bhadravati news | ಭದ್ರಾವತಿ : ಸೇತುವೆ ಮೇಲಿಂದ ಬೈಕ್ ಸಮೇತ ಚಾನಲ್ ನೀರಿಗೆ ಬಿದ್ದ ಯುವಕನ ರಕ್ಷಣೆ!

Bhadravati: Youth Rescued After Falling With Bike Into Canal From Bridge!ಭದ್ರಾವತಿ : ಸೇತುವೆ ಮೇಲಿಂದ ಬೈಕ್ ಸಮೇತ ಚಾನಲ್ ನೀರಿಗೆ ಬಿದ್ದ ಯುವಕನ ರಕ್ಷಣೆ!

ಭದ್ರಾವತಿ (bhadravathi), ಮಾರ್ಚ್ 10: ಚಾಲನೆಯ ನಿಯಂತ್ರಣ ಕಳೆದುಕೊಂಡ ಬೈಕ್ ಸವಾರನೋರ್ವ, ಸೇತುವೆ ಮೇಲಿಂದ ಚಾನಲ್ ನೀರಿಗೆ ಬೈಕ್ ಸಮೇತ ಬಿದ್ದ ಘಟನೆ ಭದ್ರಾವತಿ ನಗರದ ಹುತ್ತ ಕಾಲೋನಿಯ ಫಿಶ್ ಮಾರುಕಟ್ಟೆ ಸಮೀಪ ಮಾರ್ಚ್ 09 ರ ರಾತ್ರಿ ನಡೆದಿದೆ.

ಕಳೆದ ಕೆಲ ದಿನಗಳಿಂದ ಸೇತುವೆ ಕಾಮಗಾರಿ ನಡೆಸಲಾಗುತ್ತಿದೆ. ಸದರಿ ಸ್ಥಳದ ಬಳಿ ವೇಗವಾಗಿ ಬೈಕ್ ಚಾಲನೆ ಮಾಡಿಕೊಂಡು ಬಂದಿದ್ದು, ಈ ವೇಳೆ ನಿಯಂತ್ರಣ ತಪ್ಪಿ ಚಾನಲ್ ಗೆ ಸವಾರ ಬಿದ್ದಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಪೊಲೀಸ್ ತುರ್ತು ವಾಹನ ಇಆರ್’ವಿ – 112 ಸಿಬ್ಬಂದಿಗಳಾದ ಮಲ್ಲಿಕಾರ್ಜುನ್ ಹಾಗೂ ಪ್ರವೀಣ್ ರವರು ಸ್ಥಳಕ್ಕಾಗಮಿಸಿದ್ದಾರೆ. ಚಾನಲ್ ನಲ್ಲಿ ಬಿದ್ದ ಯುವಕನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದರಿ ಸಿಬ್ಬಂದಿಗಳ ಸಕಾಲಿಕ ಕ್ರಮಕ್ಕೆ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ ಅವರು ಅಭಿನಂದಿಸಿದ್ದಾರೆ.

Bhadravati: Youth Rescued After Falling With Bike Into Canal From Bridge!

Bhadravati, March 10: A bike rider lost control and fell along with his bike into a canal from a bridge near the Fish Market in Hutta Colony, Bhadravati city, on the night of March 9.

Bridge construction work has been ongoing in the area. The rider, who was speeding near the site, lost control and fell into the canal.

Upon receiving information, ERV–112 emergency police staff Mallikarjun and Praveen rushed to the spot. They rescued the youth from the canal and admitted him to the hospital. District Rescue Officer Nikhil B congratulated the staff for their timely action.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *