ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಭೂ ಸ್ವಾದೀನ ನಿರ್ಧಾರಕ್ಕೆ ಸಂಘಟನೆಯ ಆಕ್ಷೇಪ! Shimoga - Bhadravati Urban Development Authority's land acquisition decision objection of the organization!

shimoga | ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಭೂ ಸ್ವಾದೀನ ನಿರ್ಧಾರಕ್ಕೆ ಸಂಘಟನೆಯ ಆಕ್ಷೇಪ!

ಶಿವಮೊಗ್ಗ (shivamogga), ಡಿ. 21: ಶಿವಮೊಗ್ಗ ನಗರದ ಹೊರವಲಯ ಸೋಗಾನೆ ಗ್ರಾಮದಲ್ಲಿ ಬಗರ್ ಹುಕುಂ ಸಾಗುವಳಿ ಜಮೀನು ಸ್ವಾದೀನ ಮಾಡಿಕೊಳ್ಳದಂತೆ ಆಗ್ರಹಿಸಿ, ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರ (SUDA) ದ ಅಧ್ಯಕ್ಷರು ಹಾಗೂ ಆಯುಕ್ತರಿಗೆ ಡಿ. 21 ರಂದು ಪ್ರಾಧಿಕಾರದ ಕಚೇರಿಯಲ್ಲಿ ಕರುನಾಡು ಸಂರಕ್ಷಣಾ ವೇದಿಕೆ ಮನವಿ ಪತ್ರ ಅರ್ಪಿಸಿದೆ.

ಸೋಗಾನೆ ಗ್ರಾಮದ ಸರ್ವೇ ನಂಬರ್ 156 ರಲ್ಲಿ ಜಮೀನು ಸ್ವಾದೀನಕ್ಕೆ ನಗರಾಭಿವೃದ್ದಿ ಪ್ರಾಧಿಕಾರವು ಕ್ರಮಕೈಗೊಂಡಿದೆ. ಸದರಿ ಸರ್ವೇ ನಂಬರ್ ನಲ್ಲಿ ಸುಮಾರು 40 ರೈತ ಕುಟುಂಬಗಳು ತಲತಲಾಂತರದಿಂದ ಸಾಗುವಳಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡಿಕೊಂಡು ಬರುತ್ತಿವೆ ಎಂದು ಸಂಘಟನೆ ತಿಳಿಸಿದೆ.

ಬಹುತೇಕ ಸಾಗುವಳಿದಾರರು ಪರಿಶಿಷ್ಟ ಜಾತಿ – ಪಂಗಡದವರಾಗಿದ್ದಾರೆ. ವಿವಿಧ ಬೆಳೆಗಳನ್ನು ಬೆಳೆದುಕೊಂಡು ಬರುತ್ತಿದ್ದಾರೆ. ಸಾಗುವಳಿ ಜಮೀನಿಗೆ ಹಕ್ಕುಪತ್ರ ನೀಡುವಂತೆ ಕೋರಿ, ರೈತರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು ಎಂದು ಸಂಘಟನೆ ತಿಳಿಸಿದೆ.

ಈ ಹಿಂದೆ ಸದರಿ ಜಮೀನುಗಳಲ್ಲಿ ಗೋಡೌನ್ ನಿರ್ಮಾಣಕ್ಕೆ ಎಫ್ ಸಿ ಐ ಮುಂದಾಗಿದ್ದ ವೇಳೆ, ನ್ಯಾಯಾಲಯ ಪ್ರಕರಣದ ಕಾರಣದಿಂದ ನಿರ್ಧಾರ ಕೈಬಿಟ್ಟಿತ್ತು. ಹಾಗೆಯೇ ಹಕ್ಕಿಪಿಕ್ಕಿ ಸಮುದಾಯದವರಿಗೆ ನಿವೇಶನ ವಿತರಣೆ ಮಾಡುವ ಕ್ರಮವನ್ನು ಅಧಿಕಾರಿಗಳು ಕೈಬಿಟ್ಟಿದ್ದರು ಎಂದು ಸಂಘಟನೆ ತಿಳಿಸಿದೆ.

ಇದೀಗ ನಗರಾಭಿವೃದ್ದಿ ಪ್ರಾಧಿಕಾರವು ಸದರಿ ಸರ್ವೇ ನಂಬರ್ ಜಮೀನು ಸ್ವಾದೀನ ಉದ್ದೇಶದಿಂದ ಸರ್ವೆ ಕಾರ್ಯ ಆರಂಭಕ್ಕೆ ಮುಂದಾಗಿರುವ ಮಾಹಿತಿ ಸರಿಯಲ್ಲ. ಯಾವುದೇ ಕಾರಣಕ್ಕೂ ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲ. ಭೂ ಸ್ವಾದೀನಕ್ಕೆ ಮುಂದಾದರೆ ಹೋರಾಟ ನಡೆಸಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿದೆ.

ಮನವಿ ಅರ್ಪಿಸುವ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಶಿವಮೂರ್ತಿ ಎಸ್ ಪಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

The Karunadu Conservation Forum submitted a petition to the chairman and commissioner of the Shimoga-Bhadravati Urban Development Authority at the authority’s office on December 21, demanding that Bagar Hukum cultivation land not be acquired in the outskirts of Sogane village of Shimoga city. #suda, #SUDA, #ShimogaBhadravatiUrbanDevelopmentAuthority, #Shimoga – Bhadravati Urban Development Authority’

Shimoga: Road widening work - electricity supply cut off in various places on January 4! shimoga | ಶಿವಮೊಗ್ಗ : ರಸ್ತೆ ಅಗಲೀಕರಣ ಕಾಮಗಾರಿ - ಜ. 4 ರಂದು ವಿವಿಧೆಡೆ ವಿದ್ಯುತ್ ಪೂರೈಕೆ ಸ್ಥಗಿತ! Previous post Shimoga | ಶಿವಮೊಗ್ಗ : ಡಿ. 22 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
shimoga | What is Shimoga-Bhadravati Urban Development Authority's promise to farmers? ರೈತರಿಗೆ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಭರವಸೆಯೇನು? Next post shimoga | ರೈತರಿಗೆ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಭರವಸೆಯೇನು?