
siganduru bridge | ಸಿಗಂದೂರು ಸೇತುವೆ ಡಾಂಬರೀಕರಣ ಆರಂಭ!
ಸಾಗರ (sagara), ಮಾ. 22: ದಶಕಗಳ ಬೇಡಿಕೆಯಾದ ಸಿಗಂದೂರು ಸೇತುವೆ ನಿರ್ಮಾಣ ಕಾರ್ಯ ಸಮರೋಪಾದಿಯಾಗಿ ಸಾಗಿದ್ದು, ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿವೆ. ಈ ನಡುವೆ ಕಳೆದ ಕೆಲ ದಿನಗಳಿಂದ, ಸೇತುವೆ ಡಾಂಬರೀಕರಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಈ ಸಂಬಂಧ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ಅವರ ಕಚೇರಿ ಮಾಧ್ಯಮ ತಂಡವು, ಸೇತುವೆ ಡಾಂಬರೀಕರಣದ ಪೋಟೋಗಳನ್ನು ಮಾರ್ಚ್ 22 ರಂದು ಬಿಡುಗಡೆ ಮಾಡಿದೆ.
ಸೇತುವೆ ತಡೆಗೋಡೆ ಕೆಲಸ ಪೂರ್ಣಗೊಂಡಿದ್ದು, ಡಾಂಬರೀಕರಣ ಕಾಮಗಾರಿ ಬಿರುಸುಗೊಂಡಿದೆ. ಇದು ಅಂತ್ಯಗೊಂಡ ನಂತರ, ವಾಹನಗಳ ಪ್ರಾಯೋಗಿಕ ಸಂಚಾರಕ್ಕೆ ಅವಕಾಶ ಕಲ್ಪಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಎಲ್ಲ ಅಂದುಕೊಂಡಂತೆ ನಡೆದರೆ, ಮೇ ತಿಂಗಳಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಂದ ಅಧಿಕೃತವಾಗಿ ಸೇತುವೆ ಲೋಕಾರ್ಪಣೆಗೊಳ್ಳಲಿದ್ದು, ದಿನಾಂಕ ಇನ್ನಷ್ಟೆ ನಿಗದಿಯಾಗಬೇಕಾಗಿದೆ.
ದಾಖಲೆ : ಸಿಗಂದೂರು ಸೇತುವೆಯ ಒಟ್ಟು ಉದ್ದ 2. 44 ಕಿ.ಮೀ. ಆಗಿದೆ. 16 ಮೀಟರ್ ಅಗಲದ 5 ಸ್ಪಾನ್ ಕೇಬಲ್ ಆಧಾರಿತವಾಗಿದೆ. ದಕ್ಷಿಣ ಭಾರತದಲ್ಲಿ ಕೇಬಲ್ ಆಧಾರಿತವಾಗಿ ನಿರ್ಮಾಣಗೊಂಡಿರುವ ಸೇತುವೆಗಳಲ್ಲಿ, ಮೊದಲ ಅತೀ ಉದ್ದದ ಸೇತುವೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ರಾಜ್ಯದಲ್ಲಿ 2 ನೇ ಅತೀ ದೊಡ್ಡ ಹಾಗೂ ದೇಶದಲ್ಲಿ 7 ನೇ ಸೇತುವೆಯಾಗಲಿದೆ.
ಸಿಗಂದೂರು ಸೇತುವೆಯು ಸಾಗರ, ಸಿಗಂದೂರು, ಕೊಲ್ಲೂರು ಭಾಗದ ಪ್ರವಾಸೋದ್ಯ ಬೆಳವಣಿಗೆಗೂ ಪೂರಕವಾಗಲಿದೆ. ಕೊಲ್ಲೂರು ಸಂಪರ್ಕ ಮತ್ತಷ್ಟು ಸನಿಹವಾಗಲಿದೆ. ಹಾಗೆಯೇ ತುಮರಿ, ಬ್ಯಾಕೋಡಿನಂತ ಶರಾವತಿ ಹಿನ್ನೀರ ಗ್ರಾಮಗಳ ಬೆಳವಣಿಗೆಗೆ ಹೊಸ ರಹದಾರಿಯಾಗಲಿದೆ.
ಸದರಿ ಸೇತುವೆಯು ನಾಡಿನ ಬೆಳಕಿಗಾಗಿ ಅಮೂಲ್ಯವಾದ ಹೊಲ, ಗದ್ದೆ, ಮನೆ ಎಲ್ಲವನ್ನೂ ತ್ಯಾಗ ಮಾಡಿದ ಶರಾವತಿ ಹಿನ್ನೀರು ಭಾಗದ ಜನತೆಯ ಹಲವು ದಶಕಗಳ ಕನಸಾಗಿತ್ತು. ಇದೀಗ ನನಸಾಗುವ ಹಂತಕ್ಕೆ ಬಂದಿದೆ. ಈ ಭಾಗದ ಸಂಪರ್ಕ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಗೆ ಸದರಿ ಸೇತುವೆ ನಾಂದಿಯಾಗಲಿದೆ. ಕರಾವಳಿ ಭಾಗದ ಸಂಪರ್ಕ ಸುಲಭ ಸಾಧ್ಯವಾಗಲಿದೆ.
Sagar, Mar 22: The construction of the Sigandur Bridge, which has been a long-awaited project for decades, is progressing at a brisk pace and the final stages of work are underway. Meanwhile, the asphalting work of the bridge has been started in the last few days.
The total length of Sigandur Bridge is 2.44 km. It is 16 meters wide and has 5 spans. It will be the first longest cable-stayed bridge in South India. It will be the 2nd largest in the state and the 7th largest in the country.