ಶಿವಮೊಗ್ಗ (shivamogga), ಮಾರ್ಚ್ 08: ಕಳೆದ ವರ್ಷದ ಎಸ್ಎಸ್ಎಲ್’ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ತೇರ್ಗಡೆಯಾದ ಶಿವಮೊಗ್ಗದ ಬಿ ಹೆಚ್ ರಸ್ತೆಯ ಬಾಲಿಕಾ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಿಗೆ, ನಿವೃತ್ತ ಶಿಕ್ಷ ಮಹೇಶ್ ದಾನಪ್ಪ ಯಲಿಗಾರ್ ಅವರು ತಲಾ 1 ಸಾವಿರ ರೂ. ಪ್ರೋತ್ಸಾಹ ಧನ ನೀಡಿ ಸನ್ಮಾನಿಸಿದ್ದಾರೆ.
ಶಾಲೆಯಲ್ಲಿ ಆಯೋಜಿತವಾಗಿದ್ದ ಸರಸ್ವತಿ ಪೂಜೆ ಹಾಗೂ 10 ನೇ ತರಗತಿ ವಿದ್ಯಾರ್ಥಿನಿಯರಿಗೆ ಬಿಳ್ಕೋಡುಗೆ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಿದ್ದಾರೆ.

ಸಮಾರಂಭದಲ್ಲಿ ಮಾತನಾಡಿದ ಮಹೇಶ್ ದಾನಪ್ಪ ಯಲಿಗಾರ್ ಅವರು, ಪ್ರಸ್ತುತ ವರ್ಷ ಕೂಡ ಅತೀ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ಧನ ನೀಡಿ ಅಭಿನಂದಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
ಕ್ಷೇತ್ರ ಸಂಪನ್ಮೂಲ ಅಧಿಕಾರಿಯಾದ ಯತೀಶ್ ಅವರು ಮಾತನಾಡಿ, ಶ್ರದ್ದೆ – ನಿಷ್ಠೆಯಿಂದ ಅಭ್ಯಾಸ ಮಾಡಿದರೆ ಖಂಡಿತವಾಗಿಯೂ ಯಶಸ್ಸು ದೊರಕಲಿದೆ. ಇದನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿ ಜೀವನದ ಸದುಪಯೋಗ ಪಡಿಸಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಸನ್ಮಾನ : ವಯೋ ನಿವೃತ್ತಿ ಹೊಂದಿದ ಶಾಲೆಯ ಬಿಸಿಯೂಟ ತಯಾರಿಕಾ ಸಿಬ್ಬಂದಿ ಲಕ್ಷ್ಮಮ್ಮ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ ಪ್ರಾಂಶುಪಾಲರಾದ ಪಂಕಜ ಎಸ್ ಸಿ ರವರು ವಹಿಸಿದ್ದರು. ತಮ್ಮ ಭಾಷಣದಲ್ಲಿ ಎಸ್ಎಸ್ಎಲ್’ಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ಶಿಕ್ಷಕರಾದ ಆಶಾದೇವಿ, ಅಶೋಕ್, ಮಂಜುನಾಥ್, ಶೇಖರ್ ನಾಯಕ್ ಎಸ್, ಭಾರತಿ, ವೇದಾವತಿ, ಪವಿತ್ರ, ಸ್ಮಿತಾ ರಾವ್ ಎಸ್.ಎಲ್, ಚಿದಾನಂದ ಎಸ್ ಎಂ, ವಸಂತಕುಮಾರ್ ಕೆ ಬಿ ಸೇರಿದಂತೆ ಬೋಧಕೇರತ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Shivamogga : Incentive for SSLC High Scorers from Mahesh Danappa Yaligar
Shivamogga, March 08: Students of the Government Girls’ Pre-University College (High School Section) on B.H. Road, Shivamogga, who scored high marks in last year’s SSLC examination, were honored with an incentive of ₹1,000 each by retired teacher Mahesh Danappa Yaligar.
The felicitation took place during the Saraswati Pooja and farewell ceremony for 10th-grade students, where the meritorious students were recognized and rewarded.
Speaking at the event, Mahesh Danappa Yaligar announced that even this year, students achieving the highest marks will be congratulated with incentive awards.
Field Resource Officer Yatish, in his address, advised students that with dedication and sincerity in studies, success is certain. He emphasized that students should make the best use of their school life to achieve excellence in the future.
Honors: Retired school mid-day meal staff member Lakshmamma was also felicitated. The program was presided over by Vice-Principal Pankaj S.C., who shared words of guidance with the SSLC students.
Teachers including Ashadevi, Ashok, Manjunath, Shekhar Nayak S., Bharati, Vedavati, Pavitra, Smita Rao S.L., Chidananda S.M., Vasantkumar K.B., along with other staff members and students, were present at the ceremony.

