shimoga news | ಶಿವಮೊಗ್ಗ ನಗರದ ಪಾರ್ಕ್ ಗಳಲ್ಲಿ ‘ಕಿರು ಅರಣ್ಯ’ ಬೆಳೆಸುವತ್ತ ಹರಿಯುವುದೆ ಪಾಲಿಕೆ, ನಗರಾಭಿವೃದ್ದಿ ಪ್ರಾಧಿಕಾರದ ಚಿತ್ತ?

Shivamogga City: Towards Growing ‘Mini Forests’ in Parks — Focus of Municipality and Urban Development Authority? ಶಿವಮೊಗ್ಗ ನಗರದ ಪಾರ್ಕ್ ಗಳಲ್ಲಿ ‘ಕಿರು ಅರಣ್ಯ’ ಬೆಳೆಸುವತ್ತ ಹರಿಯುವುದೆ ಪಾಲಿಕೆ, ನಗರಾಭಿವೃದ್ದಿ ಪ್ರಾಧಿಕಾರದ ಚಿತ್ತ?

ಶಿವಮೊಗ್ಗ (shivamogga), ಫೆಬ್ರವರಿ 11: ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ‘ಮಲೆನಾಡ ನಗರಿ’ ಖ್ಯಾತಿಯ ಶಿವಮೊಗ್ಗದಲ್ಲಿ, ಪ್ರಾಕೃತಿಕ ಸಂಪತ್ತಿನ ವಿನಾಶವೂ ಕೂಡ ಏರುಗತಿಯಲ್ಲಿದೆ. ನಗರ ವ್ಯಾಪ್ತಿಯಲ್ಲಿ ಮರಗಿಡಗಳು, ಕೆರೆಕಟ್ಟೆಗಳು, ಕೃಷಿ ಭೂಮಿಗಳು ಕಣ್ಮರೆಯಾಗುತ್ತಿವೆ!

ಇದರಿಂದ ಶಿವಮೊಗ್ಗ ನಗರದ ಪ್ರಾಕೃತಿಕ ವ್ಯವಸ್ಥೆ ಏರುಪೇರಾಗುವಂತಾಗಿದೆ. ವರ್ಷದಿಂದ ವರ್ಷಕ್ಕೆ ನಗರದ ತಾಪಮಾನ ಹೆಚ್ಚಾಗುತ್ತಿದೆ. ಇದು ನಗರದ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುವಂತಾಗಿದೆ.

ನಗರದ ಪ್ರಾಕೃತಿಕ ವ್ಯವಸ್ಥೆಯಲ್ಲಿ ಸಮತೋಲನ ಕಾಯ್ದುಕೊಳ್ಳುವ ತುರ್ತು ಅಗತ್ಯ, ಅನಿವಾರ್ಯತೆಯಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಗಿಡಮರಗಳ ಹೆಚ್ಚೆಚ್ಚು ಬೆಳೆಸುವ, ಕೆರೆಕಟ್ಟೆಗಳನ್ನು ಉಳಿಸುವ ಯೋಜನೆಗಳು ಅನುಷ್ಠಾನವಾಗಬೇಕಾಗಿದೆ.

ಈ ನಿಟ್ಟಿನಲ್ಲಿ ನಗರದ  ವಿವಿಧ ಬಡಾವಣೆಗಳಲ್ಲಿ, ಪಾಳು ಬಿದ್ದ ಸ್ಥಿತಿಯಲ್ಲಿರುವ ಉದ್ಯಾನವನಗಳಲ್ಲಿ ಯಥೇಚ್ಛವಾಗಿ ಗಿಡಮರಗಳನ್ನು ಬೆಳೆಸುವ ಮೂಲಕ, ಕಿರು ಅರಣ್ಯಗಳಾಗಿ ಅಭಿವೃದ್ದಿಗೊಳಿಸುವ ಯೋಜನೆಗಳು ರೂಪಿಸಿ ಅನುಷ್ಠಾನಗೊಳಿಸಬೇಕಾಗಿದೆ.

ಮಿಯಾವಾಕಿ ಪ್ರಯೋಗವಾಗಲಿ : ಜಪಾನ್ ದೇಶದ ಸಸ್ಯ ತಜ್ಞ ಮಿಯಾವಾಕಿ ಅವರು ಕಡಿಮೆ ಜಾಗದಲ್ಲಿ ಅರಣ್ಯ ಬೆಳೆಸಿ ಯಶಸ್ಸು ಕಂಡಿದ್ದರು. ಇದನ್ನು ಮಿಯಾವಾಕಿ ಪ್ರಯೋಗವೆಂದೇ ವಿಶ್ವದಾದ್ಯಂತ ಯಶಸ್ವಿಯಾಗಿದೆ. ಕಡಿಮೆ ಜಾಗದಲ್ಲಿ ಕಿರು ಅರಣ್ಯ ಬೆಳೆಸುವ ಈ ಪ್ರಯೋಗ ಸದ್ಯ ನಗರ-ಪಟ್ಟಣಗಳಲ್ಲಿ ಸಾಕಷ್ಟು ಪ್ರಚಲಿತದಲ್ಲಿದೆ.

ಸದರಿ ಪ್ರಯೋಗವನ್ನು ಶಿವಮೊಗ್ಗ ನಗರದಲ್ಲಿಯೂ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಆಡಳಿತಗಳು ಚಿತ್ತ ಹರಿಸಬೇಕಾಗಿದೆ. ಪ್ರಸ್ತುತ ನಗರದಾದ್ಯಂತ ಭಾರೀ ದೊಡ್ಡ ಸಂಖ್ಯೆಯಲ್ಲಿ ಲೇಔಟ್ ಗಳು ನಿರ್ಮಾಣವಾಗುತ್ತಿದೆ. ಪ್ರತಿಯೊಂದು ಲೇಔಟ್ ನಲ್ಲಿಯೂ ಉದ್ಯಾನವನಗಳಿವೆ.

ಇಂತಹ ಪಾರ್ಕ್ ಗಳಲ್ಲಿ ಕೆಲವೆಡೆ ಮಿಯಾವಾಕಿ ಪದ್ದತಿಯಂತೆ ಕಿರು ಅರಣ್ಯಗಳನ್ನು ಬೆಳೆಸಲು ಮೀಸಲಿಡಬೇಕಾಗಿದೆ. ಇದರಿಂದ ನಾಗರದ ಪ್ರಾಕೃತಿಕ ವ್ಯವಸ್ಥೆಯ ಸಮತೋಲನದ ಜೊತೆಗೆ ನಾಗರಿಕರಿಗೆ ಶುದ್ಧ ಗಾಳಿ ದೊರಕುತ್ತದೆ. ಪಶುಪಕ್ಷಿಗಳಿಗೂ ಅನುಕೂಲವಾಗಲಿದೆ.

ಗಮನಹರಿಸಲಿ : ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಆಡಳಿತ ಹಾಗೂ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರಿಗಳು ಆದ್ಯ ಗಮನಹರಿಸಬೇಕಾಗಿದೆ. ಕಿರು ಅರಣ್ಯಗಳಿಂದ ಭವಿಷ್ಯದಲ್ಲಿ ಶಿವಮೊಗ್ಗ ನಗರಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂಬುವುದು ಪ್ರಜ್ಞಾವಂತ ನಾಗರೀಕರ ಅಭಿಪ್ರಾಯವಾಗಿದೆ.

04. commissionar  vishwanath p muddaggi
04. commissionar vishwanath p muddaggi

*** ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರಾಗಿರುವ ವಿಶ್ವನಾಥ್ ಪಿ ಮುದಜ್ಜಿ ಅವರು, ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರಾಗಿದ್ದ ವೇಳೆ ಮಿಯಾವಾಕಿ ಪದ್ದತಿಯಡಿ ದಾವಣಗೆರೆ ನಗರದ  ವಿವಿಧೆಡೆಯ ಪಾರ್ಕ್ ಗಳಲ್ಲಿ, ಅತ್ಯಂತ ಯಶಸ್ವಿಯಾಗಿ ಕಿರು ಅರಣ್ಯಗಳನ್ನು ಬೆಳೆಸುವ ಯೋಜನೆ ಕಾರ್ಯಗತಗೊಳಿಸಿ ಯಶಸ್ವಿಯಾಗಿದ್ದರು. ಅದೇ ಮಾದರಿಯಲ್ಲಿ ಶಿವಮೊಗ್ಗದಲ್ಲಿಯೂ ಪ್ರಾಧಿಕಾರದಿಂದ ಕಿರು ಅರಣ್ಯ ಬೆಳೆಸುವ ಕಾರ್ಯವನ್ನು ಆಯುಕ್ತರು ಮಾಡಬೇಕಾಗಿದೆ. ಪ್ರಸ್ತುತ ನಗರಾಭಿವೃದ್ದಿ ಪ್ರಾಧಿಕಾರದಿಂದ ನಗರಾದ್ಯಂತ ಪಾರ್ಕ್ ಗಳನ್ನು ಅಭಿವೃದ್ದಿಗೊಳಿಸಲಾಗುತ್ತಿದೆ. ಈ ವೇಳೆ ಕಿರು ಅರಣ್ಯ ಬೆಳೆಸುವ ಪರಿಸರ ಸ್ನೇಹಿ ಯೋಜನೆ ಕೂಡ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಗಮನಹರಿಸಬೇಕಾಗಿದೆ.

ಪರಿಸರ ಸಂರಕ್ಷಣೆ ಮತ್ತು ನಗರವನ್ನು ಸುಂದರ ಹಾಗೂ ಹಸಿರಾಗಿಸುವ ಉದ್ದೇಶದಿಂದ ರೂ.43 ಕೋಟಿ ವೆಚ್ಚದಲ್ಲಿ 15 ಕೆರೆಗಳನ್ನು ಸೂಡಾ ವ್ಯಾಪ್ತಿಯಲ್ಲಿ ಅಭಿವೃದ್ದಿಪಡಿಸಲಾಗುತ್ತಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ತಿಳಿಸಿದ್ದಾರೆ. ಬುಧವಾರ ನಗರದ ಪ್ರಿಯದರ್ಶಿನಿ ಬಡಾವಣೆಯಲ್ಲಿ ಬರುವ ಆಲ್ಕೊಳ ಗ್ರಾಮದ ಸರ್ವೇ ನಂ 110 ರ ಕೆರೆ ಪ್ರದೇಶದಲ್ಲಿ ಕೆರೆ ಅಭಿವೃದ್ದಿ ಕಾಮಗಾರಿಗಳ ಮಾಹಿತಿಯನ್ನು ಹಂಚಿಕೊಂಡು ಅವರು ಮಾತನಾಡಿದರು. ಕೆರೆಯಲ್ಲಿ ಹೂಳು ತೆಗೆಸಿ, ಸುತ್ತಲೂ ಬೇಲಿ ಹಾಕಿಸಿ, ಬಂಡಿಂಗ್ ಮಾಡುವುದು, ಜೊತೆಗೆ ಕೆರೆ ಸುತ್ತಲೂ ಗಿಡಗಳನ್ನು ನೆಡಲಾಗುವುದು. ಮಕ್ಕಳಿಗೆ ಆಟಿಕೆಗಳನ್ನು ಅಳವಡಿಸಲಾಗುವುದು. ಚರಂಡಿ ನೀರು ಕೆರೆಗಳಿಗೆ ಬರುವುದನ್ನು ತಪ್ಪಿಸಲು ಕ್ರಮ ವಹಿಸಲಾಗುವುದು. ಕೆಲವು ಕೆರೆಗಳನ್ನು ಐಲ್ಯಾಂಡ್ ಮಾದರಿಯಲ್ಲಿ ಅಭಿವೃದ್ದಿಪಡಿಸಲಾಗುವುದು. ಈ ಕೆರೆಗಳ ಅಭಿವೃದ್ದಿಯಿಂದ ಪರಿಸರ ಸಂರಕ್ಷಣೆಯೊಂದಿಗೆ ಅಂತರ್ಜಲ ಮಟ್ಟವೂ ಹೆಚ್ಚಲಿದೆ. ವಾತಾವರಣವೂ ಉತ್ತಮವಾಗಿರಲಿದೆ ಎಂದು ತಿಳಿಸಿದರು.

Shivamogga City: Towards Growing ‘Mini Forests’ in Parks — Focus of Municipality and Urban Development Authority?

Shivamogga, February 11: In the rapidly developing city of Shivamogga, known as the ‘Malnad City,’ the destruction of natural resources is also on the rise. Within the city limits, trees, lakes, and agricultural lands are disappearing!

As a result, the city’s natural ecosystem is being disturbed. Year after year, the city’s temperature is increasing, which is having a serious impact on the lives of its residents.

There is an urgent and unavoidable need to maintain balance in the city’s natural system. In this context, projects to grow more trees and preserve lakes must be implemented.

In this direction, plans should be formulated and executed to grow trees abundantly in various neighborhoods of the city, especially in parks that are lying unused, thereby developing them into mini forests.

In this direction, plans should be formulated and executed to grow trees abundantly in various neighborhoods of the city, especially in parks that are lying unused, thereby developing them into mini forests.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →