shimoga dc – sp | ಶಿವಮೊಗ್ಗ ಜಿಲ್ಲೆಗೆ ನೂತನ ಡಿಸಿ – ಎಸ್ಪಿ  : ಒತ್ತಡಗಳಿಗೆ ಮಣಿಯದಿರಲಿ, ಜನಸ್ನೇಹಿ ಆಡಳಿತದತ್ತ ಗಮನವಿರಲಿ!

New DC-SP for Shivamogga district: Don't give in to pressure - focus on people-friendly administration! ಶಿವಮೊಗ್ಗ ಜಿಲ್ಲೆಗೆ ನೂತನ ಡಿಸಿ – ಎಸ್ಪಿ : ಒತ್ತಡಗಳಿಗೆ ಮಣಿಯದಿರಲಿ - ಜನಸ್ನೇಹಿ ಆಡಳಿತದತ್ತ ಗಮನವಿರಲಿ!

ಶಿವಮೊಗ್ಗ (shivamogga), ಜನವರಿ 02 : ಶಿವಮೊಗ್ಗ ಜಿಲ್ಲೆಯ ಆಡಳಿತಾತ್ಮಕ ವ್ಯವಸ್ಥೆಯಲ್ಲಿ, ರಾಜ್ಯ ಸರ್ಕಾರ ದಿಡೀರ್ ಬದಲಾವಣೆ ಮಾಡಿದೆ. ಏಕಕಾಲದಲ್ಲಿಯೇ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ನೇಮಿಸಿದೆ.

ಡಿಸಿಯಾಗಿ ಪ್ರಭುಲಿಂಗ್ ಕವಲಿಕಟ್ಟಿ ಹಾಗೂ ಎಸ್ಪಿಯಾಗಿ ಬಿ ನಿಖಿಲ್ ರನ್ನು ನೇಮಿಸಲಾಗಿದೆ. ಈಗಾಗಲೇ ಡಿಸಿ ಹಾಗೂ ಎಸ್ಪಿ ಅವರು ಅಧಿಕಾರ ಸ್ವೀಕರಿಸಿ, ಅದಿಕೃತವಾಗಿ ಕಾರ್ಯಭಾರ ಆರಂಭಿಸಿದ್ದಾರೆ.

ಜನಪರವಾಗಿರಲಿ : ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆಯು ಅತ್ಯಂತ ವಿಶೇಷವಾಗಿದೆ. ಎಲ್ಲ ರಂಗಗಳಲ್ಲಿಯೂ ಪ್ರಾಬಲ್ಯತೆ ಹೊಂದಿದೆ. ಸಕಾರಾತ್ಮಕ ವಿಚಾರಗಳೆಷ್ಟಿವೆಯೋ, ಅಷ್ಟೇ ನಕಾರಾತ್ಮಕ ಅಂಶಗಳು ಇವೆ.

ಈ ಹಿಂದೆ ಜಿಲ್ಲೆಯಲ್ಲಿ ಜನಪರವಾಗಿ, ದಕ್ಷತೆಯಿಂದ ಕಾರ್ಯನಿರ್ವಹಿಸಿದ ಸಾಕಷ್ಟು ಐಎಎಸ್, ಐಪಿಎಸ್, ಕೆಎಎಸ್ ದರ್ಜೆಯ ಅಧಿಕಾರಿಗಳಿದ್ದಾರೆ. ತಮ್ಮ ಕಾರ್ಯನಿರ್ವಹಣೆ ಮೂಲಕ ರಾಜ್ಯಮಟ್ಟದಲ್ಲಿ ಹೆಸರು ಸಂಪಾದಿಸಿದ್ದರು.  

ಅದೇ ರೀತಿಯಲ್ಲಿ ಹಾಲಿ ಡಿಸಿ ಹಾಗೂ ಎಸ್ಪಿಯವರು ಕೂಡ ಕಾರ್ಯನಿರ್ವಹಿಸಬೇಕಾಗಿದೆ. ಆಡಳಿತ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ತರಬೇಕಾಗಿದೆ. ಯಾವುದೇ ಒತ್ತಡ – ಪ್ರಭಾವಗಳಿಗೆ ಮಣೆ ಹಾಕದೆ, ಜಿಲ್ಲೆಯ ನಾಗರೀಕರಿಗೆ ಅನುಕೂಲಕರವಾದ ಕಾರ್ಯಗಳತ್ತ ಚಿತ್ತ ಹರಿಸಬೇಕಾಗಿದೆ. ಕಾನೂನು – ಸುವ್ಯವಸ್ಥೆ ಪರಿಪಾಲನೆಯಲ್ಲಿ ಎಚ್ಚರಿಕೆಯಿಂದ ಹೆಜ್ಜೆಯಿಡಬೇಕಾಗಿದೆ.

*** ಜಿಲ್ಲೆಯ ಆಡಳಿತ ವ್ಯವಸ್ಥೆಯಲ್ಲಿ, ನೂತನ ಜಿಲ್ಲಾಧಿಕಾರಿಗಳು ಆಮೂಲಾಗ್ರ ಸುಧಾರಣೆ – ಬದಲಾವಣೆ ತರಬೇಕಾಗಿದೆ. ಈ ನಿಟ್ಟಿನಲ್ಲಿ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಬೇಕಾಗಿದೆ. ಸರ್ಕಾರಿ ಕಚೇರಿಗಳಿಗೆ ನಿಯಮಿತವಾಗಿ ದಿಡೀರ್ ಭೇಟಿಯಿತ್ತು ಪರಿಶೀಲಿಸಬೇಕು. ಜನ ಸಂಪರ್ಕ ಸಭೆ, ಅದಾಲತ್ ಗಳನ್ನು ಆಯೋಜಿಸಿ ಸಾರ್ವಜನಿಕರ ಅಹವಾಲು ಆಲಿಸಬೇಕು. ಕಡತ ವಿಲೇವಾರಿಗೆ ವೇಗ ನೀಡಬೇಕು. ಅಕ್ರಮ – ಅವ್ಯವಹಾರ, ಕಾನೂನುಬಾಹಿರ ದಂಧೆಗಳ ಕಡಿವಾಣಕ್ಕೆ ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕು. ಲಕ್ಷಾಂತರ ನಾಗರಿಕರಿಗೆ ಅನುಕೂಲಕರವಾಗಿರುವ ಆಡಳಿತಾತ್ಮಕ ಕ್ರಮಗಳ ಅನುಷ್ಠಾನಕ್ಕೆ ವೇಗ ನೀಡುವುದರ ಜೊತೆಗೆ, ಅದಕ್ಷ – ಭ್ರಷ್ಟ ಅಧಿಕಾರಿ – ಸಿಬ್ಬಂದಿಗಳಿಗೆ ತಕ್ಕ ಶಾಸ್ತಿ ಮಾಡಬೇಕು. ಶಿವಮೊಗ್ಗ ನಗರದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಅವ್ಯಾಹತವಾಗಿದೆ. ಹೇಳುವವರು ಕೇಳುವವರು ಇಲ್ಲದಂತಾಗಿದೆ. ಕೆಲ ಅಧಿಕಾರಿಗಳೇ ರಿಯಲ್ ಎಸ್ಟೇಟ್ ಮಾಫಿಯಾ ಜೊತೆ ಕೈಜೊಡಿಸಿ, ಅಕ್ರಮ ಭೂ ವ್ಯವಹಾರಕ್ಕಿಳಿದಿರುವ ದೂರುಗಳಿದ್ದು, ಇದನ್ನು ಡಿಸಿಯವರು ಗಂಭೀರವಾಗಿ ಪರಿಗಣಿಸಬೇಕಾಗಿದೆ.

*** ನೂತನ ಎಸ್ಪಿ ಬಿ ನಿಖಿಲ್ ಅವರು, ಶಿವಮೊಗ್ಗ ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್ ಆಡಳಿತದ ಮಾತುಗಳನ್ನಾಡಿದ್ದಾರೆ. ಇದು ಸ್ವಾಗತಾರ್ಹ ಸಂಗತಿಯಾಗಿದೆ. ರಾಜ್ಯದಲ್ಲಿ ಅತೀ ಹೆಚ್ಚು ಅಪರಾಧ ಚಟುವಟಿಕೆಗಳು ವರದಿಯಾಗುವ ನಗರಗಳಲ್ಲೊಂದಾದ, ಕೋಮು ಸೂಕ್ಷ್ಮ ಪ್ರದೇಶವಾಗಿರುವ ಶಿವಮೊಗ್ಗ ನಗರದತ್ತ ಹೆಚ್ಚಿನ ಒತ್ತು ನೀಡಬೇಕಾಗಿದೆ. ಕಾನೂನು – ಸುವ್ಯಸ್ಥೆ ವಿಷಯದಲ್ಲಿ ಯಾವುದೇ ಲಾಬಿ – ಒತ್ತಡಕ್ಕೆ ಮಣೆ ಹಾಕಬಾರದಾಗಿದೆ. ನಾಗರೀಕರು ಭಯಮುಕ್ತರಾಗಿ, ನೆಮ್ಮದಿಯಾಗಿ ಜೀವನ ನಡೆಸುವ ವಾತಾವರಣ ಸೃಷ್ಟಿಸಬೇಕಾಗಿದೆ. ಶಿವಮೊಗ್ಗ ನಗರದ ಪ್ರಮುಖ ಪೊಲೀಸ್ ಠಾಣೆಗಳಲ್ಲಿನ ಸಿಬ್ಬಂದಿಗಳ ಕೊರತೆ, ಠಾಣಾ ವ್ಯಾಪ್ತಿಯ ಪ್ರದೇಶಗಳನ್ನು ವೈಜ್ಞಾನಿಕವಾಗಿ ಪರಿಷ್ಕರಣೆ ಮಾಡುವುದು, ಅಗತ್ಯವಿರುವೆಡೆ ಪೊಲೀಸ್ ಉಪ ಠಾಣೆಗಳ ಸ್ಥಾಪನೆ, ರಾತ್ರಿ ಗಸ್ತು ವ್ಯವಸ್ಥೆ ಬಿಗಿಗೊಳಿಸುವುದು. ಅಪರಾಧ ಚಟುವಟಿಕೆಗಳ ಪತ್ತೆಗೆ ವೇಗ ನೀಡುವುದು, ಬೀಟ್ – ಮೊಹಲ್ಲಾ ಸಭೆಗಳು ನಿಯಮಿತವಾಗಿ ನಡೆಯುವಂತೆ ಮಾಡುವುದು, ಸಂಚಾರಿ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ, ಕೋಮು ಸೌಹಾರ್ದತೆಗೆ ಒತ್ತು, ಗಾಂಜಾ ಹಾವಳಿಗೆ ಕಡಿವಾಣ ಸೇರಿದಂತೆ ಶಾಂತಿ – ಸುವ್ಯವಸ್ಥೆಗೆ ಭಂಗ ಉಂಟು ಮಾಡುವವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವತ್ತ ಚಿತ್ತ ಹರಿಸಬೇಕಾಗಿದೆ.

Shivamogga, January 02. The state government has made a sudden change in the administrative system of Shivamogga district. Simultaneously, it has appointed a new Deputy Commissioner and District Protection Officer for the district. Prabhuling Kavalikatti has been appointed as DC and B Nikhil as SP. The DC and SP have already taken charge and officially started their duties.

https://whatsapp.com/channel/0029VbBGVqQK5cD8ZBFH530x

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →