Shivamogga: Marijuana and cigarettes found in biscuit packet brought to give to friend in jail: Two arrested! ಶಿವಮೊಗ್ಗ : ಜೈಲ್ ನಲ್ಲಿದ್ದ ಸ್ನೇಹಿತನಿಗೆ ನೀಡಲು ತಂದಿದ್ದ ಬಿಸ್ಕೆಟ್ ಪ್ಯಾಕೆಟ್ ನಲ್ಲಿ ಗಾಂಜಾ, ಸಿಗರೇಟ್ : ಇಬ್ಬರು ಅರೆಸ್ಟ್!

shimoga | ಶಿವಮೊಗ್ಗ ಸೆಂಟ್ರಲ್ ಜೈಲ್ ನಲ್ಲಿದ್ದ ಪತ್ನಿ ಕೊಲೆ ಪ್ರಕರಣದ ಆರೋಪಿ ಆತ್ಮ*ತ್ಯೆಗೆ ಶರಣು!

ಶಿವಮೊಗ್ಗ (shivamogga), ಆಗಸ್ಟ್ 3: ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿದ್ದ ವಿಚಾರಣಾಧೀನ ಕೈದಿಯೋರ್ವ, ನೇಣು ಬಿಗಿದು ಆತ್ಮ*ಹ**ತ್ಯೆಗೆ ಶರಣಾದ ಘಟನೆ ಆಗಸ್ಟ್ 2 ರ ಸಂಜೆ ನಡೆದಿದೆ.

ಬಸವರಾಜು (38) ಆತ್ಮ*ಹ**ತ್ಯೆಗೆ ಶರಣಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಸಂಜೆ 7 ಗಂಟೆ ಸುಮಾರಿಗೆ ಕಾರಾಗೃಹದ ಶರಾವತಿ ಬ್ಯಾರಕ್ ನ 42 ನೇ ಕೊಠಡಿಯ ಶೌಚಾಲಯದ ಕಿಟಕಿ ಸರಳಿಗೆ ತನ್ನ ಲುಂಗಿಯಿಂದ ನೇಣು ಬಿಗಿದುಕೊಂಡಿದ್ದ.

ಗಸ್ತಿನಲ್ಲಿದ್ದ ಜೈಲು ಸಿಬ್ಬಂದಿಗಳು ತಕ್ಷಣವೇ ಆತನನ್ನು ವಾಹನವೊಂದರಲ್ಲಿ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿದ್ದನ್ನು ಖಚಿತಪಡಿಸಿದ್ದಾರೆ.

ಯಾರೀತ? : ಬಸವರಾಜು ವಿರುದ್ದ ಪತ್ನಿಯ ಕೊ**ಲೆ ಮಾಡಿದ ಆರೋಪವಿತ್ತು. ಈ ಸಂಬಂಧ ಶಿಕಾರಿಪುರ ಟೌನ್ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ದ ಪ್ರಕರಣ ದಾಖಲಾಗಿತ್ತು. ಜೂನ್ 16 ರಿಂದ ಆತ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ.

Shivamogga, August 3: An undertrial prisoner committed suicide by hanging himself at the Shivamogga Central Jail on the evening of August 2.

shimoga APMC vegetable prices | Details of vegetable prices for October 10 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಅಕ್ಟೋಬರ್ 10 ರ ತರಕಾರಿ ಬೆಲೆಗಳ ವಿವರ Previous post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಆಗಸ್ಟ್ 3 ರ ತರಕಾರಿ ಬೆಲೆಗಳ ವಿವರ
Applications invited for grants to build homestays in two tribal villages in Shivamogga ಶಿವಮೊಗ್ಗದ ಎರಡು ಬುಡಕಟ್ಟು ಗ್ರಾಮಗಳಲ್ಲಿ ಹೊಂ ಸ್ಟೇ ನಿರ್ಮಿಸಲು ಸಹಾಯಧನಕ್ಕೆ ಅರ್ಜಿ ಆಹ್ವಾನ Next post shimoga | ಶಿವಮೊಗ್ಗದ ಎರಡು ಬುಡಕಟ್ಟು ಗ್ರಾಮಗಳಲ್ಲಿ ಹೊಂ ಸ್ಟೇ ನಿರ್ಮಿಸಲು ಸಹಾಯಧನಕ್ಕೆ ಅರ್ಜಿ ಆಹ್ವಾನ