
shimoga | ಶಿವಮೊಗ್ಗ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಲು ಆಗ್ರಹಿಸಿ ನಿವಾಸಿಗಳಿಂದ ಮನವಿ
ಶಿವಮೊಗ್ಗ (shivamogga), ಆಗಸ್ಟ್ 5: ಶಿವಮೊಗ್ಗ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ಆಗಸ್ಟ್ 5 ರಂದು ಪ್ರೆಸ್ ಕಾಲೋನಿ, ಶ್ರೀ ಲೇಔಟ್, ಮಹಾಲಕ್ಷ್ಮೀ ಬಡಾವಣೆ ಹಾಗೂ ಜಗದ್ಗುರು ಶಂಕರಚಾರ್ಯ ಬಡಾವಣೆಗಳ ನಿವಾಸಿಗಳು ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರಾದ ಕೆ ರಂಗಸ್ವಾಮಿ ಅವರಿಗೆ ಮನವಿ ಪತ್ರ ಅರ್ಪಿಸಿದರು.
ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಮಾಡಲಾಗುತ್ತಿದೆ. ಆದರೆ ಪಾಲಿಕೆ ವ್ಯಾಪ್ತಿಗೆ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಸವನಗಂಗೂರು ಗ್ರಾಮ ಸೇರ್ಪಡೆ ಮಾಡಿಕೊಳ್ಳುತ್ತಿಲ್ಲ.
ಇದರಿಂದ ಸದರಿ ಗ್ರಾಮದ ವ್ಯಾಪ್ತಿಯಲ್ಲಿರುವ, ಕೆಹೆಚ್’ಬಿ ಪ್ರೆಸ್ ಕಾಲೋನಿ ಹಾಗೂ ಇದಕ್ಕೆ ಹೊಂದಿಕೊಂಡಂತಿರುವ ಶ್ರೀ ಬಡಾವಣೆ, ಮಹಾಲಕ್ಷ್ಮೀ ಬಡಾವಣೆ ಹಾಗೂ ಜಗದ್ಗುರು ಶಂಕರಚಾರ್ಯ ಬಡಾವಣೆ ಸೇರ್ಪಡೆ ಆಗದಂತಾಗಿದೆ.
ಗ್ರಾಪಂ ಆಡಳಿತದಿಂದ ಸದರಿ ಬಡಾವಣೆಗಳ ಪರಿಣಾಮಕಾರಿ ನಿರ್ವಹಣೆಯಾಗುತ್ತಿಲ್ಲ. ಮೂಲಸೌಕರ್ಯ ಪಡೆಯಲು ಕಚೇರಿಗೆ ಅಲೆದಾಡುವಂತಾಗಿದೆ. ಇದರಿಂದ ನಿವಾಸಿಗಳು ತೀವ್ರ ತೊಂದರೆ ಪಡುವಂತಾಗಿದೆ. ಈ ಕಾರಣದಿಂದ ಸದರಿ ಬಡಾವಣೆಗಳನ್ನು ಕೂಡ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.
ಮನವಿ ಅರ್ಪಿಸುವ ವೇಳೆ ಪ್ರೆಸ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯಕ್ಷರಾದ ರಾಮಚಂದ್ರ, ಅಧ್ಯಕ್ಷರಾದ ಪತ್ರಕರ್ತ ಬಿ ರೇಣುಕೇಶ್, ಮುಖಂಡರಾದ ಕುಶಕುಮಾರ್, ಗುರುಚರಣ್, ರವಿ, ಗೋಪಾಲ್, ಮಂಜುನಾಥ್, ಕಾಂತರಾಜ್, ಮಹಿಳಾ ಸಂಘದ ಪ್ರಮುಖರಾದ ಲಕ್ಷ್ಮೀ, ಪೂಜಾ ಮೊದಲಾದವರಿದ್ದರು.
Shimoga, August 5: On August 5, residents of Press Colony, Sri Layout, Mahalakshmi and Jagadguru Shankaracharya layout submitted a petition to K Rangaswamy, Planning Director, District Urban Development Kosha, demanding inclusion in Shimoga Corporation.