ಹೊಸನಗರ (hosanagara), ಜನವರಿ 09: ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವರು ಸ್ಥಳದಲ್ಲಿಯೇ ಮೃ*ತಪ*ಟ್ಟ ಘಟನೆ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ರಿಪ್ಪನ್’ಪೇಟೆ ಸಮೀಪದ ಗರ್ತಿಕೆರೆ ಬಳಿಯ ಸುಣ್ಣದ ಬಸ್ತಿ ತಿರುವಿನಲ್ಲಿ ನಡೆದಿದೆ.
ಸುಣ್ಣದ ಬಸ್ತಿ ಗ್ರಾಮದ ನಿವಾಸಿ ನಯಾಜ್ (40) ಮೃ*ತಪ*ಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ. ಸಂಬಂಧಿಯೋರ್ವರಿಗೆ ಔಷಧವಿದ್ದ ಪಾರ್ಸಲ್ ನ್ನು ಬಸ್ ಗೆ ಕೊಡುತ್ತಿದ್ದ ವೇಳೆ, ಹಿಂಬದಿಯಿಂದ ಆಗಮಿಸಿದ ಲಾರಿ ಡಿಕ್ಕಿ ಹೊಡೆದು, ಇವರ ಮೇಲೆಯೇ ಹರಿದು ಹೋಗಿದೆ.
ಗಂಭೀರ ಸ್ವರೂಪದ ಗಾಯಕ್ಕೆ ತುತ್ತಾದ ನಯಾಜ್ ಅವರು ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಈ ಸಂಬಂಧ ರಿಪ್ಪನ್’ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Hosanagar, January 09: An incident occurred at Sunnada Basti Tiru near Garthikere, near Rippanpet in Hosanagar taluk, Shivamogga district, where a person d*ie*d on the spot after being hit by a lorry.

