
sagara news | ಸಾಗರ | ಸಿಗಂದೂರು ರಸ್ತೆಯಲ್ಲಿ ಟೆಂಪೋ ಟ್ರಾವೆಲರ್ ಪಲ್ಟಿ : 14 ಜನರಿಗೆ ಗಾಯ – ಆಸ್ಪತ್ರೆಗೆ ದಾಖಲು!
ಸಾಗರ (sagar), ಸೆಪ್ಟೆಂಬರ್ 28: ಟೆಂಪೋ ಟ್ರಾವೆಲರ್ ವಾಹನವೊಂದು ಪಲ್ಟಿಯಾಗಿ ಬಿದ್ದ ಪರಿಣಾಮ, ಅದರಲ್ಲಿದ್ದ 14 ಜನರು ಗಾಯಗೊಂಡ ಘಟನೆ, ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿಗಂದೂರು ರಸ್ತೆಯ ಹುಲಿದೇವರ ಬನ ಸಮೀಪದ ಕೂರನಕೊಪ್ಪ ಗ್ರಾಮದ ಬಳಿ ಸೆಪ್ಟೆಂಬರ್ 28 ರ ಬೆಳಿಗ್ಗೆ ನಡೆದಿದೆ.
ಬೆಂಗಳೂರು ಮೂಲದ 13 ಜನರಿದ್ದ ಪ್ರವಾಸಿಗರ ತಂಡ, ಸಿಗಂದೂರು ದೇವಾಲಯಕ್ಕೆ ತೆರಳಲು ಸಾಗರದವರೆಗೆ ರೈಲಿನಲ್ಲಿ ಆಗಮಿಸಿದ್ದರು. ನಂತರ ಸಾಗರದಿಂದ ಬಾಡಿಗೆ ಟೆಂಪೋ ಟ್ರಾವೆಲರ್ ವಾಹನದಲ್ಲಿ ಸಿಗಂದೂರಿಗೆ ಹೊರಟಿದ್ದರು.
ಎದುರಿಗೆ ಆಗಮಿಸಿದ ಆಕಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದ ವೇಳೆ, ಚಾಲಕನ ನಿಯಂತ್ರಣ ಕಳೆದುಕೊಂಡ ಟೆಂಪೋ ಟ್ರಾವೆಲರ್ ರಸ್ತೆ ಬದಿ ಪಲ್ಟಿಯಾಗಿ ಬಿದ್ದಿದೆ ಎಂದು ತಿಳಿದುಬಂದಿದೆ.
ಗಾಯಾಳುಗಳಿಗೆ ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಮಹಿಳೆಯರೂ ಇದ್ದಾರೆ. ಹೆಸರು ಮತ್ತೀತರ ವಿವರ ಇನ್ನಷ್ಟೆ ತಿಳಿದುಬರಬೇಕಾಗಿದೆ.
ಘಟನಾ ಸ್ಥಳಕ್ಕೆ ಇನ್ಸ್’ಪೆಕ್ಟರ್ ಮಹಾಬಲೇಶ್ವರ ಮತ್ತವರ ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ. ಮತ್ತೊಂದೆಡೆ, ಆಸ್ಪತ್ರೆಗೆ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿಯಿತ್ತು ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.
Sagar, September 28: An incident occurred on the morning of September 28 when a tempo traveler vehicle overturned, injuring 14 people on board. The incident took place near Kuranakoppa village near Hulidevara Bana on Sigandur Road in Sagar taluk, Shimoga district.