
shimoga | ಶಿವಮೊಗ್ಗ : ಸ್ವಂತ ಹಣದಲ್ಲಿ ರಸ್ತೆ ಗುಂಡಿ – ಗೊಟರು ಮುಚ್ಚಿಸಿದ ಮುಖಂಡ!
ಶಿವಮೊಗ್ಗ (shivamogga), ಸೆಪ್ಟೆಂಬರ್ 18: ಜನ – ವಾಹನ ಸಂಚಾರಕ್ಕೆ ದುಸ್ತರವಾಗಿ ಪರಿಣಮಿಸಿದ್ದ, ರಸ್ತೆಯ ಗುಂಡಿ – ಗೊಟರುಗಳನ್ನು ಮುಖಂಡರೋರ್ವರು ಮಣ್ಣು ಹಾಕಿ ಮುಚ್ಚಿಸಿದ ಘಟನೆ, ಶಿವಮೊಗ್ಗ ನಗರದ ಹೊರವಲಯ ಆಲ್ಕೋಳದ ನಂದಿನಿ ಬಡಾವಣೆಯಲ್ಲಿ ನಡೆದಿದೆ.
ಜೆಸಿಐ ಶಿವಮೊಗ್ಗ ಸಮೃದ್ದಿ ಘಟಕದ ಪ್ರಮುಖರಾದ ನರಸಿಂಹಮೂರ್ತಿ ಎಂಬುವರೆ, ತಮ್ಮ ಸ್ವಂತ ವೆಚ್ಚದಲ್ಲಿ ರಸ್ತೆಯ ಗುಂಡಿ-ಗೊಟರುಗಳನ್ನು ಮುಚ್ಚಿಸಿದವರಾಗಿದ್ಧಾರೆ.
ಕಳೆದ ಹಲವು ವರ್ಷಗಳಿಂದ ಮುಖ್ಯ ರಸ್ತೆಯಲ್ಲಿ ಗುಂಡಿ – ಗೊಟರು ಬಿದ್ದು ಜನ – ವಾಹನ ಸಂಚಾರಕ್ಕೆ ದುಸ್ತರವಾಗಿ ಪರಿಣಮಿಸಿತ್ತು. ರಸ್ತೆಯ ಅವ್ಯವಸ್ಥೆ ಸರಿಪಡಿಸಲು ಯಾವುದೇ ಕ್ರಮಕೈಗೊಂಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ಜನ – ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ ಸ್ಥಳೀಯರಾದ ಕುಮಾರ್, ಬಸವರಾಜ್ ಮೊದಲಾದವರ ಸಹಕಾರದೊಂದಿಗೆ ರಸ್ತೆಯ ಗುಂಡಿ – ಗೊಟರುಗಳಿಗೆ ಮಣ್ಣು ಹಾಕಿ ಮುಚ್ಚುವ ಕಾರ್ಯ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ನಂದಿನಿ ಬಡಾವಣೆ ಮುಖ್ಯ ರಸ್ತೆಯು ಅವ್ಯವಸ್ಥೆ ಸರಿಪಡಿಸಲು ಮಹಾನಗರ ಪಾಲಿಕೆ ಆಡಳಿತ ಕಾಲಮಿತಿಯೊಳಗೆ ಕ್ರಮಕೈಗೊಂಡು, ಸುಗಮ ಜನ – ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ನರಸಿಂಹಮೂರ್ತಿ ಅವರು ಆಗ್ರಹಿಸಿದ್ದಾರೆ.
Shivamogga, September 18: An incident occurred in the Nandina area of Alkola, on the outskirts of Shivamogga city, where a leader filled in the potholes and ditches on the roads that had become impassable for people and vehicles.