shimoga rain | Shivamogga | Heavy rain in Malnad even before the start of monsoon! shimoga rain | ಶಿವಮೊಗ್ಗ | ಮುಂಗಾರು ಆರಂಭಕ್ಕೂ ಮುನ್ನವೇ ಮಲೆನಾಡಲ್ಲಿ ಭರ್ಜರಿ ಮಳೆ!

shimoga rain | ಶಿವಮೊಗ್ಗ : ಮೋಡ ಕವಿದ ವಾತಾವರಣ – ತುಂತುರು ಮಳೆ!

ಶಿವಮೊಗ್ಗ (shivamogga rain), ಡಿ. 9: ಹವಾಮಾನ ವೈಪರಿತ್ಯದ ಕಾರಣದಿಂದ ಡಿ. 9 ರ ಸೋಮವಾರ ಬೆಳಿಗ್ಗೆಯಿಂದ, ಶಿವಮೊಗ್ಗ ನಗರ ಹಾಗೂ ತಾಲೂಕಿನ ಹಲವೆಡೆ ಮೋಡ ಕವಿದ ವಾತಾವರಣ ನೆಲೆಸಿದೆ. ಆಗಾಗ್ಗೆ ಮಳೆಯಾಗುತ್ತಿದೆ!

ಇತ್ತೀಚೆಗೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾದ ಚಂಡಮಾರುತದಿಂದ, ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಮಳೆಯಾಗಿತ್ತು. ಫೆಂಗಲ್ ಚಂಡಮಾರುತದ ತೀವ್ರತೆ ಕಡಿಮೆಯಾದ ನಂತರ, ಮಳೆಯ ಪ್ರಮಾಣವು ಇಳಿಕೆಯಾಗಿತ್ತು.

ಇದೀಗ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಹವಾಮಾನ ವೈಪರೀತ್ಯದಿಂದ ಮತ್ತೆ ಮೋಡ ಕವಿದ ವಾತಾವರಣ ನೆಲೆಸುವಂತಾಗಿದೆ. ಇದು ರೈತರ ಆತಂಕಕ್ಕೆ ಕಾರಣವಾಗಿದೆ. ಸದ್ಯ ಜಿಲ್ಲೆಯಾದ್ಯಂತ ಬೆಳೆಗಳ ಕಟಾವು ಕಾರ್ಯ ಬಿರುಸುಗೊಂಡಿದೆ.

ಈ ವೇಳೆ ಮಳೆಯಾಗುತ್ತಿರುವುದರಿಂದ, ಬೆಳೆಗಳ ಕಟಾವು ಕಾರ್ಯ ಅಸ್ತವ್ಯಸ್ತವಾಗುವಂತಾಗಿದೆ. ಕಟಾವು ಮಾಡಿದ ಭತ್ತ, ರಾಗಿ ಮತ್ತೀತರ ಬೆಳೆ ಹಾಳಾಗುವಂತಾಗಿದೆ. ಸಮರ್ಪಕವಾಗಿ ಹಸನು ನಡೆಸಲು ಆಗದಂತಾಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.

ಭಾರೀ ಮಳೆ ಮುನ್ಸೂಚನೆ : ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತವಾಗಲಿದ್ದು, ಇದರ ಪ್ರಭಾವದಿಂದ ಮುಂದಿನ ಕೆಲ ದಿನಗಳವರೆಗೆ ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಂಗಾಳಕೊಲ್ಲಿಯಲ್ಲಿ ಎರಡು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದೆ. ಮೊದಲ ವಾಯುಭಾರ ಕುಸಿತದಿಂದ ಡಿಸೆಂಬರ್ 14 ಮತ್ತು 15 ರಂದು ಮಳೆಯಾಗಲಿದೆ. 2 ನೇ ವಾಯುಭಾರ ಕುಸಿತ ಡಿಸೆಂಬರ್‌ 16 ಕ್ಕೆ ಸಂಭವಿಸಲಿದ್ದು, ಡಿಸೆಂಬರ್ 17 – 18 ಕ್ಕೆ ಜೋರು ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

Due to extreme weather conditions, cloudy weather has prevailed in many parts of Shimoga city and taluk since Monday morning, December 9. It rains often! Recently, due to the cyclone caused by the depression in the Bay of Bengal, there were rains in various parts of Shimoga district. After the intensity of Cyclone Fengal decreased, the rainfall decreased.

bellary maternal death case - Rs 5 Lakh Relief announcement - CM ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣ : 5 ಲಕ್ಷ ರೂ. ಪರಿಹಾರ ಘೋಷಣೆ - ಸಿಎಂ Previous post ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣ : 5 ಲಕ್ಷ ರೂ. ಪರಿಹಾರ ಘೋಷಣೆ – ಸಿಎಂ
Former CMSM Krishna passed away: Holiday announced for government offices, schools and colleges on December 11! ಮಾಜಿ ಸಿಎಂ ಎಸ್ ಎಂ ಕೃಷ್ಣ ನಿಧನ : ಡಿಸೆಂಬರ್ 11 ರಂದು ಸರ್ಕಾರಿ ಕಚೇರಿ, ಶಾಲಾ – ಕಾಲೇಜುಗಳಿಗೆ Next post s m krishna passed away | ಡಿ. 11 ರಂದು ಸರ್ಕಾರಿ ಕಚೇರಿ, ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ!