Shimoga : Who came in an auto? ಶಿವಮೊಗ್ಗ : ಆಟೋದಲ್ಲಿ ಬಂದವರು ಯಾರು? ಸಿಸಿ ಕ್ಯಾಮರಾ ಕಂಡು ಕಾಲ್ಕಿತ್ತರೆ?

shimoga news | ಶಿವಮೊಗ್ಗ : ಆಟೋದಲ್ಲಿ ಬಂದವರು ಯಾರು? ಸಿಸಿ ಕ್ಯಾಮರಾ ಕಂಡು ಕಾಲ್ಕಿತ್ತರೆ?

ಶಿವಮೊಗ್ಗ (shivamogga), ಆಗಸ್ಟ್ 1: ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಹಾಲಕ್ಷ್ಮೀ ಲೇಔಟ್ ಗೆ ಆಗಸ್ಟ್ 1 ರ ಮಧ್ಯಾಹ್ನ ಆಟೋದಲ್ಲಿ ಆಗಮಿಸಿದ ಇಬ್ಬರ ಅಪರಿಚಿತರ ನಡೆಯು ಸ್ಥಳೀಯರಲ್ಲಿ ಸಾಕಷ್ಟು ಅನುಮಾನಕ್ಕೆಡೆ ಮಾಡಿಕೊಟ್ಟಿದೆ!

ಇತ್ತೀಚೆಗೆ ಲೇಔಟ್ ನ ಯೋಗೇಂದ್ರಪ್ಪ ಎಂಬುವರ ಮನೆಯಲ್ಲಿ, ಹಾಡಹಗಲೇ ದುಷ್ಕರ್ಮಿಗಳು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭಣರ ಹಾಗೂ ನಗದು ಕಳವು ಮಾಡಿ ಪರಾರಿಯಾಗಿದ್ದರು.

ಘಟನೆಯ ನಂತರ ಅವರು ತಮ್ಮ ಮನೆಗೆ ಸಿ ಸಿ ಕ್ಯಾಮರಾ ಅಳವಡಿಕೆ ಮಾಡಿದ್ದರು. ಈ ನಡುವೆ ಆಗಸ್ಟ್ 1 ರಂದು ಮಧ್ಯಾಹ್ನ 12. 30 ರ ಸುಮಾರಿಗೆ ಯೋಗೇಂದ್ರಪ್ಪರ ನಿವಾಸದ ಸಮೀಪ ಆಟೋವೊಂದು ಆಗಮಿಸಿದೆ.

ಆಟೋದಿಂದ ಇಬ್ಬರು ಇಳಿದಿದ್ದಾರೆ. ಮನೆಯ ಪಕ್ಕದಲ್ಲಿ ಏನೋ ಹುಡುಕಾಡಿದಂತೆ ಮಾಡಿದ್ದಾರೆ. ಈ ವೇಳೆ ಮನೆಯ ಸಿಸಿ ಕ್ಯಾಮರಾ ಗಮನಿಸಿ, ಆಟೋದಲ್ಲಿಯೇ ತೆರಳಿದ್ದಾರೆ ಎಂಬ ಮಾಹಿತಿ ಸ್ಥಳೀಯರದ್ದಾಗಿದೆ.

ಅನುಮಾನಾಸ್ಪದ ವ್ಯಕ್ತಿಗಳು ಮನೆಯ ಬಳಿ ಓಡಾಡುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದರಿ ದೃಶ್ಯಾವಳಿಯನ್ನು ಅವರು ವ್ಯಾಟ್ಸಾಪ್ ಗ್ರೂಪ್ ನಲ್ಲಿ ಹಂಚಿಕೊಂಡಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೆ ಹೆಚ್ಚಿನ ವಿವರಗಳು ತಿಳಿದುಬರಬೇಕಾಗಿದೆ.

Shimoga, August 1: The movement of two strangers who arrived in an auto at Mahalakshmi Layout under Vinobanagar police station jurisdiction in Shimoga on the afternoon of August 1 has caused a lot of suspicion among the locals!

Tahsildar sudden raid on Shimoga fertilizer sales shop, godowns! : What is the reason? ಶಿವಮೊಗ್ಗ ರಸಗೊಬ್ಬರ ಮಾರಾಟ ಮಳಿಗೆ, ಗೋಡೌನ್ ಗಳ ಮೇಲೆ ತಹಶೀಲ್ದಾರ್ ದಿಡೀರ್ ದಾಳಿ! : ಕಾರಣವೇನು? Previous post shimoga news | ಶಿವಮೊಗ್ಗ ರಸಗೊಬ್ಬರ ಮಾರಾಟ ಮಳಿಗೆ, ಗೋಡೌನ್ ಗಳ ಮೇಲೆ ತಹಶೀಲ್ದಾರ್ ದಿಡೀರ್ ದಾಳಿ! : ಕಾರಣವೇನು?
Tunga River water for lakes in Shivamogga rural constituency : MLA sharada puryanaik happy ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕೆರೆಗಳಿಗೆ ತುಂಗಾ ನದಿ ನೀರು : ಶಾಸಕಿ ಶಾರದಾ ಪೂರ್ಯನಾಯ್ಕ್ ಸಂತಸ Next post shimoga | ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕೆರೆಗಳಿಗೆ ತುಂಗಾ ನದಿ ನೀರು : MLA ಶಾರದಾ ಪೂರ್ಯನಾಯ್ಕ್ ಸಂತಸ