ಆನವಟ್ಟಿ (ಸೊರಬ), ಜ. 2: ತವರು ಮನೆಯಿಂದ ಪತಿ ಮನೆಗೆ ಮಗಳೊಂದಿಗೆ ತೆರಳಿದ ತಾಯಿಯೋರ್ವಳು, ನಿಗೂಢವಾಗಿ ಕಣ್ಮರೆಯಾದ ಘಟನೆ ಸಂಬಂಧ ಸೊರಬ ತಾಲೂಕು ಆನವಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಈ ಕುರಿತಂತೆ ಪೊಲೀಸ್ ಇಲಾಖೆ ಜ. 2 ರಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಉತ್ತರ ಕನ್ನಡ ಜಿಲ್ಲೆ ಕುಮಟಾ ನಗರದ ನಿವಾಸಿ ಮಹಾದೇವ ಭೋವಿ ಎಂಬುವವರ ಪತ್ನಿ 30 ವರ್ಷದ ಹೊನ್ನಮ್ಮ ಹಾಗೂ 8 ವರ್ಷದ ದೀಪ್ತಿ ನಾಪತ್ತೆಯಾದವರೆಂದು ಗುರುತಿಸಲಾಗಿದೆ.
ಸೊರಬ ತಾಲೂಕು ನೆಗವಾಡಿ ತಾಂಡದಲ್ಲಿರುವ ತಾಯಿ ಮನೆಗೆ 2024 ರ ನವೆಂಬರ್ ತಿಂಗಳಲ್ಲಿ ಆಗಮಿಸಿದ್ದರು. ತದನಂತರ ಡಿಸೆಂಬರ್ 1 ರಂದು ತವರು ಮನೆಯಿಂದ ವಾಪಾಸ್ ಗಂಡನ ಮನೆಗೆಂದು ಮಗಳೊಂದಿಗೆ ಹೊರಟಿದ್ದರು.
ಆನವಟ್ಟಿ ಪಟ್ಟಣದಿಂದ ಕೆಎಸ್ಆರ್’ಟಿಸಿ ಬಸ್ ಮೂಲಕ ತೆರಳಿದ್ದರು. ಆದರೆ ಪತಿಗೆ ಮನಗೆ ಹೋಗದೆ ಪುತ್ರಿಯೊಂದಿಗೆ ಕಾಣೆಯಾಗಿದ್ದಾರೆ. ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಎಲ್ಲಿಯೂ ತಾಯಿ, ಮಗಳ ಸುಳಿವು ಪತ್ತೆಯಾಗಿಲ್ಲ.
ಮಹಿಳೆಯು 5.4 ಅಡಿ ಎತ್ತರ, ಬಿಳಿ ಮೈಬಣ್ಣ, ದಪ್ಪ ಮೈಕಟ್ಟು ಹೊಂದಿದ್ದಾರೆ. ತಾಯಿ – ಮಗಳ ಸುಳಿವು ದೊರೆತಲ್ಲಿ ಜಿಲ್ಲಾ ಪೊಲೀಸ್ ಠಾಣೆ : 08182 – 261413, ಶಿಕಾರಿಪುರ ಪೊಲಿಸ್ ಠಾಣೆ ದೂರವಾಣಿ ಸಂಖ್ಯೆ : 08187-222443,
ಸೊರಬ ವೃತ್ತ ಪೊಲೀಸ್ ಠಾಣೆ 08184-272122 / 9480803339, ಆನವಟ್ಟಿ ಪೊಲೀಸ್ ಠಾಣೆ : 08184-267135 / 9480803369 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
Anavatti (Soraba), Jn. 2: A complaint has been registered at Sorab taluk Anavatti police station regarding the mysterious disappearance of a mother who went to her husband’s house with her daughter.
In this regard, the police department A press release was issued on janauary 2. 30-year-old Honnamma and 8-year-old Deepti, the wife of Mahadeva Bhovi, a resident of Kumta Nagar in Uttara Kannada district, have been identified as missing.
The police release said to contact Soraba Circle Police Station 08184-272122 / 9480803339, Anavatti Police Station : 08184-267135 / 9480803369 for information.

