
shimoga | ಶಿವಮೊಗ್ಗ : ಕಲುಷಿತ ಕುಡಿಯುವ ನೀರು ಪೂರೈಕೆ – ಶುದ್ಧೀಕರಣ ಘಟಕಕ್ಕೆ ಕಾಂಗ್ರೆಸ್ ತಂಡ ಭೇಟಿ
ಶಿವಮೊಗ್ಗ (shivamogga), ಅ. 15: ಶಿವಮೊಗ್ಗ ನಗರದಲ್ಲಿ ಇತ್ತೀಚೆಗೆ ಕಲುಷಿತ ಕುಡಿಯುವ ನೀರು ಪೂರೈಕೆಯಾಗುತ್ತಿರುವ ದೂರುಗಳ ಹಿನ್ನೆಲೆಯಲ್ಲಿ, ಅ. 15 ರಂದು ಕಾಂಗ್ರೆಸ್ ಪಕ್ಷದ ಕೆಲ ನಾಯಕರು ಮಂಡ್ಲಿಯಲ್ಲಿರುವ ನೀರು ಶುದ್ಧೀಕರಣ ಘಟಕಕ್ಕೆ ಭೇಟಿಯಿತ್ತು ಪರಿಶೀಲಿಸಿದರು.
ಭೇಟಿಯ ವೇಳೆ ಮಾಜಿ ಮಹಾನಗರ ಪಾಲಿಕೆ ಸದಸ್ಯ ಹೆಚ್.ಸಿ.ಯೋಗೇಶ್, ಮುಖಂಡ ಕೆ.ರಂಗನಾಥ್, ದಕ್ಷಿಣ ಬ್ಲಾಕ್ ಅಧ್ಯಕ್ಷ ಕಲೀಂ ಪಾಷಾ, ಉತ್ತರ ಬ್ಲಾಕ್ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ತತ್’ಕ್ಷಣವೇ ನಗರದ ನಾಗರೀಕರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕು ಎಂದು ಜಲ ಮಂಡಳಿ ಅಧಿಕಾರಿಗಳಿಗೆ ಕಾಂಗ್ರೆಸ್ ನಿಯೋಗ ಸೂಚಿಸಿದೆ.
ಸ್ವಚ್ಛಗೊಳಿಸಿಲ್ಲ: ‘ಕಳೆದ ಹಲವು ವರ್ಷಗಳಿಂದ ನೀರು ಶುದ್ಧೀಕರಣ ಘಟಕ ಸ್ವಚ್ಛಗೊಳಿಸಿಲ್ಲ. ಪ್ರಸ್ತುತ 150 ಕ್ಕೂ ಹೆಚ್ಚು ಕಾರ್ಮಿಕರು, ಪಂಪ್ ಹೌಸ್ ಶುದ್ಧೀಕರಣ ಕಾರ್ಯ ನಡೆಸುತ್ತಿರುವುದು ಭೇಟಿಯ ವೇಳೆ ಕಂಡುಬಂದಿದೆ. ಲ್ಯಾಬ್ ಗೆ ಅಗತ್ಯವಿರುವ ಸಲಕರಣೆಗಳನ್ನು ಸರ್ಕಾರದಿಂದ ತರಿಸಿಕೊಳ್ಳುವಂತೆ ಜಲ ಮಂಡಳಿಗೆ ಸಲಹೆ ನೀಡಲಾಗಿದೆ’ ಎಂದು ಹೆಚ್ ಸಿ ಯೋಗೇಶ್ ಅವರು ತಿಳಿಸಿದ್ದಾರೆ.
‘ಶುದ್ಧೀಕರಣ ಘಟಕದ ನೀರು ಘಟಕಗಳಲ್ಲಿ ಸಂಗ್ರಹವಾಗಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯವನ್ನು ಜಲ ಮಂಡಳಿ ನಡೆಸುತ್ತಿದೆ. ಅದೇ ರೀತಿಯಲ್ಲಿ ನಗರದ ವಿವಿಧೆಡೆಯಿರುವ ಓವರ್ ಹೆಡ್ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಸಬೇಕು. ಈ ಸಂಬಂಧ ಜಲ ಮಂಡಳಿ ಅಧಿಕಾರಿಗಳ ಗಮನ ಸೆಳೆಯಲಾಗಿದೆ’ ಎಂದು ಮುಖಂಡ ಕೆ.ರಂಗನಾಥ್ ಅವರು ಹೇಳಿದ್ದಾರೆ.
ಭೇಟಿ : ಕಲುಷಿತ ಕುಡಿಯುವ ನೀರು ಪೂರೈಕೆಯಾಗುತ್ತಿರುವುದಕ್ಕೆ ನಾಗರೀಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ನೀರು ಶುದ್ಧೀಕರಣ ಘಟಕ್ಕೆ ತಂಡೋಪತಂಡವಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು, ಸಂಘಸಂಸ್ಥೆಗಳ ಮುಖಂಡರು ಭೇಟಿಯಿತ್ತು ಪರಿಶೀಲಿಸಲಾರಂಭಿಸಿದ್ದಾರೆ.
In the wake of recent complaints of contaminated drinking water supply in Shimoga city, some leaders of the Congress party visited the water purification plant in Mandli and inspected it. Former Mahanagara Palika member HC Yogesh, leader K. Ranganath, South Block President Kalim Pasha, North Block President Shivakumar and others were present during the meeting.