Alleged sale of Chinese garlic in Shimoga : What did the Collector say? ಶಿವಮೊಗ್ಗದಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ ಆರೋಪ : ಜಿಲ್ಲಾಧಿಕಾರಿ ಹೇಳಿದ್ದೇನು?

shimoga | ಶಿವಮೊಗ್ಗದಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ ಆರೋಪ : DC ಹೇಳಿದ್ದೇನು?

ಶಿವಮೊಗ್ಗ (shivamogga), ಸೆ. 30: ಶಿವಮೊಗ್ಗ ನಗರದಲ್ಲಿ ನಾಗರೀಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ, ಚೀನಾ ದೇಶದ ನಿಷೇಧಿತ ಬೆಳ್ಳುಳ್ಳಿ (china garlic) ಮಾರಾಟ ಮಾಡುತ್ತಿರುವ ಆರೋಪಗಳು ಸಾರ್ವಜನಿಕ ವಲಯದಲ್ಲಿ ಸಂಚಲನ ಸೃಷ್ಟಿಸಿದೆ!

ಈ ನಡುವೆ ಶಿವಮೊಗ್ಗ ಜಿಲ್ಲಾಡಳಿತ ಕೂಡ, ವ್ಯಾಪಾರಿಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸುವ ಕಾರ್ಯ ನಡೆಸಲಾರಂಭಿಸಿದೆ. ಈ ಕುರಿತಂತೆ ಜಿಲ್ಲಾಧಿಕಾರಿ (shimoga dc) ಗುರುದತ್ ಹೆಗಡೆ ಅವರು ಸೋಮವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಚೀನಾ ದೇಶದ ನಿಷೇಧಿತ ಬೆಳ್ಳುಳ್ಳಿ (garlic) ಮಾರಾಟ ಮಾಡುತ್ತಿರುವ ದೂರುಗಳ ಆಧಾರದ ಮೇಲೆ, ಆಹಾರ ಸುರಕ್ಷತೆ – ಗುಣಮಟ್ಟ ವಿಭಾಗದ ಅಧಿಕಾರಿಗಳ ತಂಡ ಶಿವಮೊಗ್ಗ ನಗರದ ವಿವಿಧೆಡೆ ತಪಾಸಣೆ ನಡೆಸಿದೆ. ಮೇಲ್ನೋಟಕ್ಕೆ ನಿಷೇಧಿತ ಬೆಳ್ಳುಳ್ಳಿ ಪತ್ತೆ ಹಚ್ಚುವುದು ಸುಲಭ ಸಾಧ್ಯವಲ್ಲ.

ಈ ಹಿನ್ನೆಲೆಯಲ್ಲಿ ತಪಾಸಣೆ ವೇಳೆ ಸಂಗ್ರಹಿಸಲಾದ ಬೆಳ್ಳುಳ್ಳಿಗಳ ಸ್ಯಾಂಪಲ್ಸ್ ಗಳನ್ನು, ಪ್ರಯೋಗಾಲಯದ ಪರೀಕ್ಷೆಗೆ ರವಾನಿಸಲಾಗಿದೆ. ಲ್ಯಾಬ್ ಫಲಿತಾಂಶ ಹೊರಂಬದ ನಂತರ, ಚೀನಾ ದೇಶದ ನಿಷೇಧಿತ ಬೆಳ್ಳುಳ್ಳಿ ಮಾರಾಟದ ಬಗ್ಗೆ ಸ್ಪಷ್ಟ ಮಾಹಿತಿಗಳು ಲಭ್ಯವಾಗಲಿದೆ’ ಎಂದು ತಿಳಿಸಿದ್ದಾರೆ.

‘ಆದರೆ ಯಾವುದೇ ಕಾರಣಕ್ಕೂ ನಾಗರೀಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಹಾಗೂ ನಿಷೇಧಿತ ಆಹಾರ ಪದಾರ್ಥಗಳನ್ನು ಮಾರಾಟ ಮಾಡಬಾರದು. ಈ ಕುರಿತಂತೆ ವ್ಯಾಪಾರಿಗಳಿಗೂ ಸ್ಪಷ್ಟ ಸೂಚನೆ ನೀಡಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು’ ಎಂದು ಸ್ಪಷ್ಟಪಡಿಸಿದ್ದಾರೆ.

ವ್ಯಾಪಕ ಚರ್ಚೆ : ಶಿವಮೊಗ್ಗದಲ್ಲಿ ಕೆಲ ವ್ಯಾಪಾರಿಗಳು ಗೊತ್ತಿದ್ದೊ, ಗೊತ್ತಿಲ್ಲದೆಯೋ ಚೀನಾ ದೇಶದ ನಿಷೇಧಿತ ಬೆಳ್ಳುಳ್ಳಿ (china country garlic) ಮಾರಾಟ ಮಾಡುತ್ತಿದ್ದಾರೆ ಎಂಬ ವಿಷಯವು ಸ್ಥಳೀಯ ನಾಗರೀಕ ವಲಯದಲ್ಲಿ ವ್ಯಾಪಕ ಚರ್ಚೆಗೆಡೆ ಮಾಡಿಕೊಟ್ಟಿದೆ.

ಅಧಿಕಾರಿಗಳ ತಂಡದ ದಾಳಿಯ ನಂತರ, ಕೆಲ ವ್ಯಾಪಾರಿಗಳು ಶಂಕಿತ ಬೆಳ್ಳುಳ್ಳಿಯ ಮಾರಾಟ ಸ್ಥಗಿತಗೊಳಿಸಿದ್ದಾರೆ. ನಾಗರೀಕರು ಕೂಡ ದೇಶೀಯ ಬೆಳ್ಳುಳ್ಳಿ ಖರೀದಿಯತ್ತ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ ಎಂದು ಕೆಲ ವ್ಯಾಪಾರಿಗಳು ತಿಳಿಸುತ್ತಾರೆ.

In Shimoga city, the accusations of selling garlic from China, which is affecting the health of the citizens, has created a stir in the public sector! In the meantime, there have been definite complaints about the sale of Chinese garlic in various parts of Shimoga city. In this background, a team of officials under the Food Safety and Quality Act has raided various places and conducted inspections.

shimoga | What are the areas included in the Shivamogga Municipal Corporation's jurisdiction? What are the demands of the citizens for the DC? shimoga | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಸೇರ್ಪಡೆ ಪಟ್ಟಿಯಲ್ಲಿರುವ ಪ್ರದೇಶಗಳು ಯಾವುವು? ಡಿಸಿಗೆ ನಾಗರೀಕರ ಆಗ್ರಹವೇನು? ವರದಿ : ಬಿ. ರೇಣುಕೇಶ್ b renukesha Previous post shimoga palike | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : 9 ಅಧಿಕಾರಿಗಳ ತಂಡದಿಂದ ಮಾಹಿತಿ ಸಂಗ್ರಹ
film news | Actor Mithun Chakraborty honored with Dadasaheb Phalke Award ಹಿಂದಿ ಚಿತ್ರರಂಗದ ಹಿರಿಯ ನಟ ಮಿಥುನ್ ಚಕ್ರವರ್ತಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ Next post film news | ನಟ ಮಿಥುನ್ ಚಕ್ರವರ್ತಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ