ಶಿವಮೊಗ್ಗ (shivamogga), ಆಗಸ್ಟ್ 14: ಕಾನೂನು – ಸುವ್ಯವಸ್ಥೆ ಕಾಪಾಡಲು ಹಾಗೂ ಮುಂಜಾಗ್ರತ ಕ್ರಮವಾಗಿ, ಜಿಲ್ಲೆಯ ವಿವಿಧೆಡೆ ಆಯಾ ಠಾಣೆಗಳ ಪೊಲೀಸರು ವಿಶೇಷ ಕಾಲ್ನಡಿಗೆ ಗಸ್ತು ಕಾರ್ಯವನ್ನು ಆಗಸ್ಟ್ 13 ರಂದು ನಡೆಸಿದ್ದಾರೆ.
ಈ ಕುರಿತಂತೆ ಆ. 14 ರಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ವಿಶೇಷ ಗಸ್ತು ಕಾರ್ಯಾಚರಣೆ ನಡೆಸಲಾಗಿದೆ.
ಇದರಲ್ಲಿ ಇನ್ಸ್’ಪೆಕ್ಟರ್ ಗಳು, ಸಬ್ ಇನ್ಸ್’ಪೆಕ್ಟರ್ ಗಳು ಹಾಗೂ ಸಿಬ್ಬಂದಿಗಳು ಭಾಗಿಯಾಗಿದ್ದರು. ಈ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದವರು ಹಾಗೂ ಅನುಮಾನಾಸ್ಪದ ವ್ಯಕ್ತಿಗಳ ವಿರುದ್ದ 112 ಲಘು ಪ್ರಕರಣಗಳನ್ನು ದಾಖಲಿಸಲಾಗಿದೆ.
ಹಾಗೆಯೇ ಕೋಟ್ಪಾ ಕಾಯ್ದೆಯಡಿ 8 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
Shivamogga, August 14: To maintain law and order and as a precautionary measure, the police of the respective police stations in various parts of the district conducted special foot patrols on August 13.

