operation sindoor | ‘ಆಪರೇಷನ್ ಸಿಂಧೂರ’ : ಪಾಕ್ ನ ಉಗ್ರ ಸಂಘಟನೆಗಳ ಮುಖ್ಯ ಕಚೇರಿಗಳನ್ನು ಧ್ವಂಸಗೊಳಿಸಿದ ಭಾರತ!

India-Pakistan ceasefire agreed: US President Donald Trump statement india - pakistan tension | ಭಾರತ – ಪಾಕಿಸ್ತಾನ ಕದನ ವಿರಾಮಕ್ಕೆ ಸಮ್ಮತಿ : ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ

ನವದೆಹಲಿ (delhi), ಮೇ 7: ಜಮ್ಮುಕಾಶ್ಮೀರದ ಪಹಲ್ಗಾಮ್ ನಲ್ಲಿ ನಾಗರೀಕರ ಮೇಲೆ ಉಗ್ರರು ನಡೆಸಿದ ದಾಳಿಯ ನಂತರ, ಭಾರತವು ಪಾಕಿಸ್ತಾನ ವಿರುದ್ದ ಹಲವು ಪ್ರತಿಕಾರ ಕ್ರಮಕೈಗೊಂಡಿತ್ತು. ಇದೀಗ ಭಾರತೀಯ ಸೇನೆ ಅದಿಕೃತವಾಗಿ ಪಾಕ್ ವಿರುದ್ದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಆರಂಭಿಸಿದೆ.

ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದಲ್ಲಿರುವ ಉಗ್ರ ಸಂಘಟನೆಗಳ 9 ಅಡಗುತಾಣಗಳ ಮೇಲೆ ಭಾರತವು ತಡರಾತ್ರಿ ನಿರ್ದಿಷ್ಟ ವಾಯು ದಾಳಿ ನಡೆಸಿದೆ. ಸುಮಾರು 30 ಉಗ್ರರು ಹತರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಭಾರತ ನಡೆಸಿದ ದಾಳಿಯಲ್ಲಿ ನಿಷೇಧಿತ ಉಗ್ರ ಸಂಘಟನೆಗಳಾದ ಜೈಶ್ ಎ ಮೊಹಮ್ಮದ್ (ಜೆಇಎಂ), ಲಷ್ಕರ್ ಎ ತೊಯ್ಬಾ (ಎಲ್ಇಟಿ), ಹಿಜ್ಬುಲ್ ಮುಜಾಹಿದ್ದೀನ್ ಉಗ್ರರ ಪ್ರಧಾನ ಕಚೇರಿಗಳನ್ನು ನಾಶಗೊಂಡಿವೆ ಎನ್ನಲಾಗಿದೆ.

ಭಾರತ ವಾಯುದಾಳಿಗೆ ಆಯ್ಕೆ ಮಾಡಿಕೊಂಡ 9 ಸ್ಥಳಗಳಲ್ಲಿ 4 ಪಾಕ್ ನೆಲೆಯಲ್ಲಿದ್ದರೆ, ಉಳಿದ 5 ಸ್ಥಳಗಳು ಪಾಕ್ ಆಕ್ರಮಿತ ಕಾಶ್ಮೀರದಲ್ಲಿವೆ. ಉಗ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ನಡೆಸಿದೆ. ಪಾಕ್ ಸೇನೆಗೆ ಸಂಬಂಧಿಸಿದ ಸೇನಾ ಸ್ಥಳಗಳ ಮೇಲೆ ಯಾವುದೇ ದಾಳಿ ನಡೆಸಿಲ್ಲ ಎಂದು ತಿಳಿದುಬಂದಿದೆ.

New Delhi, May 7: After the terrorist attack on civilians in Pahalgam, Jammu and Kashmir, India took several retaliatory measures against Pakistan. Now the Indian Army has officially launched ‘Operation Sindoor’ against Pakistan.

India carried out targeted air strikes late last night on 9 terror hideouts in Pakistan-occupied Kashmir and Pakistan. It is reported that around 30 terrorists have been killed.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →