Shivamogga: Criminal steals women's mangal sutra ಶಿವಮೊಗ್ಗ : ವಾಕಿಂಗ್ ತೆರಳಿದ್ದ ಮಹಿಳೆಯ ಮಾಂಗಲ್ಯ ಸರ ಅಪಹರಣ!

shimoga | ಶಿವಮೊಗ್ಗ : ವಾಕಿಂಗ್ ತೆರಳಿದ್ದ ಮಹಿಳೆಯ ಮಾಂಗಲ್ಯ ಸರ ಅಪಹರಣ!

ಶಿವಮೊಗ್ಗ (shivamogga), ಆಗಸ್ಟ್ 14: ಬೈಕ್ ನಲ್ಲಿ ಆಗಮಿಸಿದ ಸರಗಳ್ಳನೋರ್ವ, ವಾಕಿಂಗ್ ಮಾಡುತ್ತಿದ್ದ ಮಹಿಳೆಯೋರ್ವರ ಮಾಂಗಲ್ಯ ಸರ ಅಪಹರಿಸಿ ಪರಾರಿಯಾದ ಘಟನೆ, ಶಿವಮೊಗ್ಗ ನಗರದ ರಾಜೇಂದ್ರ ನಗರ ಮುಖ್ಯ ರಸ್ತೆಯ ಪಾರ್ಕ್ ಸಮೀಪ ಆಗಸ್ಟ್ 12 ರ ಬೆಳಿಗ್ಗೆ ನಡೆದಿದೆ.

ರಾಜೇಂದ್ರ ನಗರದ ನಿವಾಸಿ ಬಿ ವಿ ವನಜಾಕ್ಷಿ ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ ಎಂದು ಗುರುತಿಸಲಾಗಿದೆ. ಕಳುವಾದ ಮಾಂಗಲ್ಯ ಸರದ ಮೌಲ್ಯ 42 ಗ್ರಾಂ ತೂಕದ್ದಾಗಿದ್ದು, 2. 30 ಲಕ್ಷ ರೂ. ಮೌಲ್ಯದ್ದೆಂದು ಅಂದಾಜಿಸಲಾಗಿದೆ.

ಬಿ ವಿ ವನಜಾಕ್ಷಿ ಅವರು ತಮ್ಮ ಸ್ನೇಹಿತೆಯೊಂದಿಗೆ ವಾಕಿಂಗ್ ಮಾಡುತ್ತಿದ್ದ ವೇಳೆ, ಮೆರೂನ್ ಬಣ್ಣದ ಜರ್ಕಿನ್ ಹಾಗೂ ಹೆಲ್ಮೆಟ್ ಧರಿಸಿದ್ದ ದುಷ್ಕರ್ಮಿ ಬೈಕ್ ನಲ್ಲಿ ಇವರ ಪಕ್ಕದಲ್ಲಿಯೇ ತೆರಳಿದ್ದಾನೆ.

ನಂತರ ಮತ್ತೆ ಬೈಕ್ ನಲ್ಲಿ ಹಿಂದಿರುಗಿದ ಕಳ್ಳ, ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shivamogga, August 14: An incident occurred on the morning of August 12 near the park on Rajendra Nagar Main Road in Shivamogga city, where a thief who arrived on a bike stole the mangal sutra of a woman who was walking.

Shimoga Tahsildar stopped the marriage of a minor man and woman! ತಾಳಿ ಕಟ್ಟುವ ವೇಳೆ ಶಿವಮೊಗ್ಗ ತಹಶೀಲ್ದಾರ್ ಎಂಟ್ರಿ : ಕಾರಣವೇನು? Previous post shimoga | ತಾಳಿ ಕಟ್ಟುವ ವೇಳೆ ಶಿವಮೊಗ್ಗ ತಹಶೀಲ್ದಾರ್ ಎಂಟ್ರಿ : ಕಾರಣವೇನು?
Supreme Court cancels actor Darshan's bail! ಚಿತ್ರನಟ ದರ್ಶನ್ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್! Next post actor darshan | ಚಿತ್ರನಟ ದರ್ಶನ್ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್!