soraba news | ಕುರಿ ಶೆಡ್ ನಿರ್ಮಿಸುವುದಾಗಿ ಲಕ್ಷಾಂತರ ರೂ. ವಂಚಿಸಿದ್ದ ಆರೋಪಿಯ ಬಂಧನ!

crime news

ಸೊರಬ (soraba), ಜುಲೈ 25: ಕುರಿ ಶೆಡ್ ನಿರ್ಮಿಸಿ ಕೊಡುವುದಾಗಿ ನಂಬಿಸಿ, ವ್ಯಕ್ತಿಯೋರ್ವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿದ್ದ ಆರೋಪಿಯನ್ನು ಬಂಧಿಸುವಲ್ಲಿ ಶಿವಮೊಗ್ಗ ಜಿಲ್ಲೆಯ ಸೊರಬ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಾಗರ ತಾಲೂಕು ಕೊರ್ಲಿಕೊಪ್ಪ ಗ್ರಾಮದ ನಿವಾಸಿ ಸುರೇಶ್ (38) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನಿಂದ 5.20 ಲಕ್ಷ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಏನೀದು ಪ್ರಕರಣ? : ಸೊರಬ ತಾಲೂಕಿನ ಇಂಡಿಹಳ್ಳಿಯ ನಿವಾಸಿ, ದೂರುದಾರರಾದ ಅಣ್ಣಪ್ಪ ಎಂಬುವರಿಗೆ ಆರೋಪಿಯು, ಕುರಿ ಶೆಡ್ ನಿರ್ಮಿಸಿ ಕೊಡುವುದಾಗಿ 5,50,000 ರೂ ಪಡೆದು ಮೋಸ ಮಾಡಿದ್ದ. ಈ ಕುರಿತಂತೆ ದೂರುದಾರರು ಸೊರಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸೊರಬ ಪೊಲೀಸ್ ಠಾಣೆಯ ಪಿ.ಎಸ್.ಐ ನವೀನ್ ಎಂ ಹೆಚ್, ಸಿಬ್ಬಂದಿಗಳಾದ ಕೊಟ್ರೇಶಪ್ಪ ಎಸ್, ಗಿರೀಶ್ ಕೆ ಹೆಚ್, ರಾಜುನಾಯ್ಕ ಎಲ್, ರಾಘವೇಂದ್ರ, ವಿನಯ್ ರವರು ಹನಗವಾಡಿ ಗ್ರಾಮದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Accused arrested for defrauding a person of lakhs of rupees by promising to build a sheep shed! | Soraba, July 25: The Soraba police station in Shivamogga district have succeeded in arresting an accused who had defrauded a person of lakhs of rupees by promising to build a sheep shed.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *