Shivamogga : Head-on collision between bikes – riders seriously injured! ಶಿವಮೊಗ್ಗ : ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ – ಸವಾರರಿಗೆ ಗಂಭೀರ ಗಾಯ!

shimoga accident news | ಶಿವಮೊಗ್ಗ : ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ – ಸವಾರರಿಗೆ ಗಂಭೀರ ಗಾಯ!

ಶಿವಮೊಗ್ಗ (shivamogga), ಸೆಪ್ಟೆಂಬರ್ 30: ಎರಡು ಬೈಕ್ ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ, ಅಕ್ಟೋಬರ್ 1 ರ ಬೆಳಿಗ್ಗೆ ಸೋಮಿನಕೊಪ್ಪದ ಕೆ ಹೆಚ್ ಬಿ ಪ್ರೆಸ್ ಕಾಲೋನಿಯ, ಅಮರ್ ಗ್ರಾನೈಟ್ ಗೋಡೌನ್ ಸಮೀಪದ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ಗುರುಪುರ ಬಡಾವಣೆ ನಿವಾಸಿ ಮುರುಗ (33) ಹಾಗೂ ಹುಣಸೋಡು ಗ್ರಾಮದ ನಿವಾಸಿ ನಾಯ್ಕ್ (24) ಗಾಯಗೊಂಡ ಬೈಕ್ ಸವಾರರು ಎಂದು ಗುರುತಿಸಲಾಗಿದೆ. ಇವರನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೋಂಡಾ ಆಕ್ಟೀವಾ ಹಾಗೂ ಪಲ್ಸರ್ ಬೈಕ್ ಗಳ ನಡುವೆ ಈ ಮುಖಾಮುಖಿ ಅಪಘಾತ ಸಂಭವಿಸಿದೆ. ಸ್ಥಳೀಯ ನಾಗರೀಕರು ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ನೆರವಾಗಿದ್ದಾರೆ. ಅವಘಡದ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.

ಅಪಘಾತ ವಲಯ : ಸದರಿ ರಾಜ್ಯ ಹೆದ್ದಾರಿಯು ಪಾಲಿಕೆ ವ್ಯಾಪ್ತಿಯಲ್ಲಿದೆ. ವಾಹನಗಳು ಮಿತಿಮೀರಿದ ವೇಗದಲ್ಲಿ ಸಂಚರಿಸುತ್ತಿವೆ. ಇತ್ತೀಚೆಗೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕಾರಣದಿಂದ ಪ್ರೆಸ್ ಕಾಲೋನಿ ಸಮೀಪ ವಾಹನಗಳ ವೇಗ ನಿಯಂತ್ರಣಕ್ಕೆ ವೈಜ್ಞಾನಿಕ ರೀತಿಯಲ್ಲಿ ಹಂಪ್ಸ್ ಹಾಕುವುದು ಸೇರಿದಂತೆ ಇತರೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಕೆಹೆಚ್’ಬಿ ಪ್ರೆಸ್ ಕಾಲೋನಿ ನಿವಾಸಿಗಳ ಕ್ಷೇಮಾಭಿವೃದ್ದಿ ಸಂಘವು ಪಿಡಬ್ಲ್ಯೂಡಿ ಇಲಾಖೆ ಹಾಗೂ ಟ್ರಾಫಿಕ್ ಪೊಲೀಸ್ ರಿಗೆ ಆಗ್ರಹಿಸಿದೆ.

Shivamogga, September 30: Two riders were seriously injured in a head-on collision between two bikes on the morning of October 1 near the Amar Granite Godown on Gejjenahalli Road. The head-on accident occurred between a Honda Activa and a Pulsar bike. Local citizens immediately rushed the injured to the hospital and helped. More details about the accident are yet to be released.

Dussehra festival: Shopping spree in Shimoga..! ದಸರಾ ಹಬ್ಬ : ಶಿವಮೊಗ್ಗದಲ್ಲಿ ಖರೀದಿ ಭರಾಟೆ ಜೋರು..! Previous post shimoga dasara 2025 | ದಸರಾ ಹಬ್ಬ : ಶಿವಮೊಗ್ಗದಲ್ಲಿ ಖರೀದಿ ಭರಾಟೆ ಜೋರು..!
‘Will DK Shivakumar become CM…?’: What did Siddaramaiah say? ‘ಡಿ ಕೆ ಶಿವಕುಮಾರ್ ಸಿಎಂ ಆಗ್ತಾರಾ…?’ : ಸಿದ್ದರಾಮಯ್ಯ ಹೇಳಿದ್ದೇನು? Next post mysore news | ‘ಡಿ ಕೆ ಶಿವಕುಮಾರ್ ಸಿಎಂ ಆಗ್ತಾರಾ…?’ : ಸಿದ್ದರಾಮಯ್ಯ ಹೇಳಿದ್ದೇನು?