shimoga news | ಶಿವಮೊಗ್ಗ : ಕಾರಿನ ಗಾಜು ಹಾನಿಗೊಳಿಸಿ ಪರಾರಿಯಾದ ಕಿಡಿಗೇಡಿ!

ಶಿವಮೊಗ್ಗ : ಕಾರಿನ ಗಾಜು ಹಾನಿಗೊಳಿಸಿ ಪರಾರಿಯಾದ ಕಿಡಿಗೇಡಿ! ಶಿವಮೊಗ್ಗ, ಮಾರ್ಚ್ 04: ಮನೆ ಬಳಿ ನಿಲ್ಲಿಸಿದ್ದ ಸ್ವಿಫ್ಟ್ ಕಾರಿನ ಗಾಜನ್ನು ರಾಡ್ ನಿಂದ ಹೊಡೆದು ಹಾನಿಗೊಳಿಸಿರುವ ಘಟನೆ ಶಿವಮೊಗ್ಗ ನಗರದ ದೊಡ್ಡಮನೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಮನೆ ಬಡಾವಣೆಯಲ್ಲಿ ಮಾರ್ಚ್ 03 ರ ರಾತ್ರಿ ನಡೆದಿದೆ. ಹೊಸಮನೆಯ ಹಂದಿ ಜೋಗಿ ಕ್ಯಾಂಪ್ ನಲ್ಲಿ ಘಟನೆ ನಡೆದಿದೆ. ಸುರೇಶ್ ಎಂಬುವರಿಗೆ ಸದರಿ ಕಾರು ಸೇರಿದ್ದಾಗಿದೆ. ಕಿಡಿಗೇಡಿಯ ದಾಳಿಯಿಂದ ಸಾವಿರಾರು ರೂ. ಹಾನಿಯಾಗಿದೆ. ಏನಾಯ್ತು? : ಬೈಕ್ ನಲ್ಲಿ ಇಬ್ಬರು ಕಿಡಿಗೇಡಿಗಳು ಆಗಮಿಸಿದ್ದಾರೆ. ಈ ವೇಳೆ ಮುಸುಕುಧಾರಿ ಯುವಕನೋರ್ವ ರಾಡ್ ನಿಂದ ಕಾರಿನ ಮುಂಭಾಗ ಹಾಗೂ ಪಕ್ಕದ ಗಾಜುಗಳನ್ನು ಪುಡಿಗಟ್ಟಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಘಟನೆಯ ದೃಶ್ಯಾವಳಿ ಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾರಿನ ಗಾಜು ಪುಡಿಗಟ್ಟಲು ಕಾರಣವೇನು? ಎಂಬಿತ್ಯಾದಿ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮಕೈಗೊಂಡಿದ್ದಾರೆ.

ಶಿವಮೊಗ್ಗ (shivamogga), ಮಾರ್ಚ್ 04: ಮನೆ ಬಳಿ ನಿಲ್ಲಿಸಿದ್ದ ಸ್ವಿಫ್ಟ್ ಕಾರಿನ ಗಾಜನ್ನು ರಾಡ್ ನಿಂದ ಹೊಡೆದು ಹಾನಿಗೊಳಿಸಿರುವ ಘಟನೆ, ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಶರಾವತಿ ನಗರದ ಹಂದಿ ಜೋಗಿ ಕ್ಯಾಂಪ್ ನಲ್ಲಿ ಮಾರ್ಚ್ 03 ರ ರಾತ್ರಿ ನಡೆದಿದೆ.

ಸುರೇಶ್ ಎಂಬುವರಿಗೆ ಸದರಿ ಕಾರು ಸೇರಿದ್ದಾಗಿದೆ. ಕಿಡಿಗೇಡಿಯ ದಾಳಿಯಿಂದ ಸಾವಿರಾರು ರೂ. ಹಾನಿಯಾಗಿದೆ. ಈ ಕುರಿತಂತೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಏನಾಯ್ತು? : ಬೈಕ್ ನಲ್ಲಿ ಇಬ್ಬರು ಕಿಡಿಗೇಡಿಗಳು ಆಗಮಿಸಿದ್ದಾರೆ. ಈ ವೇಳೆ ಮುಸುಕುಧಾರಿ ಯುವಕನೋರ್ವ ರಾಡ್ ನಿಂದ ಕಾರಿನ ಮುಂಭಾಗ ಹಾಗೂ ಪಕ್ಕದ ಗಾಜುಗಳನ್ನು ಪುಡಿಗಟ್ಟಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಘಟನೆಯ ದೃಶ್ಯಾವಳಿ ಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾರಿನ ಗಾಜು ಪುಡಿಗಟ್ಟಲು ಕಾರಣವೇನು? ಎಂಬಿತ್ಯಾದಿ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮಕೈಗೊಂಡಿದ್ದಾರೆ.

Shivamogga: Miscreants damage car glass and flee!
Shivamogga, March 04: An incident occurred on the night of March 03 in Hosamane Layout, under the Doddamane Police Station limits of Shivamogga city, where miscreants smashed the glass of a Swift car parked near a house using an iron rod.
The incident took place near the pig-rearing camp in Hosamane. The car belongs to a person named Suresh. Due to the attack, damages worth several thousand rupees have been reported.
What happened? Two miscreants arrived on a bike. At that time, one of them, who was masked, smashed the front and side windows of the car with a rod and fled the spot, according to local residents.
The visuals of the incident were captured on the CCTV camera installed at the house and have gone viral on social media. The reason behind smashing the car glass is yet to be known. Police have initiated steps to trace the accused.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *