
shimoga | ಶಿವಮೊಗ್ಗ : ಸ್ವಾತಂತ್ರ್ಯೋತ್ಸವದ ಪರೇಡ್ ವೇಳೆ ಅಸ್ವಸ್ಥರಾಗಿ ಬಿದ್ದ ಶಾಲಾ ಮಕ್ಕಳು!
ಶಿವಮೊಗ್ಗ (shivamogga), ಆಗಸ್ಟ್ 15: ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ ಜಿಲ್ಲಾಡಳಿತ ಹಮ್ಮಿಕೊಂಡಿದ್ದ, 79 ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಪಥ ಸಂಚಲನದಲ್ಲಿ ಭಾಗಿಯಾಗಿದ್ದ 3 ಶಾಲಾ ಮಕ್ಕಳು ಅಸ್ವಸ್ಥರಾಗಿ ದಿಡೀರ್ ಕುಸಿದು ಬಿದ್ದ ಘಟನೆ ನಡೆಯಿತು!
ಈ ವೇಳೆ ಸದರಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿಧಾನ ಪರಿಷತ್ ಶಾಸಕ ಡಾ. ಧನಂಜಯ ಸರ್ಜಿ ಅವರು, ತಕ್ಷಣ ಕಾರ್ಯಪ್ರವೃತ್ತರಾಗಿ ಅಲ್ಲಿಯೇ ಇದ್ದ ಸರ್ಕಾರಿ ಆಂಬುಲೆನ್ಸ್ ನಲ್ಲಿ ಬಾಲಕಿಯೋರ್ವಳನ್ನು ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಈ ವೇಳೆ ಬಾಲಕಿಯನ್ನು ಮಾತನಾಡಿಸಿ ಆತ್ಮವಿಶ್ವಾಸ ತುಂಬಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಡಾ. ಧನಂಜಯ ಸರ್ಜಿ ಅವರು, ಅಸ್ವಸ್ಥಳಾಗಿ ಬಿದ್ದ ಬಾಲಕಿ ಸ್ವಲ್ಪಕಾಲ ಒದ್ದಾಡುತ್ತಿದ್ದಳು. ಉಸಿರಾಡುವುದಕ್ಕೂ ಆಕೆಗೆ ಕಷ್ಟವಾಗುತ್ತಿತ್ತು. ಆತಂಕ ಮತ್ತು ಒತ್ತಡದಿಂದ ಗಾಬರಿ ಯಾಗಿದ್ದಳು. ಹೃದಯಬಡಿತ, ಬಿ.ಪಿ ತಪಾಸಣೆ ಮಾಡಿ, ಸಹಜ ಸ್ಥಿತಿಗೆ ಬಂದ ನಂತರ ಆ ಬಾಲಕಿಯ ಬಳಿ ಮಾತನಾಡಿ, ಸಮಾಧಾನ ಮಾಡಿ ಆತ್ಮವಿಶ್ವಾಸ ತುಂಬಿದ್ದೆನೆ.
ಪಥ ಸಂಚಲನದಲ್ಲಿ ಭಾಗಿಯಾಗಿದ್ದ ಮೂರು ಮಕ್ಕಳು ಅಸ್ವಸ್ಥರಾಗಿ ಬಿದ್ದಿದ್ದಾರೆ. ಇದು ಸಹಜವಾದದ್ದು. ತುಂಬಾ ಹೊತ್ತು ನಿಂತ ಜಾಗದಲ್ಲೇ ನಿಂತಿರುವುದು ಮತ್ತು ನೀರು ಕುಡಿಯದೆ ಇರುವುದರಿಂದ ತಲೆ ಸುತ್ತು ಬರುವುದು ಅಸ್ವಸ್ಥರಾಗುವುದು ಸಹಜವಾಗಿದೆ ಎಂದು ಹೇಳಿದ್ದಾರೆ.
ಅಸ್ವಸ್ಥರಾಗಿ ಬಿದ್ದವರನ್ನು ತಕ್ಷಣ ಎತ್ತುಕೊಂಡು ಬರಬಾರದು. ಬದಲಾಗಿ ಸಮ ಸ್ಥಿತಿಯಲ್ಲಿ ಅವರನ್ನು ಮಲಗಿಸಿ ಕಾಲನ್ನು ಮೇಲೆ ಮಾಡಬೇಕು. ಗ್ಲುಕೋಸ್ ಅಂಶ ಕಡಿಮೆಯಾಗಿರುವುದರಿಂದ ತಲೆ ಸುತ್ತು ಬರುತ್ತದೆ. ಕಾಲು ಮೇಲೆ ಮಾಡುವುದರಿಂದ ಹೃದಯಕ್ಕೆ ಮತ್ತು ಮೆದುಳಿಗೆ ರಕ್ತ ಸಂಚಾರ ಸರಾಗವಾಗುತ್ತದೆ.
ಸಾಮಾನ್ಯವಾಗಿ ಸಕ್ಕರೆ ಮತ್ತು ಬಿಪಿ ಅಂಶ ದೇಹದಲ್ಲಿ ಕಡಿಮೆಯಾದಾಗ ಈ ರೀತಿ ಅಸ್ವಸ್ಥರಾಗುತ್ತಾರೆ. ಈ ರೀತಿ ಆದಾಗ ನೀರು ಕುಡಿಸುವುದು, ಎತ್ತುಕೊಂಡು ಹೋಗುವುದು, ಕೂರಿಸುವುದು ಮಾಡಬಾರದು. ಸಮ ಸ್ಥಿತಿಯಲ್ಲಿ ಮಲಗಿಸಿ ಕಾಲನ್ನು ಮೇಲೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
Shivamogga, August 15: An incident occurred on Friday morning at the Nehru Stadium in Shivamogga city when 3 school children who were participating in the 79th Independence Day parade organized by the district administration suddenly collapsed after falling ill!