಯಾದ ಕಾರಣದಿಂದ, ಭಾನುವಾರ ತುಂಗಾ ನದಿ ನೀರಿನ ಹರಿವಿನಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬಂದಿದೆ. ತಗ್ಗು ಪ್ರದೇಶಗಳಲ್ಲಿನ ಜಲಾವೃತ ಭೀತಿ ದೂರಾಗುವಂತೆ ಮಾಡಿದೆ.

Applications are invited for filling up the vacant posts in Home Guard Corps of Shimoga district ಶಿವಮೊಗ್ಗ ಜಿಲ್ಲೆಯ ಗೃಹರಕ್ಷಕ ದಳದಲ್ಲಿ ಖಾಲಿಯಿರುವ ಸ್ಥಾನಗಳ ಭರ್ತಿಗೆ ಅರ್ಜಿ ಆಹ್ವಾನ Previous post ಶಿವಮೊಗ್ಗ ಜಿಲ್ಲೆಯ ಗೃಹರಕ್ಷಕ ದಳದಲ್ಲಿ ಖಾಲಿಯಿರುವ ಸ್ಥಾನಗಳ ಭರ್ತಿಗೆ ಅರ್ಜಿ ಆಹ್ವಾನ
monsoon rain - continued crowd to Joga falls...! ಜೋಗ ಜಲಪಾತಕ್ಕೆ ಮುಂದುವರಿದ ಜನಸಾಗರ…! Next post ಜೋಗ ಜಲಪಾತಕ್ಕೆ ಮುಂದುವರಿದ ಜನಸಾಗರ…!