Two separate road accidents: Driver dies, two injured! ಎರಡು ಪತ್ಯೇಕ ರಸ್ತೆ ಅಪಘಾತ : ಚಾಲಕ ಸಾವು – ಇಬ್ಬರಿಗೆ ಗಾಯ!

hosanagara accident | ಎರಡು ಪತ್ಯೇಕ ರಸ್ತೆ ಅಪಘಾತ : ಚಾಲಕ ಸಾವು – ಇಬ್ಬರಿಗೆ ಗಾಯ!

ಹೊಸನಗರ (hosanagara), ಆ. 1: ಹೊಸನಗರ ತಾಲೂಕಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ, ಓರ್ವ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ವರದಿಯಾಗಿದೆ.

ಹುಲಿಕಲ್ ಬಳಿ ಸರಕು ಸಾಗಾಣೆಯ ಮಿನಿ ಲಾರಿಯೊಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಜುಲೈ 31 ರ ರಾತ್ರಿ ನಡೆದಿದೆ.

ಘಟನೆಯಲ್ಲಿಸಾಲಿಗ್ರಾಮ ಮೂಲದ ವಾಹನ ಚಾಲಕ ಗೋಪಾಲ್ ಎಂಬುವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕ್ಲೀನರ್ ಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮತ್ತೊಂದು ಘಟನೆಯಲ್ಲಿ ಆಗಸ್ಟ್ 1 ರ ಬೆಳಿಗ್ಗೆ ನಿಟ್ಟೂರು – ನಾಗೋಡಿ ಮಾರ್ಗದ ಹೊಲಗಾರು ಶಾಲೆ ಬಳಿ ಲಾರಿ ಮತ್ತು ಪ್ರಯಾಣಿಕ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ನಡೆದಿದೆ.

ಘಟನೆಯಲ್ಲಿ ಲಾರಿ ಚಾಲಕನಿಗೆ ಗಾಯವಾಗಿದೆ. ಉಳಿದಂತೆ ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಘಟನಾ ಸ್ಥಳಕ್ಕೆ ನಗರ ಪೊಲೀಸ್ ಠಾಣೆ ಸಬ್ ಇನ್ಸ್’ಪೆಕ್ಟರ್ ಶಿವಾನಂದ ಕೋಳಿ ಅವರು ಭೇಟಿಯಿತ್ತು ಪರಿಶೀಲಿಸಿದರು.

Shivamogga, Aug 1: One person died and two others were injured in two separate road accidents that took place within the limits of the Nagar Police Station in Hosanagara taluk.

Important meeting of CM with Minister, MLA of Shimoga district! ಶಿವಮೊಗ್ಗ ಜಿಲ್ಲೆಯ ಸಚಿವರು, ಶಾಸಕರೊಂದಿಗೆ ಸಿಎಂ ಮಹತ್ವದ ಸಭೆ Previous post shimoga | ಶಿವಮೊಗ್ಗ ಜಿಲ್ಲೆಯ ಸಚಿವರು, ಶಾಸಕರೊಂದಿಗೆ ಸಿಎಂ ಮಹತ್ವದ ಸಭೆ!
Prajwal Revanna found guilty – when will the sentence be announced? ಪ್ರಜ್ವಲ್ ರೇವಣ್ಣ ಅಪರಾಧಿ – ಯಾವಾಗ ಪ್ರಕಟವಾಗಲಿದೆ ಶಿಕ್ಷೆ? Next post prajwal revanna | ಪ್ರಜ್ವಲ್ ರೇವಣ್ಣ ಅಪರಾಧಿ – ಯಾವಾಗ ಪ್ರಕಟವಾಗಲಿದೆ ಶಿಕ್ಷೆ?