
Chikkamagaluru | ಓವರ್ ಡೋಸ್ ಇಂಜೆಕ್ಷನ್ ಎಫೆಕ್ಟ್ : ಬಾಲಕ ಸಾವು – ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು!
ಅಜ್ಜಂಪುರ (ajjampura), ಸೆ. 29: ಜ್ವರದಿಂದ ಬಳಲುತ್ತಿದ್ದ ಬಾಲಕನೋರ್ವನಿಗೆ, ವೈದ್ಯರು ನೀಡಿದ ಓವರ್ ಡೋಸ್ ಇಂಜೆಕ್ಷನ್ (overdose injection) ನಿಂದಲೇ ಮೃತಪಟ್ಟಿದ್ದಾನೆಂಬ ಆರೋಪ, ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಬುಕ್ಕಾಂಬುಧಿಯಿಂದ ಕೇಳಿಬಂದಿದೆ.
ಸೋನೇಶ್ (7) ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ಈ ಸಂಬಂಧ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ (ajjampura police station) ಬುಕ್ಕಾಂಬುಧಿ ಆಸ್ಪತ್ರೆ ವೈದ್ಯನ ವಿರುದ್ದ, ಪೋಷಕರು ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಘಟನೆ ಹಿನ್ನೆಲೆ : ಕೆಂಚಾಪುರ ಗ್ರಾಮದ ಬಾಲಕ ಸೋನೇಶ್ ಕಳೆದ ಕೆಲ ದಿನಗಳಿಂದ ಜ್ವರದಿಂದ ಬಳಲುತ್ತಿದ್ದ. ಬಾಲಕನನ್ನು ಪೋಷಕರು ಬುಕ್ಕಾಂಬುಧಿ ಆಸ್ಪತ್ರೆಗೆ ಕರೆತಂದಿದ್ದರು. ಕರ್ತವ್ಯದಲ್ಲಿದ್ದ ವೈದ್ಯರು ಬಾಲಕನಿಗೆ ಇಂಜೆಕ್ಷನ್ ನೀಡಿದ್ದರು.
ಬಾಲಕನಿಗೆ ಇಂಜೆಕ್ಷನ್ ನೀಡಿದ್ದ ಸ್ಥಳದಲ್ಲಿ ಬೊಬ್ಬೆ ಹಾಗೂ ಕೀವು ಕಾಣಿಸಿಕೊಂಡಿತ್ತು. ಸೋನೇಶ್ ನ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ, ಪೋಷಕರು ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆ (shimoga private hospital) ಗೆ ಬಾಲಕನನ್ನು ದಾಖಲಿಸಿದ್ದರು.
ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಅಸುನೀಗಿದ್ದಾನೆ. ಬುಕ್ಕಾಂಬುಧಿ ಆಸ್ಪತ್ರೆಯಲ್ಲಿ ವೈದ್ಯರು ಓವರ್ ಡೋಸ್ ಇಂಜೆಕ್ಷನ್ ನೀಡಿದ್ದರಿಂದಲೇ ಬಾಲಕ ಮೃತಪಟ್ಟಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.
Ajjampur : An allegation that a boy who was suffering from fever died due to an overdose injection given by the doctor was heard from Bukkambudhi in Ajjampur taluk of Chikkamagaluru district.