Shimoga Tahsildar stopped the marriage of a minor man and woman! ತಾಳಿ ಕಟ್ಟುವ ವೇಳೆ ಶಿವಮೊಗ್ಗ ತಹಶೀಲ್ದಾರ್ ಎಂಟ್ರಿ : ಕಾರಣವೇನು?

shimoga | ತಾಳಿ ಕಟ್ಟುವ ವೇಳೆ ಶಿವಮೊಗ್ಗ ತಹಶೀಲ್ದಾರ್ ಎಂಟ್ರಿ : ಕಾರಣವೇನು?

ಶಿವಮೊಗ್ಗ, ಆಗಸ್ಟ್ 13: ಸಂಘಟನೆಯೊಂದು ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ, ಅಪ್ರಾಪ್ತ ವಯಸ್ಸಿನ ಕಾರಣದ ಹಿನ್ನೆಲೆಯಲ್ಲಿ, ಎರಡು ಜೋಡಿಗಳ ವಿವಾಹಕ್ಕೆ ಶಿವಮೊಗ್ಗ ತಹಶೀಲ್ದಾರ್ ವಿ ಎಸ್ ರಾಜೀವ್ ನೇತೃತ್ವದ ಅಧಿಕಾರಿಗಳ ತಂಡ, ತಡೆ ಹಾಕಿದ ಸಿನಿಮೀಯ ಶೈಲಿಯ ಘಟನೆ ಆಗಸ್ಟ್ 13 ರಂದು ನಡೆದಿದೆ.

ಶಿವಮೊಗ್ಗದ ಶುಭ ಮಂಗಳ ಸಮುದಾಯ ಭವನದಲ್ಲಿ ಘಟನೆ ನಡೆದಿದೆ. ತಾಳಿ ಕಟ್ಟುವ ಸಮಯದ ಸಂದರ್ಭದಲ್ಲಿಯೇ ಅಧಿಕಾರಿಗಳ ತಂಡದ ದಿಢೀರ್ ಆಗಮನದಿಂದ ಸಮಾರಂಭದಲ್ಲಿ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಗುವಂತಾಗಿತ್ತು.

ಗೊಂದಲವೇನು? : ಸಂಘಟನೆಯೊಂದು ಸಾಮೂಹಿಕ ವಿವಾಹ ಸಮಾರಂಭ ಆಯೋಜಿಸಿತ್ತು. 8 ಜೋಡಿಗಳ ವಿವಾಹಕ್ಕೆ ವೇದಿಕೆ ಸಿದ್ದವಾಗಿತ್ತು. ಇದರಲ್ಲಿ ಎರಡು ಜೋಡಿಗಳಲ್ಲಿ, ಓರ್ವ ಯುವಕ ಹಾಗೂ ಯುವತಿಗೆ ವಿವಾಹಕ್ಕೆ ನಿಗದಿಪಡಿಸಿದ ವಯಸ್ಸಾಗಿಲ್ಲ ಎಂಬ ಮಾಹಿತಿ  ಅಧಿಕಾರಿಗಳಿಗೆ ಲಭಿಸಿತ್ತು.

ಇದರ ಆಧಾರದ ಮೇಲೆ ತಹಶೀಲ್ದಾರ್ ವಿ ಎಸ್ ರಾಜೀವ್ ನೇತೃತ್ವದಲ್ಲಿ ಶಿಶು ಅಭಿವೃದ್ದಿ ಯೋಜನಾ ಕಚೇರಿಯ ಅಧಿಕಾರಿಗಳಾದ ಗಂಗಾಬಾಯಿ, ರೇಖಾ, ಮಕ್ಕಳ ಸಹಾಯವಾಣಿ ಹಾಗೂ ವಿನೋಬನಗರ ಠಾಣೆ ಸಿಬ್ಬಂದಿಗಳು ಬೆಳಿಗ್ಗೆ ಸಮುದಾಯ ಭವನಕ್ಕೆ ಆಗಮಿಸಿದ್ದರು.

ವಿವಾಹವಾಗುತ್ತಿರುವ ವಧು – ವರರ ವಯಸ್ಸಿನ ದಾಖಲಾತಿ ಪರಿಶೀಲಿಸಿದ್ದರು. ಈ ವೇಳೆ ಎರಡು ಜೋಡಿಗಳಲ್ಲಿ ಒಂದರಲ್ಲಿ ಯುವಕ ಹಾಗೂ ಮತ್ತೊಂದರಲ್ಲಿ ಯುವತಿಯ ವಯಸ್ಸು, ವಿವಾಹಕ್ಕೆ ನಿಗದಿ ಪಡಿಸಿದ ವಯೋಮಾನಕ್ಕಿಂತ ಕಡಿಮೆಯಿರುವುದು ಪತ್ತೆಯಾಗಿತ್ತು.

ಈ ಹಿನ್ನೆಲೆಯಲ್ಲಿ ಎರಡು ಜೋಡಿಗಳ ವಿವಾಹ ನಡೆಸದಂತೆ ಆಯೋಜಕರಿಗೆ ಅಧಿಕಾರಿಗಳ ತಂಡ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅದರಂತೆ ಎರಡು ಜೋಡಿಗಳ ವಿವಾಹ ಸ್ಥಗಿತವಾಗಿದ್ದು, 6 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Shivamogga, August 13: A cinematic-style incident took place on August 13 when a team of officers led by Shivamogga Tahsildar VS Rajeev stopped the marriage of two couples at a mass wedding ceremony organized by an organization on the grounds of minor age.

Shimoga : The body of an anonymous man was found in the channel water! ಶಿವಮೊಗ್ಗ : ಚಾನಲ್ ನೀರಿನಲ್ಲಿ ಅನಾಮಧೇಯ ಪುರುಷನ ಶವ ಪತ್ತೆ! Previous post shimoga | ಶಿವಮೊಗ್ಗ : ನಾಲೆಯಲ್ಲಿ ಅನಾಮಧೇಯ ಪುರುಷನ ಶ**ವ ಪತ್ತೆ!
Shivamogga: Criminal steals women's mangal sutra ಶಿವಮೊಗ್ಗ : ವಾಕಿಂಗ್ ತೆರಳಿದ್ದ ಮಹಿಳೆಯ ಮಾಂಗಲ್ಯ ಸರ ಅಪಹರಣ! Next post shimoga | ಶಿವಮೊಗ್ಗ : ವಾಕಿಂಗ್ ತೆರಳಿದ್ದ ಮಹಿಳೆಯ ಮಾಂಗಲ್ಯ ಸರ ಅಪಹರಣ!