Private bus crashes into culvert: Several injured! ಸಾಗರ – ಮೋರಿ ಕಟ್ಟೆಗೆ ಡಿಕ್ಕಿ ಹೊಡೆದ ಖಾಸಗಿ ಬಸ್ : ಹಲವರಿಗೆ ಗಾಯ!

sagara accident news | ಸಾಗರ | ಮೋರಿ ಕಟ್ಟೆಗೆ ಡಿಕ್ಕಿ ಹೊಡೆದ ಖಾಸಗಿ ಬಸ್ : ಹಲವರಿಗೆ ಗಾಯ!

ಸಾಗರ (sagara), ಸೆಪ್ಟೆಂಬರ್ 28: ಸ್ಟೇರಿಂಗ್ ಜಾಮ್ ಆಗಿ ಚಾಲಕನ ನಿಯಂತ್ರಣ ಕಳೆದುಕೊಂಡ ಖಾಸಗಿ ಬಸ್ ವೊಂದು, ರಸ್ತೆ ಬದಿಯ ಮೋರಿ ಕಟ್ಟೆಗೆ ಡಿಕ್ಕಿ ಹೊಡೆದ ಘಟನೆ, ಸೆಪ್ಟೆಂಬರ್ 28 ರಂದು ಸಾಗರ – ಕಾರ್ಗಲ್ ನಡುವಿನ ಬಚ್ಚಗರು ಎಂಬ ಪ್ರದೇಶದಲ್ಲಿ ನಡೆದಿದೆ.

ಸದರಿ ಬಸ್ ಕಾರ್ಗಲ್ ಕಡೆಯಿಂದ ಸಾಗರ ಪಟ್ಟಣಕ್ಕೆ ಆಗಮಿಸುತ್ತಿತ್ತು. ಸುಮಾರು 43 ಪ್ರಯಾಣಿಕರಿದ್ದರು. ದಿಢೀರ್ ಸ್ಟೇರಿಂಗ್ ಜಾಮ್ ಆಗಿದ್ದರಿಂದ, ಬಸ್ ರಸ್ತೆ ಬದಿಯ ಮೋರಿ ಕಟ್ಟೆಗೆ ಡಿಕ್ಕಿಯಾಗಿ, ಕಟ್ಟೆಯ ಮೇಲೇರಿ ನಿಂತಿದೆ.

ಅವಘಡದಲ್ಲಿ ಬಸ್ ಚಾಲಕ, ಕಂಡಕ್ಟರ್ ಹಾಗೂ 8 ಪ್ರಯಾಣಿಕರಿಗೆ ಗಾಯವಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ಇಲಾಖೆಯ ಹೆದ್ದಾರಿ ಗಸ್ತು ವಾಹನ ಘಟನಾ ಸ್ಥಳಕ್ಕೆ ಆಗಮಿಸಿದೆ.

ಸದರಿ ವಾಹನದಲ್ಲಿ ಕರ್ತವ್ಯದಲ್ಲಿದ್ದ ಎಎಸ್ಐ ನಾಗಪ್ಪ ಹಾಗೂ ಚಾಲಕ ಶಿವಾನಂದರವರು, ಗಾಯಾಳುಗಳನ್ನು ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಸಕಾಲಿಕ ನೆರವಿನಹಸ್ತ ಕಲ್ಪಿಸಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೆಚ್ಚುಗೆ : ಹೆದ್ದಾರಿ ಗಸ್ತು ವಾಹನದ ಸಿಬ್ಬಂದಿಗಳ ಕರ್ತವ್ಯ ಪ್ರಜ್ಞೆಗೆ ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Sagar, September 28: An incident occurred in the Bachchagaru area between Sagar and Kargal, where the driver of a private bus lost control due to a steering jam and crashed into a roadside ditch.

The bus was coming from Kargal to Sagar town. There were about 43 passengers. Due to a sudden steering jam, the bus crashed into a roadside culvert and came to rest on the culvert.

shimoga APMC vegetable prices | Details of vegetable prices for October 10 in shimoga APMC wholesale market shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಅಕ್ಟೋಬರ್ 10 ರ ತರಕಾರಿ ಬೆಲೆಗಳ ವಿವರ Previous post shimoga APMC vegetable prices | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ 28 ರ ತರಕಾರಿ ಬೆಲೆಗಳ ವಿವರ
Tempo Traveler overturns on Sigandur Road : 14 people injured - admitted to hospital! ಸಿಗಂದೂರು ರಸ್ತೆಯಲ್ಲಿ ಟೆಂಪೋ ಟ್ರಾವೆಲರ್ ಪಲ್ಟಿ : 14 ಜನರಿಗೆ ಗಾಯ – ಆಸ್ಪತ್ರೆಗೆ ದಾಖಲು! Next post sagara news | ಸಾಗರ | ಸಿಗಂದೂರು ರಸ್ತೆಯಲ್ಲಿ ಟೆಂಪೋ ಟ್ರಾವೆಲರ್ ಪಲ್ಟಿ : 14 ಜನರಿಗೆ ಗಾಯ – ಆಸ್ಪತ್ರೆಗೆ ದಾಖಲು!