ಶಾಲಾ-ಕಾಲೇಜುಗಳ ಬಳಿ ಪೊಲೀಸ್ ಗಸ್ತು ವ್ಯವಸ್ಥೆ : ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಹೇಳಿಕೆ
ಶಿವಮೊಗ್ಗ, ಮಾ. 5: ಶಾಲಾ-ಕಾಲೇಜುಗಳ ಬಳಿ ಪೊಲೀಸ್ ಗಸ್ತು ಹೆಚ್ಚಿಸಲಾಗುವುದು. ಮಿತಿಮೀರಿದ ವೇಗದಲ್ಲಿ ವಾಹನ ಚಲಾಯಿಸುವವರ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ತಿಳಿಸಿದ್ದಾರೆ.

ಭಾನುವಾರ ಜಿಲ್ಲೆಯ ಸೊರಬ ಪಟ್ಟಣದ ರಂಗನಾಥ ಸ್ವಾಮಿ ದೇವಸ್ಥಾನ ಆವರಣದಲ್ಲಿ ಆಯೋಜಿಸಲಾಗಿದ್ದ ಜನ ಸಂಪರ್ಕ ಸಭೆಯಲ್ಲಿ ಭಾಗವಹಿಸಿದ್ದ ಅವರು ನಾಗರೀಕರ ಅಹವಾಲು ಆಲಿಸಿ ಮಾತನಾಡಿದರು.
ಅಪ್ರಾಪ್ತ ವಯಸ್ಸಿನವರು ವಾಹನ ಚಾಲನೆ ಮಾಡುವುದು ಹಾಗೂ ಬೈಕ್ ಗಳಲ್ಲಿ ತ್ರಿಬಲ್ ರೈಡಿಂಗ್ ಮಾಡುವವರನ್ನು ಪತ್ತೆ ಹಚ್ಚಿ ಐಎಂಎ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.
ವಿಳಂಬಕ್ಕೆ ಆಸ್ಪದವಿಲ್ಲದಂತೆ ಪ್ರಕರಣಗಳ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ವರದಿ ಸಲ್ಲಿಸಲಾಗುತ್ತಿದೆ. ಸಮಸ್ಯೆ ಮತ್ತು ಸಹಾಯಕ್ಕಾಗಿ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಸಾರ್ವಜನಿಕರು ಭೇಟಿ ನೀಡಿ ಅಧಿಕಾರಿಗಳ ಜೊತೆ ಚರ್ಚಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಯಾವುದೇ ತುರ್ತು ಸಂದರ್ಭದಲ್ಲಿ ಸಹಾಯಕ್ಕಾಗಿ ಹತ್ತಿರದ ಪೊಲೀಸ್ ಠಾಣೆ ಅಥವಾ 112 ಸಹಾಯವಾಣಿ / ಕಂಟ್ರೋಲ್ ರೂಮ್ ಗೆ ಸಂಪರ್ಕಿಸಿ ಸಹಾಯ ಪಡೆಬಹುದಾಗಿದೆ.
ಪಟ್ಟಣ ಪಂಚಾಯ್ತಿ ಸಹಕಾರದೊಂದಿಗೆ, ಸೊರಬ ಪಟ್ಟಣದ ಪ್ರಮುಖ ರಸ್ತೆ ಹಾಗೂ ವೃತ್ತಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗುವುದು. ಹಾಗೆಯೇ ವಾಣಿಜ್ಯ ಕಟ್ಟಡಳು ಹಾಗೂ ನಾಗರೀಕರು ತಮ್ಮ ಮನೆಗಳ ಬಳಿ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಸಭೆಯಲ್ಲಿ ಶಿಕಾರಿಪುರ ಪೊಲೀಸ್ ಉಪ ವಿಭಾಗದ ಉಪಾಧೀಕ್ಷಕರಾದ ಶಿವಾನಂದ ಮದರಕಂಡಿ, ಸೊರಬ ಇನ್ಸ್’ಪೆಕ್ಟರ್ ಭಾಗ್ಯವತಿ, ಸಬ್ ಇನ್ಸ್ ಪೆಕ್ಟರ್ ಗಳಾದ ನಾಗರಾಜ್, ಶಿವಪ್ರಸಾದ್, ವಿಠಲ ಅಗಸಿ ಮೊದಲಾದವರಿದ್ದರು.
More Stories
shimoga news | ಶಿವಮೊಗ್ಗದ ಹನುಮಂತ ನಗರ ನಿವಾಸಿಗಳ ಗೋಳು ಆಲಿಸದ ಪಾಲಿಕೆ ಆಡಳಿತ!
The municipal administration does not listen to the concerns of the residents of Hanumanth Nagar in Shivamogga!
ಶಿವಮೊಗ್ಗದ ಹನುಮಂತ ನಗರ ನಿವಾಸಿಗಳ ಗೋಳು ಆಲಿಸದ ಪಾಲಿಕೆ ಆಡಳಿತ!
shimoga news | ಶಿವಮೊಗ್ಗ ನಗರ ಕುಡಿಯುವ ನೀರು ಪೂರೈಕೆ : ಹೊಸ ಯೋಜನೆ ಅನುಷ್ಠಾನದತ್ತ ಹರಿಯುವುದೆ ಜನಪ್ರತಿನಿಧಿಗಳ ಚಿತ್ತ?
Shivamogga city drinking water supply: Will the will of the people’s representatives flow towards the implementation of the new project?
ಶಿವಮೊಗ್ಗ ನಗರ ಕುಡಿಯುವ ನೀರು ಪೂರೈಕೆ : ಹೊಸ ಯೋಜನೆ ಅನುಷ್ಠಾನದತ್ತ ಹರಿಯುವುದೆ ಜನಪ್ರತಿನಿಧಿಗಳ ಚಿತ್ತ?
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಡಿಸೆಂಬರ್ 16 ರ ತರಕಾರಿ ಬೆಲೆಗಳ ವಿವರ
shimoga APMC vegetable prices | Details of vegetable prices for December 16 in shimoga APMC wholesale market
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಡಿಸೆಂಬರ್ 16 ರ ತರಕಾರಿ ಬೆಲೆಗಳ ವಿವರ
shimoga palike news | ಬೆಂಗಳೂರು, ಮೈಸೂರು ಮಾದರಿ ಶಿವಮೊಗ್ಗ – ಭದ್ರಾವತಿ ಬೃಹತ್ ಮಹಾನಗರ ಪಾಲಿಕೆ ರಚನೆಯತ್ತ ಚಿತ್ತ ಹರಿಸುವುದೆ ಸರ್ಕಾರ?
Will the government focus on forming a Shivamogga-Bhadravati Metropolitan City Corporation on the model of Bangalore and Mysore?
ಬೆಂಗಳೂರು – ಮೈಸೂರು ಮಾದರಿ ಶಿವಮೊಗ್ಗ – ಭದ್ರಾವತಿ ಬೃಹತ್ ಮಹಾನಗರ ಪಾಲಿಕೆ ರಚನೆಯತ್ತ ಚಿತ್ತ ಹರಿಸುವುದೆ ಸರ್ಕಾರ?
shimoga court news | ಶಿವಮೊಗ್ಗ | ಭದ್ರಾವತಿಯ 21 ವರ್ಷದ ಯುವಕನಿಗೆ 30 ವರ್ಷ ಕಠಿಣ ಜೈಲು ಶಿಕ್ಷೆ!
Shivamogga | A 21-year-old youth from Bhadravati has been sentenced to 30 years in rigorous imprisonment!
ಶಿವಮೊಗ್ಗ | ಭದ್ರಾವತಿಯ 21 ವರ್ಷದ ಯುವಕನಿಗೆ 30 ವರ್ಷ ಕಠಿಣ ಜೈಲು ಶಿಕ್ಷೆ!
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಡಿಸೆಂಬರ್ 11 ರ ತರಕಾರಿ ಬೆಲೆಗಳ ವಿವರ
shimoga APMC vegetable prices | Details of vegetable prices for December 10 in shimoga APMC wholesale market
shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಡಿಸೆಂಬರ್ 11 ರ ತರಕಾರಿ ಬೆಲೆಗಳ ವಿವರ
