Mahatma Gandhi Job Guarantee Scheme Bachao Andolan from January 5 – CM Siddaramaiah ಜನವರಿ 5 ರಿಂದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವೋ ಆಂದೋಲನ – ಸಿಎಂ ಸಿದ್ದರಾಮಯ್ಯ

news update | ಜನವರಿ 5 ರಿಂದ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವೋ ಆಂದೋಲನ – ಸಿಎಂ ಸಿದ್ದರಾಮಯ್ಯ

ನವದೆಹಲಿ (delhi), ಡಿಸೆಂಬರ್ 27: ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ (ಎನ್ ಆರ್ ಇ ಜಿ) ಯೋಜನೆಯನ್ನು ವಿಬಿ_ ಜಿ  ರಾಮ್ _  ಜಿ (vb g ram g) ಎಂದು ಬದಲಾಯಿಸಿದ್ದು, ಇದನ್ನು ವಿರೋಧಿಸಿ ಜನವರಿ 5 ರಿಂದ ದೇಶಾದ್ಯಂತ  ‘ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಬಚಾವೋ’ ಆಂದೋಲನ ಕೈಗೊಳ್ಳಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಅವರು ಡಿಸೆಂಬರ್ 27 ರಂದು ದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ಒತ್ತುವರಿ ತೆರವು : ಬೆಂಗಳೂರಿನ ಯಲಹಂಕದ ಫಕೀರ್  ಕಾಲೋನಿ ಮತ್ತು ವಸೀಮ್ ಲೇಔಟ್ ನ ವಸತಿಗಳನ್ನು ನೆಲಸಮಗೊಳಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ಆ ಪ್ರದೇಶ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಪ್ರದೇಶವಾಗಿದ್ದು, ಅದು ಜನವಸತಿಗೆ ಸೂಕ್ತವಾದ ಪ್ರದೇಶವಲ್ಲವಾಗಿದೆ.

ಆದ್ದರಿಂದ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನೆಲೆಸಿದ್ದವರಿಗೆ ನೋಟೀಸ್ ನೀಡಿ ತೆರವುಗೊಳಿಸಲು ಸೂಚನೆ ನೀಡಲಾಗಿತ್ತು. ಆದರೆ ಸರ್ಕಾರದ ಸೂಚನೆಗೆ ಮಣಿಯದೇ ಇದ್ದ ಕಾರಣ, ಒತ್ತುವರಿಯನ್ನು ತೆರವುಗೊಳಿಸಲಾಗಿದೆ ಎಂದರು.  

ಬಹುತೇಕ ಜನರು ವಲಸಿಗರಾಗಿದ್ದು, ಮಾನವೀಯತೆಯ ದೃಷ್ಟಿಯಿಂದ ನಿರಾಶ್ರಿತರಿಗೆ  ಉಳಿದುಕೊಳ್ಳಲು ಪರ್ಯಾಯ ವ್ಯವಸ್ಥೆ ಮಾಡುವಂತೆ ಇಲಾಖೆಯ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ  ಸೂಚಿಸಲಾಗಿದೆ ಎಂದರು.

New Delhi, December 27: Chief Minister Siddaramaiah said that the central government has changed the NREG scheme to VB_G Ram _G, and in protest against this, a NREG Bachao Andolan is being launched across the country from January 5. ( The Viksit Bharat—Guarantee for Rozgar and Ajeevika Mission (Gramin) (VB—G RAM G) Bill )

Shivamogga: Film artist and lawyer Purnima Prasanna honoured with 'Manava Ratna Shrestha' state award ಶಿವಮೊಗ್ಗ : ಸಿನಿಮಾ ಕಲಾವಿದೆ, ವಕೀಲೆ ಪೂರ್ಣಿಮಾ ಪ್ರಸನ್ನರಿಗೆ ‘ಮಾನವ ರತ್ನ ಶ್ರೇಷ್ಠ’ ರಾಜ್ಯ ಪ್ರಶಸ್ತಿ ಗೌರವ Previous post shimoga news | ಶಿವಮೊಗ್ಗ : ಸಿನಿಮಾ ಕಲಾವಿದೆ, ವಕೀಲೆ ಪೂರ್ಣಿಮಾ ಪ್ರಸನ್ನರಿಗೆ ‘ಮಾನವ ರತ್ನ ಶ್ರೇಷ್ಠ’ ರಾಜ್ಯ ಪ್ರಶಸ್ತಿ ಗೌರವ