shimoga crime news | ಶಿವಮೊಗ್ಗ : ರಿಂಗ್ ರೋಡಲ್ಲಿ ಸ್ಕಾರ್ಪಿಯೋ ಕಾರಲ್ಲಿ ಗಾಂಜಾ, ಡ್ರಗ್ಸ್ ಮಾರಾಟ – ಇಬ್ಬರು ಅರೆಸ್ಟ್!

Shivamogga: Two arrested for selling marijuana and drugs in a Scorpio car on the Ring Road! ಶಿವಮೊಗ್ಗ : ರಿಂಗ್ ರೋಡಲ್ಲಿ ಸ್ಕಾರ್ಪಿಯೋ ಕಾರಲ್ಲಿ ಗಾಂಜಾ, ಡ್ರಗ್ಸ್ ಮಾರಾಟ – ಇಬ್ಬರು ಅರೆಸ್ಟ್!

ಶಿವಮೊಗ್ಗ (shivamogga), ನವೆಂಬರ್ 27: ಶಿವಮೊಗ್ಗದ ಹೊರವಲಯದ ಲಕ್ಷ್ಮೀಪುರದಿಂದ ಶ್ರೀರಾಂಪುರಕ್ಕೆ ಹೋಗುವ ರಿಂಗ್ ರೋಡ್ ನಲ್ಲಿ, ಸ್ಕಾರ್ಪಿಯೋ ಕಾರಿನಲ್ಲಿ ಗಾಂಜಾ ಹಾಗೂ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ, ಇಬ್ಬರು ಆರೋಪಿಗಳನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಶಿವಮೊಗ್ಗದ ಟಿಪ್ಪುನಗರ ಎಡಭಾಗ 7 ನೇ ಕ್ರಾಸ್ ನಿವಾಸಿ ಶಾಹಿದ್ ಖಾನ್ ಯಾನೆ ಶಾಹಿದ್ (27) ಹಾಗೂ ಸೂಳೇಬೈಲು 2 ನೇ ಕ್ರಾಸ್ ನಿವಾಸಿ ಮಹಮ್ಮದ್ ಜಾಫರ್ ಸಾದಿಕ್ ಯಾನೆ ಜಾಫರ್ ಸಾದಿಕ್ (23) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಆರೋಪಿಗಳಿಂದ 1 ಕೆಜಿ 420 ಗ್ರಾಂ ತೂಕದ ಗಾಂಜಾ, 24 ಗ್ರಾಂ ಡ್ರಗ್ಸ್ ಹಾಗೂ ಸ್ಕಾರ್ಪಿಯೋ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಎಸ್ಪಿ ಮಿಥುನ್ ಕುಮಾರ್, ಎಎಸ್ಪಿಗಳಾದ ಎ ಜಿ ಕಾರಿಯಪ್ಪ, ರಮೇಶ್ ಕುಮಾರ್, ಡಿವೈಎಸ್ಪಿ ಬಾಬು ಆಂಜನಪ್ಪ ಮಾರ್ಗದರ್ಶನದಲ್ಲಿ ಇನ್ಸ್’ಪೆಕ್ಟರ್ ಕೆ ಟಿ ಗುರುರಾಜ್, ಸಬ್ ಇನ್ಸ್’ಪೆಕ್ಟರ್ ರಘುವೀರ್, ಎಎಸ್ಐ ಚಂದ್ರಾನಾಯ್ಕ್,

ಸಿಬ್ಬಂದಿಗಳಾದ ಅರುಣ್ ಕುಮಾರ್, ಕಿರಣ್ ಮೋರೆ, ಸಂತೋಷ್, ನಾಗಪ್ಪ ಅಡಿವೆಪ್ಪನವರ್, ಲೋಕೇಶ್ ಎಸ್ ಆರ್, ರಂಗನಾಥ್ ರವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

shivamogga : The Tunganagar police arrested two accused on charges of selling ganja and drugs in a Scorpio car on the ring road leading from Lakshmipur to Srirampur on the outskirts of Shivamogga.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →