Tahsildar sudden raid on Shimoga fertilizer sales shop, godowns! : What is the reason? ಶಿವಮೊಗ್ಗ ರಸಗೊಬ್ಬರ ಮಾರಾಟ ಮಳಿಗೆ, ಗೋಡೌನ್ ಗಳ ಮೇಲೆ ತಹಶೀಲ್ದಾರ್ ದಿಡೀರ್ ದಾಳಿ! : ಕಾರಣವೇನು?

shimoga news | ಶಿವಮೊಗ್ಗ ರಸಗೊಬ್ಬರ ಮಾರಾಟ ಮಳಿಗೆ, ಗೋಡೌನ್ ಗಳ ಮೇಲೆ ತಹಶೀಲ್ದಾರ್ ದಿಡೀರ್ ದಾಳಿ! : ಕಾರಣವೇನು?

ಶಿವಮೊಗ್ಗ (shivamogga), ಆಗಸ್ಟ್ 1: ರಸಗೊಬ್ಬರ ಮಾರಾಟ ಅಂಗಡಿ ಹಾಗೂ ಗೋಡೌನ್ ಗಳ ಮೇಲೆ ಶಿವಮೊಗ್ಗ ತಹಶೀಲ್ದಾರ್ ವಿ ಎಸ್ ರಾಜೀವ್ ನೇತೃತ್ವದ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ, ಪರಿಶೀಲನೆ ನಡೆಸಿದ ಘಟನೆ ಆಗಸ್ಟ್ 1 ರಂದು ಶಿವಮೊಗ್ಗ ನಗರ ಹಾಗೂ ತಾಲೂಕಿನ ವಿವಿಧೆಡೆ ನಡೆದಿದೆ.

ರಾಜ್ಯದ ವಿವಿಧೆಡೆ ಯೂರಿಯ ರಸಗೊಬ್ಬರ ಕೊರತೆ ಹಾಗೂ ದುಬಾರಿ ಬೆಲೆಗೆ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ದೂರುಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ತಾಲೂಕು ಆಡಳಿತ ಈ ಕಾರ್ಯಾರಣೆ ನಡೆಸಿದೆ.

ದಾಳಿಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳಾದ ಮಂಜುಳಾ, ರಮೇಶ್, ಚೇತನ್, ಶಾಂತಮೂರ್ತಿ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಭಾಗಿಯಾಗಿದ್ದರು.

ಎಲ್ಲೆಲ್ಲಿ? : ಶಿವಮೊಗ್ಗ ನಗರ, ಆಯನೂರು, ಸಿರಿಗೆರೆ, ಹಾರ್ನಳ್ಳಿಗಳಲ್ಲಿನ ರಸಗೊಬ್ಬರ ಮಾರಾಟ ಹಾಗೂ ಗೋಡೌನ್ ಗಳಲ್ಲಿ ತಪಾಸಣೆ ನಡೆಸಲಾಗಿದೆ. ಈ ವೇಳೆ ಯಾವುದೇ ಲೋಪಗಳು ಪತ್ತೆಯಾಗಿಲ್ಲ ಎಂದು ತಹಶೀಲ್ದಾರ್ ವಿ ಎಸ್ ರಾಜೀವ್ ಅವರು ತಿಳಿಸಿದ್ದಾರೆ.

ಯಾವುದೇ ಕಾರಣಕ್ಕೂ ರೈತರಿಗೆ ಹೆಚ್ಚುವರಿ ದರಕ್ಕೆ ಯೂರಿಯಾ ಸೇರಿದಂತೆ ಇತರೆ ರಸಗೊಬ್ಬರ ಮಾರಾಟ ಮಾಡಬಾರದು. ಜೊತೆಗೆ ಕೃತಕ ಅಭಾವ ಸೃಷ್ಟಿಸಬಾರದು ಎಂದು ವ್ಯಾಪಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಹಶೀಲ್ದಾರ್ ಅವರು ತಮ್ಮನ್ನು ತಿಳಿಸಿದ್ದಾರೆ.

Shimoga, August 1: A team of officers led by Shimoga Tahsildar V S Rajiv made a sudden raid on fertilizer sales shops and godowns. the incident took place on August 1 in different parts of Shimoga city and taluk.

Prajwal Revanna found guilty – when will the sentence be announced? ಪ್ರಜ್ವಲ್ ರೇವಣ್ಣ ಅಪರಾಧಿ – ಯಾವಾಗ ಪ್ರಕಟವಾಗಲಿದೆ ಶಿಕ್ಷೆ? Previous post prajwal revanna | ಪ್ರಜ್ವಲ್ ರೇವಣ್ಣ ಅಪರಾಧಿ – ಯಾವಾಗ ಪ್ರಕಟವಾಗಲಿದೆ ಶಿಕ್ಷೆ?
Shimoga : Who came in an auto? ಶಿವಮೊಗ್ಗ : ಆಟೋದಲ್ಲಿ ಬಂದವರು ಯಾರು? ಸಿಸಿ ಕ್ಯಾಮರಾ ಕಂಡು ಕಾಲ್ಕಿತ್ತರೆ? Next post shimoga news | ಶಿವಮೊಗ್ಗ : ಆಟೋದಲ್ಲಿ ಬಂದವರು ಯಾರು? ಸಿಸಿ ಕ್ಯಾಮರಾ ಕಂಡು ಕಾಲ್ಕಿತ್ತರೆ?