
shimoga news | ಶಿವಮೊಗ್ಗ : ಪತ್ನಿಯ ಕೊ*ಲೆ – ಪತಿಯ ಸೆರೆ!
ಶಿವಮೊಗ್ಗ (shivamogga), ಡಿ. 22: ಕೌಟಂಬಿಕ ಕಲಹದ ಹಿನ್ನೆಲೆಯಲ್ಲಿ, ಪತಿಯೋರ್ವ ಪತ್ನಿಗೆ ಚೂರಿಯಿಂದ ಇರಿದು ಕೊ*ಲೆ ಮಾಡಿರುವ ಘಟನೆ, ಶಿವಮೊಗ್ಗ ನಗರದ ವಾದಿ ಎ ಹುದಾ ಬಡಾವಣೆ 2 ನೇ ಮುಖ್ಯ ರಸ್ತೆ 5 ನೇ ಕ್ರಾಸ್ ನಲ್ಲಿ ಡಿ. 22 ರ ಬೆಳಿಗ್ಗೆ 8. 30 ರ ಸುಮಾರಿಗೆ ನಡೆದಿದೆ.
ಎಸಿ ಮೆಕಾನಿಕ್ ಕೆಲಸ ಮಾಡುವ ಯೂಸೂಫ್ ರೌಫ್ (45) ಆರೋಪಿತ ಪತಿ. ರುಕ್ಸನಾ (38) ಕೊ*ಲೆಗೀಡಾದ ಪತ್ನಿ ಎಂದು ಗುರುತಿಸಲಾಗಿದೆ. ತುಂಗಾನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.
ಕೌಟಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಮನೆಯಲ್ಲಿ ಬೆಳಿಗ್ಗೆ ಪತಿ ಹಾಗೂ ಪತ್ನಿ ನಡುವೆ ಕಲಹ ಏರ್ಪಟ್ಟಿದೆ. ಇದು ವಿಕೋಪಕ್ಕೆ ತಿರುಗಿ, ಆರೋಪಿಯು ಚಾಕುವಿನಿಂದ ಪತ್ನಿಗೆ ಇರಿದು ಕೊ*ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಎಸ್ಪಿ ಜಿ ಕೆ ಮಿಥುನ್ ಕುಮಾರ್, ಡಿವೈಎಸ್ಪಿ ಬಾಬು ಆಂಜನಪ್ಪ, ಇನ್ಸ್’ಪೆಕ್ಟರ್ ಕೆ ಟಿ ಗುರುರಾಜ್ ಮತ್ತವರ ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
SP GK Mithun Kumar, DySP Babu Anjanappa, Inspector KT Gururaj visited the incident site and conducted an inspection. A case has been registered in Tunganagar police station in this regard. #shimogacrimenews, #crime, #crimenews, #shimoganewsupdate, #shivamogganewsupdate,