
shimoga | ಶಿವಮೊಗ್ಗ : ಅಕ್ರಮ ಮರಳು ಗಣಿಗಾರಿಕೆ ಸ್ಥಳದ ಮೇಲೆ ತಹಶೀಲ್ದಾರ್ ನೇತೃತ್ವದ ತಂಡದ ದಾಳಿ – ರಸ್ತೆಗೆ ಟ್ರಂಚ್!
ಶಿವಮೊಗ್ಗ(shivamogga), ಡಿ. 10: ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣಕ್ಕೆ, ಶಿವಮೊಗ್ಗ ತಾಲೂಕಿನ ಹೊಳಲೂರು ಹೋಬಳಿಯ ಹಾಡೋನಹಳ್ಳಿ ಗ್ರಾಮದ ತುಂಗಭದ್ರಾ ನದಿ ಸಮೀಪದ ರಸ್ತೆಯಲ್ಲಿ, ಡಿ. 10 ರ ಮಂಗಳವಾರ ಜೆಸಿಬಿ ಮೂಲಕ ಗುಂಡಿ ತೆಗೆದು ವಾಹನಗಳ ಸಂಚಾರಕ್ಕೆ ಆಸ್ಪದವಾಗದಂತೆ ತಾಲೂಕು ಆಡಳಿತ ಕ್ರಮಕೈಗೊಂಡ ಘಟನೆ ನಡೆದಿದೆ.
ಹಾಡೋನಹಳ್ಳಿ ಗ್ರಾಮದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಕುರಿತಂತೆ ವ್ಯಾಪಕ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ನೂತನ ತಹಶೀಲ್ದಾರ್ ವಿ ಎಸ್ ರಾಜೀವ್ ನೇತೃತ್ವದಲ್ಲಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿತ್ತು.
ಆದರೆ ದಾಳಿಯ ಮಾಹಿತಿ ಅರಿತ ಮರಳು ದಂಧೆಕೋರರು, ಸ್ಥಳದಿಂದ ಕಾಲ್ಕಿತ್ತಿದ್ದರು. ನದಿಪಾತ್ರಕ್ಕೆ ವಾಹನಗಳನ್ನು ಕೊಂಡೊಯ್ಯಲು ಆಸ್ಪದವಾಗದಂತೆ ದಂಧೆಕೋರರು ವಾಹನಗಳ ಸಂಚಾರಕ್ಕೆ ಬಳಕೆ ಮಾಡುತ್ತಿದ್ದ ಮಣ್ಣಿನ ರಸ್ತೆಗೆ ಜೆಸಿಬಿ ಮೂಲಕ ಟ್ರಂಚ್ ಹೊಡೆಯಲಾಗಿದೆ.
ಕ್ರಮ : ಮಂಗಳವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ತಹಶೀಲ್ದಾರ್ ವಿ ಎಸ್ ರಾಜೀವ್ ಅವರು ಮಾತನಾಡಿ, ‘ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಣೆ ತಡೆಗೆ ತಾಲೂಕು ಆಡಳಿತದಿಂದ ಅಗತ್ಯ ಕ್ರಮಕೈಗೊಳ್ಳಲಾಗುವುದು. ವಿವಿಧ ಇಲಾಖೆಗಳೊಂದಿಗೆ ದಿಢೀರ್ ದಾಳಿ ನಡೆಸಿ ಮಟ್ಟ ಹಾಕಲಾಗುವುದು’ ಎಂದು ತಿಳಿಸಿದ್ದಾರೆ.
In order to control illegal sand mining, an incident took place on the road near Tungabhadra river in Hadonahalli village of Holalur Hobali in Shimoga taluk, on Tuesday, December 10, the taluk administration took action to prevent vehicular traffic by removing potholes through JCB.