
ಶಿವಮೊಗ್ಗ : ನೀರಿನಲ್ಲಿ ತೇಲಿ ಬಂದ ಯುವಕನ ಶವ!
ಶಿವಮೊಗ್ಗ (shivamogga), ಆ. 1: ಶಿವಮೊಗ್ಗ ತಾಲೂಕಿನ ಹೊಳಲೂರು (holalur) ಗ್ರಾಮದ ಹೊಸಕೆರೆ ಸೇತುವೆ ಬಳಿಯ ತುಂಗಾ ಎಡದಂಡೆ ಚಾನಲ್ (tunga channal) ನೀರಿನಲ್ಲಿ, ಯುವಕನೋರ್ವನ ಶವ ತೇಲಿಬಂದ (dead body) ಘಟನೆ ನಡೆದಿದೆ.
ಸುಮಾರು 25-35 ವರ್ಷ ವಯೋಮಾನದ (age) ಶವವು, ನೀರಿನಲ್ಲಿ ತೇಲಿಬಂದು (floating) ಚಾನಲ್ ಪಕ್ಕದ ಮುಳ್ಳುಗಿಡಗಳಿಗೆ ಸಿಲುಕಿಕೊಂಡಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ದೇಹವು (body) ಸಂಪೂರ್ಣ ಕೊಳೆತ (decompose) ಸ್ಥಿತಿಯಲ್ಲಿದೆ. ಮೃತನ ಸಾವಿನ ಬಗ್ಗೆ ಅನುಮಾನ (doubt) ವ್ಯಕ್ತಪಡಿಸಿ ಗ್ರಾಮಾಂತರ ಠಾಣೆ ಪೊಲೀಸರು (rural police station) ಪ್ರಕರಣ ದಾಖಲಿಸಿಕೊಂಡು ತನಿಖೆ (enquiry) ನಡೆಸುತ್ತಿದ್ದಾರೆ.
ಮೃತ ವ್ಯಕ್ತಿಯ ಚಹರೆ : ದುಂಡು ಮುಖ, ಸಾಧರಾಣ ಮೈಕಟ್ಟು, ಸುಮಾರು 05.6 ಅಡಿ ಎತ್ತರ, ಬಲಗೈ ಮುಂಗೈ ಒಳಭಾಗದಲ್ಲಿ ಇಂಗ್ಲೀಷಿನಲ್ಲಿ ‘Susarta Mahta’ ಎಂದು ಹಚ್ಚೆ ಗುರುತುಗಳು ಇರುತ್ತದೆ. ಮೈಮೇಲೆ ಕಪ್ಪು ಬಣ್ಣದ ರೆಡಿಮೇಡ್ ಪ್ಯಾಂಟ್ ಹಳದಿ ಬಣ್ಣದ ರೆಡಿಮೇಡ್ ತುಂಬುತೊಳಿನ ಷರ್ಟ್ ನೀಲಿ ಬಣ್ಣದ ಬರ್ಮುಡಾ ಚಡ್ಡಿ ಧರಿಸಿರುತ್ತಾನೆ.
ಮೃತ ವ್ಯಕ್ತಿಯ ಸಂಬಂಧಿಕರು/ ವಾರಸುದಾರರು ಪತ್ತೆಯಾದಲ್ಲಿ, ಸಿಪಿಐ (cpi) ಗ್ರಾಮಾಂತರ ವೃತ್ತ ಶಿವಮೊಗ್ಗ ಅಥವಾ ಪಿ.ಎಸ್.ಐ. (psi) ಗ್ರಾಮಾಂತರ ಪೊಲೀಸ್ ಠಾಣೆ ಶಿವಮೊಗ್ಗ ಅಥವಾ ಪೊಲೀಸ್ ಕಂಟ್ರೋಲ್ ರೂಮ್ (police control room) ಶಿವಮೊಗ್ಗ ಪೋನ್ ನಂ. 100 ಅಥವಾ ದೂ. ಸಂ. 08182 -261418/261410/261422/9480803350 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.