
shimoga | ಶಿವಮೊಗ್ಗ ಪಾಲಿಕೆಯಲ್ಲಿ ಇ – ಖಾತಾ ಗೊಂದಲ : ನಾಗರೀಕರ ಪರದಾಟ – ಗಮನಹರಿಸುವರೆ ಡಿಸಿ, ಆಯುಕ್ತರು?
ವರದಿ : ಬಿ. ರೇಣುಕೇಶ್
ಶಿವಮೊಗ್ಗ (shivamogga), ಫೆ. 5: ನಗರ – ಪಟ್ಟಣ ಪ್ರದೇಶಗಳಲ್ಲಿನ ಸ್ಥಿರಾಸ್ತಿ ನೊಂದಣಿಗೆ, ಸ್ಥಳಿಯಾಡಳಿತಗಳ ಇ-ಖಾತಾ ಹೊಂದಿರುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಆದರೆ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ, ಇ-ಖಾತಾ ಮಾಡಿಸಲು ನಾಗರೀಕರು ಪರದಾಡುವಂತಾಗಿದೆ. ಸದ್ಯಕ್ಕೆ ಗೊಂದಲ ಪರಿಹಾರವಾಗುವ ಲಕ್ಷಣಗಳು ಗೋಚರವಾಗುತ್ತಿಲ್ಲವಾಗಿದೆ!
ಕಳೆದ ಸರಿಸುಮಾರು 30 ವರ್ಷಗಳ ಹಿಂದೆಯೇ ನಗರಸಭೆ ವ್ಯಾಪ್ತಿಗೆ ಸೇರಿರುವ, ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರದೇಶಗಳ ಸ್ಥಿರಾಸ್ತಿಗಳ ಇ-ಖಾತಾ ಮಾಡಿಕೊಡಲು ಪಾಲಿಕೆಯ ಕಂದಾಯ ವಿಭಾಗದಲ್ಲಿ ಮೀನಮೇಷ ಎಣಿಸಲಾಗುತ್ತಿದೆ. ಸಮರ್ಪಕ ದಾಖಲೆ ಸಲ್ಲಿಸಿದರೂ ಸರ್ಕಾರದ ಆದೇಶವಿಲ್ಲವೆಂದು ಅಧಿಕಾರಿ – ಸಿಬ್ಬಂದಿಗಳು ಸಬೂಬು ಹೇಳುತ್ತಿದ್ದಾರೆ.
ಇದರಿಂದ ಸಮರ್ಮಪಕ ದಾಖಲೆ ಹೊಂದಿರುವ ಲಕ್ಷಾಂತರ ಸ್ಥಿರಾಸ್ತಿ ಮಾಲೀಕರು, ಇ-ಖಾತಾ ಮಾಡಿಸಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಕಚೇರಿಗೆ ಅಲೆದಾಡುತ್ತಿದ್ದಾರೆ. ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದು, ಆಡಳಿತದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ನಾಗರೀಕರು ಇಷ್ಟೆಲ್ಲ ತೊಂದರೆ ಅನುಭವಿಸುತ್ತಿದ್ದರು, ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ. ತಮಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಕೆಲ ಸ್ಥಿರಾಸ್ತಿ ಮಾಲೀಕರು ಅಳಲು ತೋಡಿಕೊಳ್ಳುತ್ತಾರೆ.
ಪರಿಹಾರ ಕಲ್ಪಿಸಿ : ಕಳೆದ 30 ವರ್ಷಗಳ ಹಿಂದೆಯೇ, ಗ್ರಾಪಂ ಆಡಳಿತದಿಂದ ನಗರಸಭೆ ಅಧೀನಕ್ಕೆ ತೆಗೆದುಕೊಳ್ಳಲಾದ ಪ್ರದೇಶಗಳ ಸ್ಥಿರಾಸ್ತಿ ಮಾಲೀಕರು ಇ-ಖಾತಾ ಮಾಡಿಸಿಕೊಳ್ಳಲು ಎದುರಿಸುತ್ತಿರುವ ಸಮಸ್ಯೆ ಪರಿಹಾರಕ್ಕೆ ಮಹಾನಗರ ಪಾಲಿಕೆ ಆಡಳಿತ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ.
ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಐದಾರು ದಶಕಗಳ ಹಿಂದಿನ ದಾಖಲೆ ಹೊಂದಿದ್ದರೂ, ಇ – ಖಾತಾ ಮಾಡಿಕೊಡಲು ಮೀನಮೇಷ ಎಣಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಪಾಲಿಕೆ ಕಂದಾಯ ವಿಭಾಗದಲ್ಲಿ ಸಮರ್ಪಕ ಮಾಹಿತಿಯೂ ಲಭ್ಯವಾಗುತ್ತಿಲ್ಲವಾಗಿದೆ.
ಈ ಕಾರಣದಿಂದ ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ಅವರು ಸದರಿ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ. ಸಮಸ್ಯೆ ಪರಿಹಾರಕ್ಕೆ ಕಾರ್ಯನೋರ್ನುಖರಾಗಬೇಕಾಗಿದೆ. ಈ ಮೂಲಕ ಸಾವಿರಾರು ಸ್ಥಿರಾಸ್ತಿ ಮಾಲೀಕರಿಗೆ ಅನುಕೂಲ ಕಲ್ಪಿಸಿಕೊಡಬೇಕಾಗಿದೆ ಎಂದು ನಾಗರೀಕರು ಆಗ್ರಹಿಸುತ್ತಾರೆ.
Shimoga, Feb 4: The state government has made it mandatory to have an e-khata for immovable property registration and local governments in city-town areas. But citizens are struggling to make e-khata in Shimoga Municipal Corporation. As of now, there are no visible signs of a solution to the confusion!
E-khata of immovable properties of areas under the jurisdiction of Gram Panchayat, which came under the jurisdiction of Municipal Council since last 30 years or so, is not being done. Officers and staff are saying that there is no order from the government despite submitting adequate documents.