shikaripura news | ಮಹಿಳೆಯ ಹೊಟ್ಟೆಯಲ್ಲಿತ್ತು 12.5 ಕೆಜಿ ತೂಕದ ಗೆಡ್ಡೆ : ಶಿಕಾರಿಪುರ ಸರ್ಕಾರಿ ಆಸ್ಪತ್ರೆ ವೈದ್ಯರ ಯಶಸ್ವಿ ಶಸ್ತ್ರಚಿಕಿತ್ಸೆ!

ಮಹಿಳೆಯ ಹೊಟ್ಟೆಯಲ್ಲಿತ್ತು 12.5 ಕೆಜಿ ತೂಕದ ಗೆಡ್ಡೆ : ಶಿಕಾರಿಪುರ ಸರ್ಕಾರಿ ಆಸ್ಪತ್ರೆ ವೈದ್ಯರ ಯಶಸ್ವಿ ಶಸ್ತ್ರಚಿಕಿತ್ಸೆ! ಶಿವಮೊಗ್ಗ, ನವೆಂಬರ್ 26: ಮಹಿಳೆಯೋರ್ವರ ಹೊಟ್ಟೆಯಲ್ಲಿದ್ದ 12.5 ಕೆಜಿ ತೂಕದ ಗಡ್ಡೆಯನ್ನು, ಶಿಕಾರಿಪುರ ತಾಯಿ – ಮಕ್ಕಳ ಸರ್ಕಾರಿ ಆಸ್ಪತ್ರೆ ವೈದ್ಯರ ತಂಡ, ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆಯುವಲ್ಲಿ ಸಫಲವಾದ ಘಟನೆ ನವೆಂಬರ್ 25 ರಂದು ನಡೆದಿದೆ. ಶಿಕಾರಿಪುರ ಪಟ್ಟಣದ ಸೊಪ್ಪಿನಕೇರಿ ಬಡಾವಣೆಯ ನಿವಾಸಿ 55 ವರ್ಷ ವಯೋಮಾನದ ಮಹಿಳೆಯೇ ಶಸ್ತ್ರಚಿಕಿತ್ಸೆಗೊಳಗಾದವರೆಂದು ಗುರುತಿಸಲಾಗಿದೆ. ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ಮುಂದುವರಿದಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಏನೀದು ಘಟನೆ? : ಸದರಿ ಮಹಿಳೆಯು ಕಳೆದ ಸುಮಾರು 1 ವರ್ಷದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ಶ್ರೀನಿವಾಸ್ ಅವರು ಪರಿಶೀಲಿಸಿದಾಗ, ಮಹಿಳೆ ಹೊಟ್ಟೆಯಲ್ಲಿ ಗೆಡ್ಡೆಯಿರುವುದು ಕಂಡುಬಂದಿತ್ತು. ಈ ಹಿನ್ನೆಯಲ್ಲಿ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿ ಗೆಡ್ಡೆ ಹೊರೆ ತೆಗೆಯಲಾಗಿದೆ. ಡಾ. ಶ್ರೀನಿವಾಸ್ ನೇತೃತ್ವದಲ್ಲಿ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಡಾ. ಪ್ರಕಾಶ್, ಅರವಳಿಕೆ ತಜ್ಞ ಡಾ. ಗುರುದತ್ತ್, ಸಿಸ್ಟರ್ ಭಾರತೀ ಹಾಗೂ ಇತರೆ ಸಿಬ್ಬಂದಿಗಳಿದ್ದರು. A tumor weighing 12.5 kg was in the woman's stomach: Shikaripura government hospital doctors successfully operated! Shikaripura, November 26: A team of doctors from the Shikaripura Government Mother and Child Hospital successfully removed a 12.5 kg tumor from a woman's stomach on November 25.

ಶಿಕಾರಿಪುರ (shikaripur), ನವೆಂಬರ್ 26: ಮಹಿಳೆಯೋರ್ವರ ಹೊಟ್ಟೆಯಲ್ಲಿದ್ದ 12.5 ಕೆಜಿ ತೂಕದ ಗಡ್ಡೆಯನ್ನು, ಶಿಕಾರಿಪುರ ತಾಯಿ – ಮಕ್ಕಳ ಸರ್ಕಾರಿ ಆಸ್ಪತ್ರೆ ವೈದ್ಯರ ತಂಡ, ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆಯುವಲ್ಲಿ ಸಫಲವಾದ ಘಟನೆ ನವೆಂಬರ್ 25 ರಂದು ನಡೆದಿದೆ.

ಶಿಕಾರಿಪುರ ಪಟ್ಟಣದ ಸೊಪ್ಪಿನಕೇರಿ ಬಡಾವಣೆಯ ನಿವಾಸಿ 55 ವರ್ಷ ವಯೋಮಾನದ ಮಹಿಳೆಯೇ ಶಸ್ತ್ರಚಿಕಿತ್ಸೆಗೊಳಗಾದವರೆಂದು ಗುರುತಿಸಲಾಗಿದೆ. ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ಮುಂದುವರಿದಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಏನೀದು ಘಟನೆ? : ಸದರಿ ಮಹಿಳೆಯು ಕಳೆದ ಸುಮಾರು 1 ವರ್ಷದಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ಶ್ರೀನಿವಾಸ್ ಅವರು ಪರಿಶೀಲಿಸಿದಾಗ, ಮಹಿಳೆ ಹೊಟ್ಟೆಯಲ್ಲಿ ಗೆಡ್ಡೆಯಿರುವುದು ಕಂಡುಬಂದಿತ್ತು.

ಈ ಹಿನ್ನೆಯಲ್ಲಿ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿ ಗೆಡ್ಡೆ ಹೊರೆ ತೆಗೆಯಲಾಗಿದೆ. ಡಾ. ಶ್ರೀನಿವಾಸ್ ನೇತೃತ್ವದಲ್ಲಿ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಡಾ. ಪ್ರಕಾಶ್, ಅರವಳಿಕೆ ತಜ್ಞ ಡಾ. ಗುರುದತ್ತ್, ಸಿಸ್ಟರ್ ಭಾರತೀ ಹಾಗೂ ಇತರೆ ಸಿಬ್ಬಂದಿಗಳಿದ್ದರು.

Shikaripura, November 26: A team of doctors from the Shikaripura Government Mother and Child Hospital successfully removed a 12.5 kg tumor from a woman’s stomach on November 25.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →