Dussehra festival: Shopping spree in Shimoga..! ದಸರಾ ಹಬ್ಬ : ಶಿವಮೊಗ್ಗದಲ್ಲಿ ಖರೀದಿ ಭರಾಟೆ ಜೋರು..!

shimoga dasara 2025 | ದಸರಾ ಹಬ್ಬ : ಶಿವಮೊಗ್ಗದಲ್ಲಿ ಖರೀದಿ ಭರಾಟೆ ಜೋರು..!

ಶಿವಮೊಗ್ಗ, ಸೆಪ್ಟೆಂಬರ್ 30: ದಸರಾ ಹಬ್ಬದ ಪ್ರಮುಖ ಘಟ್ಟವಾದ ಆಯುಧ ಪೂಜೆ ಹಾಗೂ ವಿಜಯದಶಮಿ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 30 ರಂದು ಶಿವಮೊಗ್ಗ ನಗರದಲ್ಲಿ ಅಗತ್ಯ ವಸ್ತುಗಳ ಖರೀದಿ ಭರಾಟೆ ಜೋರಾಗಿತ್ತು.

ಗಾಂಧಿ ಬಜಾರ್ ರಸ್ತೆ, ಶಿವಪ್ಪನಾಯಕ ಸರ್ಕಲ್, ವೀರಶೈವ ಕಲ್ಯಾಣ ಮಂದಿರ ರಸ್ತೆ, ಲಕ್ಷ್ಮೀ ಟಾಕೀಸ್ ಸರ್ಕಲ್, ವಿನೋಬನಗರ ಪೊಲೀಸ್ ಚೌಕಿ, ಎಪಿಎಂಸಿ ತರಕಾರಿ ಮಾರುಕಟ್ಟೆ, ಗೋಪಿ ಸರ್ಕಲ್ ಗಳಲ್ಲಿ ಜನಜಂಗುಳಿ ಕಂಡುಬಂದಿತು. ಹಬ್ಬದ ಖರೀದಿ ಭರ್ಜರಿಯಾಗಿ ನಡೆಯಿತು. ವ್ಯಾಪಾರಿಗಳು ಉತ್ತಮ ವಹಿವಾಟು ನಡೆಸಿದರು.

ಹಾಗೆಯೇ ನಗರದ ಕೆಲ ರಸ್ತೆ, ವೃತ್ತಗಳಲ್ಲಿ ಹೂವು, ಹಣ್ಣು, ಬೂದುಗುಂಬಳ ಕಾಯಿ, ಬಾಳೆಕಂದು, ನಿಂಬೆ ಹಣ್ಣು, ಪೂಜಾ ಸಾಮಗ್ರಿಗಳು, ಅಲಂಕಾರಿಕ ವಸ್ತುಗಳ ಮಾರಾಟ ಜೋರಾಗಿತ್ತು.

ಆದರೆ ಈ ಹಿಂದಿನ ವರ್ಷಗಳ ರೀತಿಯಲ್ಲಿಯೇ ಹೂವು, ಹಣ್ಣು ಸೇರಿದಂತೆ ಕೆಲ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದ್ದು ಕಂಡುಬಂದಿತು. ಆದರೆ ಬೆಲೆ ಏರಿಕೆಯು, ನಾಗರೀಕರ ಖರೀದಿ ಉತ್ಸಾಹಕ್ಕೆ ಅಡ್ಡಿಯಾಗಲಿಲ್ಲ.

Shivamogga, September 30: In the backdrop of the important phase of the Dussehra festival, Ayudha Puja and Vijayadashami, there was a rush to buy essential items in Shivamogga city on September 30.

Crowds were seen at Gandhi Bazaar Road, Shivappanayaka Circle, Veerashaiva Kalyana Mandir Road, Lakshmi Talkies Circle, Vinobanagar Police Chowki, APMC Vegetable Market, Gopi Circle. Festive shopping was a big success. Traders did good business.

Bhadravati: Murder case – 8 people sentenced to life imprisonment! ಭದ್ರಾವತಿ : ಕೊಲೆ ಪ್ರಕರಣ – 8 ಜನರಿಗೆ ಆಜೀವ ಜೈಲು ಶಿಕ್ಷೆ! Previous post bhadravati news | ಭದ್ರಾವತಿ : ಕೊಲೆ ಪ್ರಕರಣ – 8 ಜನರಿಗೆ ಆಜೀವ ಜೈಲು ಶಿಕ್ಷೆ!
Shivamogga : Head-on collision between bikes – riders seriously injured! ಶಿವಮೊಗ್ಗ : ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ – ಸವಾರರಿಗೆ ಗಂಭೀರ ಗಾಯ! Next post shimoga accident news | ಶಿವಮೊಗ್ಗ : ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ – ಸವಾರರಿಗೆ ಗಂಭೀರ ಗಾಯ!