Wife's friend assaulted by husband at Shimoga Government Megan Hospital - Video viral! ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಪತ್ನಿಯ ಸ್ನೇಹಿತೆ ಮೇಲೆ ಪತಿಯಿಂದ ಹಲ್ಲೆ - ವೀಡಿಯೋ ವೈರಲ್!

shimoga | ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಪತ್ನಿಯ ಸ್ನೇಹಿತೆ ಮೇಲೆ ಪತಿಯಿಂದ ಹಲ್ಲೆ – ವೀಡಿಯೋ ವೈರಲ್!

ಶಿವಮೊಗ್ಗ (shivamogga), ಫೆ. 22: ಶಿವಮೊಗ್ಗ ನಗರದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ವಾರ್ಡ್ ವೊಂದರಲ್ಲಿ, ವ್ಯಕ್ತಿಯೋರ್ವ ತನ್ನ ಪತ್ನಿಯ ಸ್ನೇಹಿತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ ಘಟನೆಯ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

ಶಿವಮೊಗ್ಗದ ವಿನೋಬನಗರ ನಿವಾಸಿಗಳಾದ ದಂಪತಿ ನಡುವೆ ಕಲಹವಾಗಿದೆ. ಪತ್ನಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥರಾಗಿದ್ದ ಮಹಿಳೆಯನ್ನು, ಅವರ ಸ್ನೇಹಿತೆಯೋರ್ವರು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಸಿದ್ದರು ಎನ್ನಲಾಗಿದೆ.

ಈ ಕುರಿತಂತೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ. ಈ ನಡುವೆ ಪತ್ನಿಯನ್ನು ನೋಡಲು ಪತಿ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ಆಗಮಿಸಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಪತ್ನಿಯ ಸ್ನೇಹಿತೆಯ ಮೇಲೆ ಕೋಪಗೊಂಡಿದ್ದಾನೆ.

ಸದರಿ ಘಟನೆಗೆ ಸ್ನೇಹಿತೆಯೇ ಕಾರಣವೆಂದು ಆರೋಪಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸಲಾರಂಭಿಸಿದ್ದಾನೆ. ಮಹಿಳೆಯು ಕೂಡ ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕೈ ಮಿಲಾಯಿಸಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಆತನನ್ನು ಕರೆದೊಯ್ದಿದ್ದಾರೆ.

ಸದರಿ ಘಟನೆಯನ್ನು ಮೊಬೈಲ್ ಫೋನ್ ನಲ್ಲಿ ಕೆಲವರು ಚಿತ್ರೀಕರಿಸಿಕೊಂಡಿದ್ದರು. ಸದರಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಕುರಿತಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.

Shimoga, Feb 22: A video of a man verbally abusing and assaulting his wife’s friend in a ward of Government Megan Hospital in Shimoga has gone viral on social media. Some people filmed the incident on their mobile phones. The said video has gone viral on social media. It is learned that a complaint has been registered in Doddapet police station in this regard.

Shivamogga: Omission in refrigerator repair - Order to compensate the customer! shimoga | ಶಿವಮೊಗ್ಗ : ರೆಫ್ರಿಜರೇಟರ್ ದುರಸ್ತಿಯಲ್ಲಿ ಲೋಪ - ಗ್ರಾಹಕನಿಗೆ ಪರಿಹಾರ ನೀಡಲು ಆದೇಶ! Previous post shimoga | ಐ ಪೋನ್ ಡಿಸ್ ಪ್ಲೇ ಸರಿಪಡಿಸಿ ಕೊಡದ ಆರೋಪ : ಶಿವಮೊಗ್ಗ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಹತ್ವದ ತೀರ್ಪು!
shimoga | Shimoga: Heavy tax unnecessary restrictions - what is the minister's instruction to the commercial tax department? shimoga | ಶಿವಮೊಗ್ಗ : ಭಾರೀ ತೆರಿಗೆ, ಅನಗತ್ಯ ನಿರ್ಬಂಧ - ವಾಣಿಜ್ಯ ತೆರಿಗೆ ಇಲಾಖೆಗೆ ಸಚಿವರ ಸೂಚನೆಯೇನು? Next post shimoga | ಶಿವಮೊಗ್ಗ : ಭಾರೀ ತೆರಿಗೆ, ಅನಗತ್ಯ ನಿರ್ಬಂಧ – ವಾಣಿಜ್ಯ ತೆರಿಗೆ ಇಲಾಖೆಗೆ ಸಚಿವರ ಸೂಚನೆಯೇನು?