shimoga | What are the areas included in the Shivamogga Municipal Corporation's jurisdiction? What are the demands of the citizens for the DC? shimoga | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಸೇರ್ಪಡೆ ಪಟ್ಟಿಯಲ್ಲಿರುವ ಪ್ರದೇಶಗಳು ಯಾವುವು? ಡಿಸಿಗೆ ನಾಗರೀಕರ ಆಗ್ರಹವೇನು? ವರದಿ : ಬಿ. ರೇಣುಕೇಶ್ b renukesha

shimoga palike | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : 9 ಅಧಿಕಾರಿಗಳ ತಂಡದಿಂದ ಮಾಹಿತಿ ಸಂಗ್ರಹ

ಶಿವಮೊಗ್ಗ (shivamogga), ಸೆ. 29: ಶಿವಮೊಗ್ಗ ಮಹಾನಗರ ಪಾಲಿಕೆ (shimoga city corporation) ವ್ಯಾಪ್ತಿ ಪರಿಷ್ಕರಣೆ ಪ್ರಕ್ರಿಯೆ ಬಿರುಸುಗೊಂಡಿದೆ. ಪಾಲಿಕೆ ಅಧಿಕಾರಿಗಳ ಪ್ರತ್ಯೇಕ ತಂಡಗಳು, ನಗರದ ಹೊರವಲಯದ ಗ್ರಾಮ ಪಂಚಾಯ್ತಿಗಳ ಅಧೀನದ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುವ ಕಾರ್ಯ ಮುಂದುವರೆಸಿವೆ.

ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ (palike commissioner kavita yogappanavar) ಮೇಲುಸ್ತುವಾರಿಯಲ್ಲಿ ಮಾಹಿತಿ ಸಂಗ್ರಹ ಕಾರ್ಯ ನಡೆಯುತ್ತಿದೆ. ಇದಕ್ಕಾಗಿ ಪಾಲಿಕೆಯ 9 ಅಧಿಕಾರಿಗಳ ನೇತೃತ್ವದಲ್ಲಿ, ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿದೆ. ಸದರಿ ತಂಡದಲ್ಲಿ ಪಾಲಿಕೆಯ ವಿವಿಧ ವಿಭಾಗಗಳ ಅಧಿಕಾರಿ, ಸಿಬ್ಬಂದಿಗಳಿದ್ದಾರೆ.

ಕಳೆದ ಹಲವು ದಿನಗಳಿಂದ, ಸದರಿ ತಂಡಗಳು ನಗರದ ಹೊರವಲಯದ ಗ್ರಾಪಂ ಅಧೀನದ ಬಡಾವಣೆ ಹಾಗೂ ಗ್ರಾಮಗಳಿಗೆ ಖುದ್ದು ಭೇಟಿಯಿತ್ತು ವಿವರ ಸಂಗ್ರಹಿಸುತ್ತಿವೆ. ಕರ್ನಾಟಕ ಕಾರ್ಪೋರೇಷನ್ ಕಾಯ್ದೆ ಮಾನದಂಡಗಳಿಗೆ ಅನುಗುಣವಾಗಿ ಯಾವ ಪ್ರದೇಶ ಸೇರ್ಪಡೆ ಮಾಡಿಕೊಳ್ಳಬಹುದು ಎಂಬ ಮಾಹಿತಿ ಕಲೆ ಹಾಕುತ್ತಿವೆ.

ಈ ನಡುವೆ ಇದೇ ಮೊದಲ ಬಾರಿಗೆ, ಡ್ರೋಣ್ ಕ್ಯಾಮರಾ (drone camera) ಗಳ ಮೂಲಕವು ನಗರದಂಚಿನಲ್ಲಿರುವ ಪ್ರದೇಶಗಳ ಸಚಿತ್ರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕಳೆದ ಹಲವು ದಿನಗಳಿಂದ, ಡ್ರೋಣ್ ಮೂಲಕ ಮಾಹಿತಿ ಸಂಗ್ರಹಿಸುವ ಕಾರ್ಯವೂ ನಡೆಯುತ್ತಿದೆ.

ಲಭ್ಯ ಮಾಹಿತಿ ಅನುಸಾರ, ಶಿವಮೊಗ್ಗ ನಗರದಂಚಿನಲ್ಲಿರುವ 23 ಗ್ರಾಮಗಳ ವ್ಯಾಪ್ತಿಯಲ್ಲಿ ಮಾಹಿತಿ ಕಲೆ ಹಾಕುವ ಕಾರ್ಯ ನಡೆಸಲಾಗುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ, ಸರ್ಕಾರದ ಪೌರಾಡಳಿತ ನಿರ್ದೇಶನಾಲಯಕ್ಕೆ ವರದಿ ಕಳುಹಿಸಲಾಗುತ್ತದೆ.

ಸದರಿ ವರದಿಗೆ ಇಲಾಖೆಯ ಅನುಮೋದನೆ ದೊರಕಿದ ನಂತರ, ಗ್ರಾಮ ಪಂಚಾಯ್ತಿಗಳ ಅಭಿಪ್ರಾಯ ಸಂಗ್ರಹಿಸುವ ಕಾರ್ಯ ಆರಂಭವಾಗಲಿದೆ. ಸದ್ಯ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಗೆ ಸಂಬಂಧಿಸಿದಂತೆ, ಪ್ರಾಥಮಿಕ ಹಂತದ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಸಲಾಗುತ್ತಿದೆ ಎಂದು ಪಾಲಿಕೆ ಮೂಲಗಳು ಮಾಹಿತಿ ನೀಡುತ್ತವೆ.

1994-95 ರ ಅವಧಿಯಲ್ಲಿ ಅಂದಿನ ನಗರಸಭೆ ಆಡಳಿತದ ವೇಳೆ ಶಿವಮೊಗ್ಗ ನಗರ ವ್ಯಾಪ್ತಿ ಪರಿಷ್ಕರಿಸಲಾಗಿತ್ತು. 2012 -13 ನೇ ಸಾಲಿನಲ್ಲಿ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಆ ವೇಳೆಯೂ ಅಂದಿನ ನಗರಸಭೆ ವ್ಯಾಪ್ತಿಯೇ ಉಳಿಸಿಕೊಳ್ಳಲಾಗಿತ್ತು. ನಗರದಂಚಿನ ಇತರೆ ಪ್ರದೇಶಗಳನ್ನು ಸೇರ್ಪಡೆ ಮಾಡಿಕೊಂಡಿರಲಿಲ್ಲ.

ವೈಜ್ಞಾನಿಕವಾಗಿ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಮಾಡಬೇಕೆಂಬ ಕೂಗು ಕೇಳಿಬಂದಿತ್ತು. ಈ ನಡುವೆ ಪೌರಾಡಳಿತ ಇಲಾಖೆಯು ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಸಂಬಂಧ, ವರದಿ ಸಲ್ಲಿಸುವಂತೆ ಸೂಚಿಸಿತ್ತು. ಈ ಸಂಬಂಧ ಪಾಲಿಕೆ ಆಯುಕ್ತರು ಅಧಿಕಾರಿಗಳ ತಂಡ ರಚಿಸಿ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಸಲಾರಂಭಿಸಿದ್ದಾರೆ.

The scope revision process of Shimoga City Corporation is in full swing. Separate teams of corporation officials have continued to personally visit and inspect the areas under the Gram Panchayats in the outskirts of the city.

ಚಿಕ್ಕಮಗಳೂರು / ಅಜ್ಜಂಪುರ Overdose injection effect: Boy's death - A case has been registered in Ajjampur police station! ಓವರ್ ಡೋಸ್ ಇಂಜೆಕ್ಷನ್ ಎಫೆಕ್ಟ್ : ಬಾಲಕ ಸಾವು – ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು! Previous post Chikkamagaluru | ಓವರ್ ಡೋಸ್ ಇಂಜೆಕ್ಷನ್ ಎಫೆಕ್ಟ್ : ಬಾಲಕ ಸಾವು – ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು!
Alleged sale of Chinese garlic in Shimoga : What did the Collector say? ಶಿವಮೊಗ್ಗದಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ ಆರೋಪ : ಜಿಲ್ಲಾಧಿಕಾರಿ ಹೇಳಿದ್ದೇನು? Next post shimoga | ಶಿವಮೊಗ್ಗದಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ ಆರೋಪ : DC ಹೇಳಿದ್ದೇನು?