accident news | ಆನವಟ್ಟಿ : ಪಲ್ಟಿಯಾಗಿ ಬಿದ್ದ ಮದುವೆ ಬಸ್ – ಹಲವರಿಗೆ ಗಾಯ!

accident news | ಆನವಟ್ಟಿ : ಪಲ್ಟಿಯಾಗಿ ಬಿದ್ದ ಮದುವೆ ಬಸ್ - ಹಲವರಿಗೆ ಗಾಯ! Bus on its way to a wedding ceremony overturned - several injured!

ಆನವಟ್ಟಿ (anavatti), ಮೇ 09: ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ವೊಂದು ಪಲ್ಟಿಯಾಗಿ ಬಿದ್ದ ಘಟನೆ ಮೇ 09 ರಂದು ಬೆಳಿಗ್ಗೆ ಸೊರಬ ತಾಲೂಕಿನ ಆನವಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾರ್ಕೋಡು ಎಂಬ ಸ್ಥಳದ ಬಳಿ ನಡೆದಿದೆ.

ಸಾಗರ  ಮೂಲದ ಖಾಸಗಿ ಸಂಸ್ಥೆಗೆ ಸೇರಿದ ಬಸ್ ಅಪಘಾತಕ್ಕೀಡಾಗಿದ್ದು ಎಂದು ಗುರುತಿಸಲಾಗಿದೆ. ಸದರಿ ಬಸ್ ಸಿದ್ದಾಪುರದಿಂದ ಹಾನಗಲ್ ಕಡೆ ತೆರಳುತ್ತಿತ್ತು. ಚಾಲನೆಯ ನಿಯಂತ್ರಣ ಕಳೆದುಕೊಂಡ ಬಸ್ ಪಲ್ಟಿಯಾಗಿದೆ ಎಂದು ಹೇಳಲಾಗಿದೆ.

ಘಟನೆಯಲ್ಲಿ ಸರಿಸುಮಾರು 10 ಕ್ಕೂ ಅಧಿಕ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದೆ. ಎಲ್ಲ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ಧಾರೆ ಎಂದು ತಿಳಿದುಬಂದಿದೆ.

ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಘಟನಾ ಸ್ಥಳಕ್ಕೆ ಆನವಟ್ಟಿ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.

Bus on its way to a wedding ceremony overturned – several injured!

Shivamogga, May 09: A private bus on its way to a wedding ceremony overturned on the morning of May 09 near a place called Karkodu under Anavatti police station limits in Soraba taluk.

The bus has been identified as belonging to a private organization based in Sagar. The bus was heading towards Hangal from Siddapur. It is said that the bus lost control and overturned.

Approximately more than 10 passengers suffered minor injuries in the incident. It is learnt that all the passengers escaped unhurt.

The injured have been admitted to a nearby hospital and are being given primary treatment. Anavatti police have visited the scene of the incident and are conducting an investigation. More details about the incident are yet to be made available.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *