shimoga | ಶಿವಮೊಗ್ಗ : ಗೆಜ್ಜೇನಹಳ್ಳಿ ಗ್ರಾಮದ ಕೆರೆ ಒತ್ತುವರಿ – ಕ್ರಮಕ್ಕೆ ಗ್ರಾಮಸ್ಥರ ಆಗ್ರಹ!
ಶಿವಮೊಗ್ಗ (shivamogga), ಸೆಪ್ಟೆಂಬರ್ 18: ಶಿವಮೊಗ್ಗ ತಾಲೂಕಿನ ಗೆಜ್ಜೇನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಕೆಂಗಲ ಕೆರೆ ಏರಿ ಒಡೆದು, ಕೆರೆ ಜಾಗ ಒತ್ತುವರಿ ಮಾಡಲಾಗುತ್ತಿದೆ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸಿದ್ದಾರೆ.
ಕೆಲವರು ಕಾನೂನುಬಾಹಿರವಾಗಿ ಜೆಸಿಬಿ ಮೂಲಕ ಕೆರೆ ಏರಿ ಒಡೆದು, ಕೆರೆ ಜಾಗ ಒತ್ತುವರಿ ಮಾಡುತ್ತಿದ್ದಾರೆ. ಈ ಕುರಿತಂತೆ ಕೋಟೆಗಂಗೂರು ಗ್ರಾಮ ಪಂಚಾಯ್ತಿ ಆಡಳಿತ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
‘ಸದರಿ ಕೆರೆಯು ಜನ – ಜಾನುವಾರುಗಳಿಗೆ ಅತ್ಯಂತ ಅನುಕೂಲವಾಗಿದೆ. ಇದೀಗ ಕೆಲವರು ದಿಢೀರ್ ಆಗಿ, ಕಾನೂನುಬಾಹಿರವಾಗಿ ಕೆರೆ ಏರಿ ಒಡೆದು ನಾಲೆ ಒತ್ತುವರಿ ಮಾಡುತ್ತಿದ್ದಾರೆ. ಕೆರೆಗೆ ಮಣ್ಣು ಹಾಕುತ್ತಿದ್ದಾರೆ. ಹೇಳುವವರು ಕೇಳುವವರು ಯಾರೂ ಇಲ್ಲವಾಗಿದ್ದಾರೆ.
ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ತಕ್ಷಣವೇ ಕೆರೆ ಸಂರಕ್ಷಣೆಗೆ ಆಡಳಿತ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಗ್ರಾಮಸ್ಥರು ಬೀದಿಗಿಳಿದು ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ’ ಎಂದು ಗೆಜ್ಜೇನಹಳ್ಳಿ ಗ್ರಾಮದ ಮುಖಂಡ ಟೀಕಾನ್ಯಾಯ್ಕ್ ಹಾಗೂ ಇತರರು ಎಚ್ಚರಿಕೆ ನೀಡಿದ್ದಾರೆ.
Shivamogga, September 18: Local villagers have alleged that the Kengala Lake, located on the outskirts of Gejjenahalli village in Shivamogga taluk, has risen and burst, and that the lake land is being encroached upon.
The lake is being breached and encroached upon by JCBs. The villagers have alleged that despite bringing this matter to the attention of the relevant departments including the Gram Panchayat administration, there has been no avail.
