Shimoga | Shivamogga: Inspection by Water Board officials - Solution to drinking water woes! shimoga | ಶಿವಮೊಗ್ಗ : ಜಲ ಮಂಡಳಿ ಅಧಿಕಾರಿಗಳಿಂದ ಪರಿಶೀಲನೆ - ಕುಡಿಯುವ ನೀರಿನ ಹಾಹಾಕಾರಕ್ಕೆ ಪರಿಹಾರ!

shimoga | ಶಿವಮೊಗ್ಗ : ಜಲ ಮಂಡಳಿ ಅಧಿಕಾರಿಗಳ ಭೇಟಿ – ಕುಡಿಯುವ ನೀರಿನ ಹಾಹಾಕಾರಕ್ಕೆ ಪರಿಹಾರ!

ಶಿವಮೊಗ್ಗ (shivamogga), ಮಾ. 22: ಶಿವಮೊಗ್ಗ ನಗರದ ಹೊರವಲಯ ಜೆ ಹೆಚ್ ಪಟೇಲ್ ಬಡಾವಣೆ, ಸೋಮಿನಕೊಪ್ಪ, ಕೆಹೆಚ್’ಬಿ ಪ್ರೆಸ್ ಕಾಲೋನಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಕೆಲ ದಿನಗಳಲ್ಲಿಯೇ 24X7 ಯೋಜನೆಯಡಿ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದು ಜಲ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ (ಎಇಇ) ಮಿಥುನ್ ಕುಮಾರ್ ತಿಳಿಸಿದ್ದಾರೆ.

ಮಾರ್ಚ್ 22 ರ ಶನಿವಾರ ಸೋಮಿನಕೊಪ್ಪ ಸುತ್ತಮುತ್ತಲಿನ ಬಡಾವಣೆಗಳ ಹಲವೆಡೆ ಮನೆಗಳಿಗೆ ಭೇಟಿ ನೀಡಿ, 24X7 ಯೋಜನೆಯಡಿ ಪ್ರಾಯೋಗಿಕವಾಗಿ ಹರಿಸಲಾದ ನೀರಿನ ಪೂರೈಕೆ ಪರಿಶೀಲನೆ ನಡೆಸಿದರು. ಸಾರ್ವಜನಿಕರ ಅಹವಾಲು ಆಲಿಸಿದರು. ನಂತರ ಅವರು ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.

ನಗರದ ಹೊರವಲಯದ ಸೋಮಿನಕೊಪ್ಪ, ಕೆಹೆಚ್’ಬಿ ಪ್ರೆಸ್ ಕಾಲೋನಿ, ಜೆ ಹೆಚ್ ಪಟೇಲ್ ಬಡಾವಣೆ, ಸಹಕಾರಿ ನಗರ, ಎಂಎಂಎಸ್ ಲೇಔಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಶೀಘ್ರವೇ 24X7 ಯೋಜನೆಯಡಿ ಕುಡಿಯುವ ನೀರು ಪೂರೈಕೆ ಮಾಡಲಾಗುವುದು. ಪೈಪ್ ಲೈನ್ ದುರಸ್ತಿ ಕಾರ್ಯ ಪೂರ್ಣಗೊಂಡಿರುವ ಪ್ರದೇಶಗಳಿಗೆ ನಾಳೆಯಿಂದಲೇ ನೀರು ಹರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಜಲ ಮಂಡಳಿ ಎಂಜಿನಿಯರ್ ಜೀವನ್, ಕಾಮಗಾರಿ ನಿರ್ವಹಣೆ ಮಾಡುತ್ತಿರುವ ಮಧು ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ನೆನೆಗುದಿಗೆ ಬಿದ್ದಿದ್ದ ಯೋಜನೆ : ಸೋಮಿನಕೊಪ್ಪ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ತೀವ್ರ ಸ್ವರೂಪದಲ್ಲಿದೆ. ಮತ್ತೊಂದೆಡೆ, 24*7 ಯೋಜನೆಯಡಿ ಪೈಪ್ ಲೈನ್ ಅಳವಡಿಕೆಯಾಗಿ ಎರಡೂ ವರ್ಷವಾದರು ನೀರು ಪೂರೈಕೆಯಾಗಿರಲಿಲ್ಲ. ಇದಕ್ಕೆ ನಾಗರೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಯೋಜನೆ ನೆನೆಗುದಿಗೆ ಬೀಳುವಂತಾಗಿತ್ತು.

ಈ ಸಂಬಂಧ ಜಲ ಮಂಡಳಿ ಕಾರ್ಯಪಾಲಕ ಅಭಿಯಂತರ ರವಿಕುಮಾರ್, ಎಇಇ ಮಿಥುನ್ ಕುಮಾರ್, ಎಇ ಜೀವನ್ ಅವರು ಕಾಲಮಿತಿಯೊಳಗೆ ನೀರು ಪೂರೈಕೆಗೆ ಕ್ರಮಕೈಗೊಳ್ಳುವ ಭರವಸೆ ನೀಡಿದ್ದರು. ಇದೀಗ ಅಧಿಕಾರಿಗಳು ನೀಡಿದ್ದ ಭರವಸೆಯಂತೆ ನೀರು ಪೂರೈಕೆಗೆ ಕ್ರಮಕೈಗೊಂಡಿದ್ದಾರೆ. ಅಧಿಕಾರಿಗಳ ಪ್ರಾಮಾಣಿಕ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಸ್ಥಳೀಯ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Shivamogga, Mar 22: Drinking water will be supplied to the surrounding areas including JH Patel Layout, Sominakoppa, KHB Press Colony on the outskirts of Shivamogga city under the 24X7 scheme within a few days, said Mithun Kumar, AEE, Water Board. Water Board Engineer Jeevan were present on the occasion.

Siganduru Bridge | Siganduru Bridge asphalting begins! siganduru bridge | ಸಿಗಂದೂರು ಸೇತುವೆ ಡಾಂಬರೀಕರಣ ಆರಂಭ! Previous post siganduru bridge | ಸಿಗಂದೂರು ಸೇತುವೆ ಡಾಂಬರೀಕರಣ ಆರಂಭ!
Shivamogga: Bhadra Canal short bridge collapses – Minister visits shimoga | ಶಿವಮೊಗ್ಗ : ಭದ್ರಾ ನಾಲೆ ಕಿರು ಸೇತುವೆ ಕುಸಿತ – ಸಚಿವರ ಭೇಟಿ Next post shimoga | ಶಿವಮೊಗ್ಗ : ಭದ್ರಾ ನಾಲೆ ಕಿರು ಸೇತುವೆ ಕುಸಿತ – ಸಚಿವರ ಭೇಟಿ